ಕಲಬುರಗಿ: ಎ.14: ಕರ್ನಾಟಕ ರಾಜ್ಯದ ನಂದಿನಿ ಹಾಲನ್ನು ಬೇರೆ ರಾಜ್ಯದ ಅಮೂಲ್ಯ ಜೊತೆ ಕೇಂದ್ರ ಸರ್ಕಾರ ವಿಲೀನ ಮಾಡುವದನ್ನು ಕೈ ಬಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕ ಪ್ರವೀಣ ಶೆಟ್ಟ ಬಣ ಜಿಲ್ಲಾ ಅಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಸಾಮಾನ್ಯ ಜನರ ಮತ್ತು ರೈತರ ಮನೆ ಮಾತಾಗಿರುವ ನಂದಿನಿ ಕೆ.ಎಮ್.ಎಫ್. ಈಗಾಗಲೇ ಸಾಕಷ್ಟು ಬಡ ರೈತರಿಗೆ ಮತ್ತು ಅನೇಕ ಕೂಲಿ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಈಗ ಕೇಂದ್ರ ಸರ್ಕಾರದ ಗೃಹ ಮಂತ್ರಿಗಳಾದ ಅಮಿತ್ ಶಾ ಅವರ ಏಕ ಏಕಿಯಾಗಿ ಅಮೂಲ್ ಹಾಲು, ಮೊಸರನ್ನು ರಾಜ್ಯದಲ್ಲಿ ಪರಿಚಿಸುವ ಸಲುವಾಗಿ ಕನ್ನಡಿಗರ ಮೇಲೆ ಒತ್ತಾಯವನ್ನು ಹೇರಿ ಸಂಪೂರ್ಣ ಬೆಂಬಲ ಕೊಟ್ಟು ವಿಲೀನ ಮಾಡುತ್ತಿದ್ದು, ಕೂಡಲೇ ಕೇಂದ್ರ ಸರಕಾರದ ನಂದಿಸಿ ಕಂಪನಿಯಲ್ಲಿ ಅಮೂಲ್ ವಿಲೀನ ಮಾಡುವದು ನಿಲ್ಲಸಬೇಕು. ಇಲ್ಲದಿದ್ದರೆ ಕರವೇಯು ಕೇಂದ್ರ ಸರಕಾರದ ವಿರುದ್ಧ ಹಾಗೂ ರಾಜ್ಯ ಸರಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಲು ಸಿದ್ದವಾಗಿದ್ದೆವೆಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಹಾಲು ಮಹಾ ಮಂಡಳ ಕೆ.ಎಂ.ಎಫ್. ರಾಜ್ಯದ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ರಾಜ್ಯ ಹಾಗೂ ಹೋರ ರಾಜ್ಯಗಳಿಗೆ ಪೂರೈಸುತ್ತಿದೆ, ಕೆ.ಎಂ.ಎಫ್. ಹಾಲು ಅಮೂಲ್ ಜೊತೆ ವಿಲೀನ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿ ಕೇಂದ್ರ ಗೃಹ ಸಚಿವರ ಅಮಿತ ಶಾ ಈ ವಿಷಯ ಇಲ್ಲಿಗೆ ಬೀಡಬೇಕು ಇಲ್ಲದಿದ್ದರೆ ರಾಜ್ಯಾದಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಶೀವಾನಂದ ಮೇತ್ರೆ, ಅಫಜಲಪುರ ತಾಲ್ಲೂಕು ಕಾರ್ಮಿಕರ ಘಟಕ ಅಧ್ಯಕ್ಷ ಶ್ರೀಕಾಂತ ಡಿ ಪದಕಿ, ಆಳಂದ ತಾಲ್ಲೂಕ ಅಧ್ಯಕ್ಷ ಮದಾರ್ ಶೇಕ, ತಾಲ್ಲೂಕು ಉಪಾಧ್ಯಕ್ಷ ತಯಾಬ ಅನ್ಸಾರಿ ಹಾಗೂ ಕ.ರ.ವೇ.ಕಾರ್ಯಕರ್ತರು ಇದ್ದರು.