“ನಂದಿನಿ ಸಿಹಿ ಉತ್ಸವ” ಶೇ 10 ರಿಯಾಯಿತಿಯಲ್ಲಿ ಮಾರಾಟ

ಬಳ್ಳಾರಿ 28 : ನಗರದ ಪಾಂಡುರಂಗ ದೇವಸ್ಥಾನದ ಎದರುಗಡೆ ಇರುವ ನಂದಿನಿ ಎ.ಟಿ.ಎಂ ಪಾರ್ಲರ್ ಆವರಣದಲ್ಲಿ “ನಂದಿನಿ ಸಿಹಿ ಉತ್ಸವ”ಕಾರ್ಯಕ್ರಮವನ್ನು ಇಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕ ಜಿ.ವೀರಶೇಖರರೆಡ್ಡಿ ಉದ್ಘಾಟನೆ ಮಾಡಿದರು.
ಸಮಾರಂಭದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ.ತಿರುಪತಪ್ಪ ಇವರು ನಂದಿನಿ ಸಿಹಿ ಉತ್ಸವದ ಬಗ್ಗೆ ಪರಿಚಯಿಸುತ್ತಾ ರಾಜ್ಯಾದ್ಯಾಂತ 14 ಒಕ್ಕೂಟಗಳಿದ್ದು ಕ.ಹಾ.ಮ ದಿಂದ ಎಲ್ಲಾ ಒಕ್ಕೂಟಗಳಲ್ಲೂ ಕಳೆದ 14 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆಂದರು.
ಡಿ 24 ರಿಂದ ಜ 7 ವರೆಗೆ ಈ ಉತ್ಸವ ಜಾರಿಯಲ್ಲಿರುತ್ತದೆ. ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ನಂದಿನಿ ಉತ್ಪನ್ನಗಳಿದ್ದು, ಈ ಅವಧಿಯ ಲ್ಲಿ “ನಂದಿನಿ ಸಿಹಿ” ಉತ್ಪನ್ನಗಳ ಜೊತಗೆ“ನಂದಿನಿ ಚೀಸ್ ಉತ್ಪನ್ನಗಳಿಗೂ ಸಹ ಶೇ 10 ರಿಯಾಯಿತಿ ಇರುತ್ತದೆಂದರು.
ಇದರಿಂದ ನೆಚ್ಚಿನ ನಂದಿನಿ ಗ್ರಾಹಕರನ್ನು ಸಂತೃಪ್ತಿ‌ಪಡಿಸುವುದು ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಬಳ್ಳಾರಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ .ಎಸ್.ವೆಂಕಟೇಶ ಗೌಡ ಅವರು, ನಂದಿನಿ ಹಾಲಿನ ಬಗ್ಗೆ ವಿವರಣೆ ನೀಡುತ್ತಾ ಒಕ್ಕೂಟಕ್ಕೆ ಲಾಭ ಮಾಡುವುದೇ ಮುಖ್ಯ ಉದ್ದೇಶವಾಗಿರದೇ, ರೈತರ ಹಿತ ರಕ್ಷಣೆ ಮಾಡುವುದಲ್ಲದೇ ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ. ಆದರೆ ಖಾಸಗಿ ಡೇರಿಯವರಿಗೆ ಲಾಭಮಾಡುವುದೇ ಮುಖ್ಯ ಉದ್ದೇಶವಾಗಿರುತ್ತದೆ. ನಂದಿನಿ ಹಾಲು ಮತ್ತು ಕಲಬೆರಕೆ ಹಾಲಿನ ವ್ಯತ್ಯಾಸದ ಬಗ್ಗೆ ವಿವರಣೆ ನೀಡುತ್ತಾ, ಕಲಬೆರಕೆ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆಂದರು.
ಬೂದುಗುಂಪ ಡೇರಿ ಘಟಕದಲ್ಲಿ ಉತ್ಪಾದಿಸಲಾಗುತ್ತಿರುವ ನಂದಿನಿ ತೃಪ್ತಿ ಹಾಲನ್ನು ರೆಫ್ರಿಜರೇಟರ್‍ಸ ಸಹಾಯವಿಲ್ಲದೇ 90 ದಿನಗಳ ಕಾಲ ತೆರೆದ ಜಾಗದಲ್ಲಿ ಕೆಡದಂತೆ ಇಡಲು ಅವಕಾಶವಿರುವುದರಿಂದ ನಂದಿನಿ ತೃಪ್ತಿಹಾಲನ್ನು ಸಹ ಉಪಯೋಗಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ .ಡಿ.ದಾಸನಗೌಡ,ಉಪ ವ್ಯವಸ್ಥಾಪಕರು ಹಾಗೂ ಕ.ಹಾ.ಮ ದ ಬಳ್ಳಾರಿ ಡಿಪೋ ಇನ್‍ಚಾರ್ಜ್ .ತಿಪ್ಪೇಸ್ವಾಮಿ ಉಪಸ್ಥತರಿದ್ದರು. ಕಾರ್ಯಕ್ರಮವನ್ನು ಮಾರುಕಟ್ಟೆ ಸಮಾಲೋಚಕ . ಸಿ.ಎನ್.ಮಂಜುನಾಥ, ಕೆ.ಬಾಬು ಮತ್ತು .ಹೆಚ್.ವೀರೇಶ್‍ಇವರು ಆಯೋಜಿಸಿದ್ದರು.