
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.15: ಬಳ್ಳಾರಿಯ ಡೇರಿಯ ಮುಖ್ಯದ್ವಾರದ ಪಕ್ಕದಲ್ಲಿರುವ ಶ್ರೀಮತಿ ಎಸ್.ಬಸಮ್ಮ ಇವರ ನಂದಿನಿ ಕ್ಷೀರಮಳಿಗೆ(ಪಾರ್ಲರ್) ಆವರಣದಲ್ಲಿ “ನಂದಿನಿ ಸಿಹಿ ಉತ್ಸವ” ಕಾರ್ಯಕ್ರಮವನ್ನು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಎಂ.ರವೀಂದ್ರ ಹಾಗೂ ನಿದೇಶಕರಾದ ಎನ್.ಧನಂಜಯ ಹಮಲ್ ಇವರಿಂದ ಉದ್ಘಾಟನೆ ಮಾಡಲಾಯಿತು. ಉಪಾಧ್ಯಕ್ಷರು ಮಾತನಾಡಿ, ನಂದಿನಿ ಸಿಹಿ ಉತ್ಸವದ ಬಗ್ಗೆ ಪರಿಚಯಿಸುತ್ತಾ ರಾಜ್ಯಾದ್ಯಾಂತ 16 ಒಕ್ಕೂಟಗಳಿದ್ದು ಕಹಾಮ ವತಿಯಿಂದ ಎಲ್ಲಾ ಒಕ್ಕೂಟಗಳಲ್ಲೂ ಕಳೆದ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸದರಿ ಉತ್ಸವವು ದಿನಾಂಕ: 15.08.2023 ರಿಂದ 20.09.2023 ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ನಂದಿನಿ ಉತ್ಪನ್ನಗಳಿದ್ದು, ಈ ಅವಧಿಯ ಸಿಹಿ ಉತ್ಸವದಲ್ಲಿ “ನಂದಿನಿ ಸಿಹಿ” ಉತ್ಪನ್ನಗಳಿಗೆ 20% ರಿಯಾಯಿತಿ ನೀಡಲಾಗುತ್ತಿದೆ. ಇದರ ಉದ್ದೇಶ ಪ್ರತಿಯೊಬ್ಬ ಗ್ರಾಹಕರಿಗೂ ನಂದಿನ ಉತ್ಪನ್ನಗಳ ಬಳಕೆ ಮಾಡಲು ಉತ್ತೇಜನ ನೀಡುವುದಾಗಿರುತ್ತದೆ. ಉದಾಹರಣೆಗೆ ಮೈಸೂರಿನ ಮೈಸೂರ್ ಪಾಕ್, ಧಾರವಾಡದ ಧಾರವಾಡ ಪೇಡಾ, ಬೆಳಗಾಂನ ಬೆಳಗಾಂ ಕುಂದ, ಏಲಕ್ಕಿ ಪೇಡಾ, ಬಾದಾಮ್ ಪೇಡಾ, ಬೆಸನ್ ಲಡ್ಡು, ಸಿರಿಧಾನ್ಯ ಲಾಡು ಮತ್ತು ಇತರೆ ಸಿಹಿ ಉತ್ಪನ್ನಗಳನ್ನು ಒಕ್ಕೂಟದ ಎಲ್ಲಾ ಶಾಫಿ/ಎ.ಟಿ.ಎಂ. ಪಾರ್ಲರ್/ಕ್ಷೀರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನೆಚ್ಚಿನ ನಂದಿನಿ ಗ್ರಾಹಕರನ್ನು ಸಂತೃಪ್ತಿ ಪಡಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಪ್ರಯುಕ್ತ ಮೇಲ್ಕಂಡ ನಿಗದಿತ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿಸಲು ತಿಳಿಯಪಡಿಸಿದರು.
ಒಕ್ಕೂಟದ ಪ್ರ.ವ್ಯವಸ್ಥಾಪಕ ನಿರ್ದೇಶಕರಾದ ಜಿ.ಬಿ.ಉದಯಕುಮಾರ ಮತ್ತು ಒಕ್ಕೂಟದ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ವೆಂಕಟೇಶ ಗೌಡ ಮಾತನಾಡಿ, ಕಹಾಮವು ಹಾಲು(ಶೇಖರಣೆ-ಸಂಸ್ಕರಣೆ-ಮಾರುಕಟ್ಟೆ) ಮೂಲಕ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು “ಗೋವಿನಿಂದ ಗ್ರಾಹಕರವರಗೆ ಗುಣಮಟ್ಟದ ಶ್ರೇಷ್ಠತೆ” ಎಂಬ ಧ್ಯೇಯವಾಕ್ಯ ಹೊಂದಿ ನಿರಂತರವಾಗಿ ಈ ನಿಟ್ಟಿನಲ್ಲಿ ಪರಿಶ್ರಮಿಸುತ್ತಿದೆ. ಸರಿಸಾಟಿಯಿಲ್ಲದ ಉತ್ತಮ ಗುಣಮಟ್ಟದ ಹಾಲ ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ರ್ರಾಂಡ್ ಹೆಸರಿನಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಿ “ಸಮೃದ್ದ ಆರೋಗ್ಯವನ್ನು ಹರಡುತ್ತಿದೆ” ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್.ಎಸ್.ಲಿಂಗಪ್ಪ, ಉ.ವ್ಯ(ಆ), ಡಾ||ಶಂಬು ಕುಮಾರ್ ಉ.ವ್ಯ, ಟಿ.ಮಲ್ಲಿಕಾರ್ಜುನ, ಸ.ವ್ಯ, ಶ್ರೀಮತಿ ಕೆ.ಆರ್.ಇಂದುಕಲಾ, ಸ.ವ್ಯ(ಮಾ), ವಿ.ತಿಪ್ಪೇರುದ್ರ, ಖ/ಉ ಅದೀಕ್ಷಕರು, ನೂರ್ ಮಹಮ್ಮದ್, ಮಾ.ಸ.ದ-2, ಕ.ಹಾ.ಮ.ದ ಬಳ್ಳಾರಿ ಡಿಪೋ ಇನ್‍ಚಾರ್ಜ್ ಆದ ತಿಪ್ಪೇಸ್ವಾಮಿ ಇವರು ಉಪಸ್ಥ್ಥಿತರಿದ್ದರು. ಸದರಿ ಕಾರ್ಯಕ್ರಮವನ್ನು ಮಾರುಕಟ್ಟೆ ವಿಭಾಗದ ಸಿಬ್ಬಂದಿಗಳಾದ ಸಿ.ಎನ್. ಮಂಜುನಾಥ, ಬಾಬು ಬಿ. ಮತ್ತು ನಂದಿನಿ ಕ್ಷೀರಮಳಿಗೆ ಡೀಲರ್ ಆದ ಶ್ರೀಮತಿ ಎಸ್.ಬಸಮ್ಮ ಇವರು ಆಯೋಜಿಸಿ ಯಶಸ್ವಿಗೊಳಿಸಿದರು.