ನಂದಿನಿ ನಾಶಕ್ಕೆ ಅಮುಲ್ ಸಂಚು ಆರೋಪ

ಕೋಲಾರ,ಏ,೧೧-ಅಮುಲ್ ನೆಪದಲ್ಲಿ ರೈತಾಪಿ ವರ್ಗದ ಹೈನುಗಾರಿಕೆಯಾದ ನಂದಿನಿಯನ್ನು ನಿರ್ಮೂಲನೆಗೆ ಸಂಚು ರೂಪಿಸಿರುವ ಬಿಜೆಪಿ ಪಕ್ಷದ ನಡೆ ಕರ್ನಾಟಕ ಪ್ರಾಂತ ರೈತ ಸಂಘವು ತೀವ್ರವಾಗಿ ಖಂಡಿಸಿದೆ.
ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಪತ್ರಿಕಾ ಹೇಳಿಕೆಯಲ್ಲಿ ಇಡೀ ದೇಶದಲ್ಲೇ ಹೈನುಗಾರಿಕೆ ಉತ್ಪಾದನೆ ಹಾಗೂ ಸಹಕಾರಿ ಸಂಸ್ಕರಣೆ ಅನುಪಾತ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದ ರೈತಾಪಿ ಹೈನುಗಾರಿಕೆಯನ್ನು ಸರ್ವನಾಶ ಮಾಡಲು ಮುಂದಾಗಿದೆ ಎಂದು ಅಸಮಾಧನ ವ್ಯಕ್ತ ಪಡೆಸಿದ್ದಾರೆ.
ಕೆಎಂಎಫ್ ನಂತಹ ಸಹಕಾರಿ ಸಂಸ್ಥೆಗಳನ್ನು ನಾಶ ಮಾಡಿ ಕೇಂದ್ರೀಕರಣವನ್ನು ಉತ್ತೇಜಿಸುವುದು ಹಾಗೂ ಕಾರ್ಪೋರೇಟೀಕರಣ ಸಾಧಿಸುವುದು ಗ್ರಾಮೀಣ ನಿರುದ್ಯೋಗ ಮತ್ತು ಬಡತನವನ್ನು ತೀವ್ರಗೊಳಿಸುತ್ತದೆ ಹಾಗೂ ವಲಸೆ ಮತ್ತು ಆತ್ಮಹತ್ಯೆಗಳನ್ನು ಹೆಚ್ಚಿಸುತ್ತದೆ ಎಂದು ಕಳವಳ ವ್ಯಕ್ತ ಪಡೆಸಿದ್ದಾರೆ.
ದೊಡ್ಡದಾಗಿ ಆತ್ಮ ನಿರ್ಭರತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಸರ್ಕಾರ , ಕೃಷಿ ಉತ್ಪನ್ನಗಳ ಖಾತರಿ ಖರೀದಿಯ ಮಾದರಿ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ಈ ಬಗ್ಗೆ ರಾಜ್ಯದ ಜನರಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದರು. .