
ಕೋಲಾರ,ಏ,೮- ನಂದಿನಿ ಕನ್ನಡಿಗರ ಸ್ವತ್ತು,ಅದಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ರಕ್ತದ ಕ್ರಾಂತಿ ಅಗಲಿದೆ. ನಂದಿನಿಯನ್ನು ಗುಜರಾತ್ ಮಾರ್ವಡಿಗಳಿಗೆ ಮಾರಲು ಕನ್ನಡಿಗರು ತಯಾರಿಲ್ಲ. ರಾಜ್ಯದಲ್ಲಿ ಕೋಟ್ಯಾಂತರ ರೈತರ ಜೀವನಾಡಿಯಾಗಿರುವ ನಂದಿನಿಯನ್ನು ಬಿಟ್ಟು ಕೊಡಲು ಕನ್ನಡಿಗರು ಯಾವೂದೇ ಕಾರಣಕ್ಕೆ ಸಿದ್ದರಿಲ್ಲ
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಷ್ಟ್ರದ ಸಹಕಾರಿ ಸಚಿವ ಅಮಿತ್ ಶಾ ಅವರುಗಳು ಏನಾದರೂ ಮಾಡಿ ಕರ್ನಾಟಕದ ನಂದಿನಿಯನ್ನು ಗುಜರಾತ್ ಅಮುಲ್‌ನಲ್ಲಿ ವಿಲೀನ ಮಾಡಲು ಮುಂದಾಗಿರುವ ಹುನ್ನಾರಗಳು ಬಿರುಸಾಗಿ ತೆರೆಯ ಹಿಂದೆ ನಡೆಯುತ್ತಿದೆ.ಇದರಿಂದಾಗಿ ನಂದಿನಿ ಬ್ರಾಂಡ್ ಹಾಗೂ ಕೆ.ಎಂ.ಎಫ್ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಮಾಯವಾಗಲಿದೆ, ಮುಂದಿನ ದಿನಗಳಲ್ಲಿ ಗುಜರಾತ್ ಅಮುಲ್ ಉತ್ಪನ್ನಗಳೆ ರಾರಾಜಿಸಲಿದೆ. ಇದರಿಂದ ಹೈನುದ್ಯಮದ ಮೇಲೆ ಮೇಲೆ ಭಾರಿ ಹೊಡೆತ ಬೀಳುವ ಸಂಭವವಿದ್ದು ಇದಕ್ಕೆ ಅವಕಾಶ ನೀಡದಂತೆ ಕನ್ನಡಿಗರಿಗೆ ಮತ್ತು ರೈತರಿಗೆ ದೊಡ್ಡ ಮಟ್ಟದ ಹೋರಾಟಗಳು ಅನಿವಾರ್ಯವಾಗಲಿದೆ.
ಗುಜರಾತ್ ಮಾಡೆಲ್ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ಅದರೆ ನಮ್ಮೊರಲ್ಲಿ ಗೊಲ್‌ಗಪ್ಪ, ಪಾನಿಪೂರಿ ಮಾರುವವರೆಲ್ಲಾ ಗುಜರಾತಿಗಳೇ ನಮ್ಮ ಭಾಗದ ಜನಕ್ಕೆ ಇಂಥ ಉದ್ಯಮದ ಅವಶ್ಯಕತೆ ಇಲ್ಲ. ಕನ್ನಡಿಗರು ಏನಿದ್ದರೂ ಕೊಡುವವರೇ ಹೊರತು ಬೇಡುವವರಲ್ಲ
ಬೆಂಗಳೂರಿನಲ್ಲಿ ಈಗಾಗಲೇ ಅಮುಲ್ ಉದ್ಯಮ ವಿಸ್ತರಣೆಗೆ ಮುಂದಾಗಿದೆ.ನಂದಿನಿಯನ್ನು ಅಮುಲ್ ಜೂತೆ ವಿಲೀನಕ್ಕೆ ಮುಂದಾಗಿದ್ದರೂ ಸಾಧ್ಯವಾಗಲಿಲ್ಲ ಎಂದು ಈಗಾ ನಂದಿನಿ ವಿರುದ್ದ ಅಮುಲ್ ಬೆಂಗಳೂರಿನಲ್ಲಿ ಮಾರುಕಟ್ಟೆ ಅರಂಭಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಆತಂಕಕಾರಿಯಾಗಿದೆ. ಅಮುಲ್ ವಹಿವಾಟು ವಿಸ್ತಾರಣೆ ಅದಲ್ಲಿ ನಂದಿನಿ ಉತ್ಪಾದನೆ ಕುಂಠಿತವಾಗಲಿದೆ.
ಗುಜರಾತ್ ಅಮುಲ್ ಸಂಸ್ಥೆ ಬೆಂಗಳೂರಿನಲ್ಲಿ ಹಾಲಿನ ವ್ಯವಹಾರಕ್ಕೆ ಇಳಿದಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಬಿಸಿ.ಬಿಸಿ ಚರ್ಚೆಗಳಾಗುತ್ತಿದೆ.
ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕ್‌ಗಳನ್ನು,ಕೈಗಾರಿಕೆಗಳನ್ನು ಬಹುತೇಕ ಮಣ್ಣು ಮುಕ್ಕಿಸಿದ್ದಾಯಿತು. ಈಗಾ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಅಪೋಷನ ತೆಗೆದು ಕೊಳ್ಳಲು ಡಬಲ್ ಇಂಜಿನ್ ಸರ್ಕಾರಗಳು ಸಂಚು ರೂಪಿಸಲಾಗುತ್ತಿದೆ ಎಂಬ ವರದಿಗಳು ಕೇಳಿ ಬರುತ್ತಿದೆ.
ಅಮುಲ್ ಕುಟುಂಬ ಬೆಂಗಳೂರನ್ನು ಪ್ರವೇಶಿಸಿ ಹಾಲು ಮತ್ತು ಮೊಸರು ರೂಪದಲ್ಲಿ ಹೊಸದಾಗಿ ತಾಜಾತನ ತರಲು ಮುಂದಾಗಿದೆ.ಈಗಾಗಲೇ ಕಳೆದ ಏ,೫ರಿಂದ ಕ್ಷಿರ ಕಾಮರ್ಸ್ಸ್ ಪ್ಲಾಟ್ ಫಾರ್ಮಗಳಲ್ಲಿ ಶೀಘ್ರವೇ ಲಭ್ಯವಾಗಲಿದೆ. ಸಾರ್ವಜನಿಕರ ಮನೆ ಬಾಗಿಲಿಗೆ ಪೊರೈಕೆ ಮಾಡಲು ಸಿದ್ದವಾಗುತ್ತಿದೆ.
ಕೆ.ಎಂ.ಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನ ಬಗ್ಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಪ್ರಸಾಪ ಮಾಡಿರುವ ದಿನದಿಂದ ರಾಜ್ಯದ ಹೈನುಗಾರಿಕೆ ಉದ್ಯಮಕ್ಕೆ ಗರ ಬಡಿದಂತೆ ಅಗಿದೆ. ಹಿಂಬಾಗಿಲ ಮೂಲಕ ಅಮುಲ್ ಪ್ರವೇಶಿಸಲಿದ್ದು ಇನ್ನು ಕೆಲವೇ ದಿನಗಳಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯಾವಾಗಲಿದೆ. ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಲಿದೆ. ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರದ ಉಸ್ತುವಾರಿಯಲ್ಲಿ ನಡೆಯುತ್ತಿದೆ ಎಂಬ ಗುಮಾನಿ ಮಾತುಗಳು ಕೇಳಿ ಬರುತ್ತಿದೆ.
ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಈ ಹಿಂದೆಯೂ ಪ್ರಯತ್ನಿಸಿತ್ತು, ಅದರೆ ಅಗಿನ ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಿರಲಿಲ್ಲ. ಅದರೆ ಈಗಾ ಡಬಲ್ ಇಂಜಿನ್ ಸರ್ಕಾರಗಳು ಗುಜರಾತ್ ಅಮುಲ್‌ಗೆ ಕೆಂಪು ರತ್ನಕಂಬಳಿ ಹಾಸುವ ಮೂಲಕ ಸ್ವಾಗತಿಸುತ್ತಿರುವುದು ಹೈನುದ್ಯಮಿಗಳಿಗೆ ಕಳವಳಕಾರಿಯಾಗಿದೆ.