ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ

ಬೆಂಗಳೂರು, ಜು. ೧೯- ನಿನ್ನೆ ಕೆಜಿಎಫ್ ಹೆಚ್ಚಳ ಮಾಡಿದ್ದ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆನ ದರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿ ಆದೇಶ ಮಾಡಲಾಗಿದೆ.
ನಂದಿನಿ ಹಾಲು ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಜಿಎಸ್‌ಟಿ ವ್ಯಾಪ್ತಿಗೆ ಕೇಂದ್ರ ಸರ್ಕಾರ ಅಳವಡಿಸಿದ್ದರಿಂದ ದರ ಹೆಚ್ಚಳವಾಗಿತ್ತು. ಆದರೆ, ಜನಸಾಮಾನ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ದರ ಈ ಹಿನ್ನೆಲೆಯಲ್ಲಿ ಮಾಡಲು ಕೆಎಂಎಫ್‌ಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಉತ್ಪನ್ನದ ಮೇಲೆ ಒಂದು ರೂಪಾಯಿಗೆ ಕಡಿಮೆ ಮಾಡಲಾಗಿದೆ. ಆದರೂ ಕೂಡ ಬೆಲೆ ಏರಿಕೆಯಾಗಿರುವುದಂತೂ ಸತ್ಯ.ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಇದನ್ನು ಮತ್ತೊಮ್ಮೆ ಪ್ರಸ್ತಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅಲ್ಲಿಯವರೆಗೆ ಹೆಚ್ಚಿನ ಬೆಲೆ ಜನಸಾಮಾನ್ಯರು ಕಟ್ಟಬೇಕು. ಈ ಹಿಂದಿನ ಸಭೆಯಲ್ಲಿ ಆಹಾರ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿ ತರಲಾಗುವುದು ಎಂದು ತಜ್ಞರ ಸಮಿತಿ ವರದಿ ನೀಡಿದಾಗ ಎಚ್ಚೆತ್ತುಕೊಳ್ಳದ ರಾಜ್ಯಗಳ ಮುಖ್ಯಮಂತ್ರಿಗಳು ಈಗ ಬೆಲೆ ಗಗನಕುಸುಮವಾಗಿರುವ ಮಧ್ಯೆಯೇ ಜನಸಾಮಾನ್ಯರು ಬಳಸುತ್ತಿರುವ ಅಕ್ಕಿ, ಮೊಸರು, ಲಸ್ಸಿ, ಮಜ್ಜಿಗೆ ಬೆಲೆ ಏರಿಕೆಯ ಬಿಸಿ ಬಹಳಷ್ಟು ತಟ್ಟಿದೆ. ಜನಸಾಮಾನ್ಯರು ಸರ್ಕಾರಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.