ನಂದಿನಿ, ಅಮುಲ್ ವಿಲೀನಕ್ಕೆ ಅವಕಾಶ ನೀಡಲ್ಲ

ನವದೆಹಲಿ,ಏ. ೧೨- ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ ,ನಂದಿನಿಯನ್ನು ಅಮೂಲ್ ಜೊತೆ ವಿಲೀನ ಮಾಡಲು ಬಿಡುವುದಿಲ್ಲ ಎಂದು
ಎಂದು ಕೇಂದ್ರದ ವಿರುದ್ದ ಗುಡುಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್ ರಾಜ್ಯಗಳಲ್ಲಿನ ಡೈರಿ ಸಹಕಾರಿಗಳನ್ನು ನಿಯಂತ್ರಿಸುತ್ತಿದೆ ನಡೆಸಿದ್ದಾರೆ.

ಒಂದು ರಾಷ್ಟ್ರ, ಒಂದು ಹಾಲು’ ಘೋಷಣೆ ಬಿಜೆಪಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಡುವುದಿಲ್ಲ ಎಚ್ಚರಿಕೆ ನೀಡಿದ್ದಾರೆ.

ಅಮುಲ್ ಮತ್ತು ನಂದಿನಿ ಎರಡೂ “ಶ್ವೇತ ಕ್ರಾಂತಿ”ಯ ರಾಷ್ಟ್ರೀಯ ಯಶಸ್ಸಿನ ಕಥೆಗಳು ಎಂದಿರುವ ಅವರು, ದಶಕಗಳಿಂದ ಈ ವಿಕೇಂದ್ರೀಕೃತ ದೃಷ್ಟಿಯನ್ನು ಪೋಷಿಸಲು ಕಾಂಗ್ರೆಸ್ ಸಹಾಯ ಮಾಡಿದೆ, ಕೋಟಿಗಟ್ಟಲೆ ಹೈನುಗಾರರಿಗೆ ಸ್ವಾಯತ್ತತೆ ನಾಶ ಮಾಡಲು ಹೊರಟಿರುವ ಬಿಜೆಪಿ ಕ್ರಮಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಗುಡುಗಿದ್ದಾರೆ.

ಸಹಕಾರಿ ಸಂಘಗಳನ್ನು ರಾಜ್ಯದ ವಿಷಯವಾಗಿ ಸ್ಪಷ್ಟವಾಗಿ ಗುರುತಿಸಿರುವ ಸಂವಿಧಾನವನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಂದಿನಿ, ಅಮುಲ್ ಮತ್ತು ಒಎಂಎಫ್‌ಇಡಿ, ಮದರ್ ಡೈರಿ, ವಿಜಯ ಮತ್ತು ಆವಿನ್‌ನಂತಹ ಇತರ ಸಹಕಾರಿ ಸಂಸ್ಥೆಗಳು ರೈತರನ್ನು ಸಬಲೀಕರಣಗೊಳಿಸುತ್ತವೆ ಮತ್ತು ಅವುಗಳ ಏಳಿಗೆಗೆ ಸಹಾಯ ಮಾಡುತ್ತವೆ, ನಂದಿನಿ ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ ಸಂಘಟಿತ ೧೪,೦೦೦ ಸಹಕಾರ ಸಂಘಗಳ ಒಕ್ಕೂಟವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳ ೧೪ ಒಕ್ಕೂಟಗಳಾಗಿದ್ದು ಇದರ ೨೪ ಲಕ್ಷ ಸದಸ್ಯರು ದಿನಕ್ಕೆ ೧೭ ಕೋಟಿ ಗಳಿಸುತ್ತಾರೆ. ಈ ಐತಿಹಾಸಿಕ ಸಂಘಗಳನ್ನು ಹೊಸ ಬಹು-ರಾಜ್ಯ ಸಹಕಾರ ಸಂಘಗಳಾಗಿ ಒಗ್ಗೂಡಿಸುವ ಮೂಲಕ ರೈತರ ನಿಯಂತ್ರಣವನ್ನು ತಮ್ಮ ನಿಯಂತ್ರಣದೊಂದಿಗೆ ಬದಲಾಯಿಸಲು ಅಮಿತ್ ಶಾ ಮತ್ತು ಬಿಜೆಪಿ ಬಯಸುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಎಂಎಫ್ ತನ್ನ ವಾಣಿಜ್ಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವಂತೆ ಒತ್ತಾಯಿಸುವ ಪ್ರಯತ್ನ ಉದ್ದೇಶಿತ ಗುರಿಯತ್ತ ಒಂದು ಹೆಜ್ಜೆ ಮಾತ್ರ, ಅಲ್ಲಿ ಎಲ್ಲಾ ಹಾಲು ಒಕ್ಕೂಟಗಳು ಬಿಜೆಪಿಯ ರಾಜಕೀಯ ಅಂಗವಾಗುತ್ತವೆ ಎಂದು ಅವರು ದೂರಿದ್ದಾರೆ

ಬೆಂಗಳೂರು, ಭುವನೇಶ್ವರ, ಚೆನ್ನೈ ಅಥವಾ ಪುಣೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಆದರೆ ದೆಹಲಿಯಲ್ಲಿ ಸಹಕಾರ ಸಚಿವ ಅಮಿತ್ ಶಾ ಅವರು ಮಾಡುತ್ತಾರೆ. ಇದು ಡೈರಿ ರೈತರನ್ನು ದುರ್ಬಲಗೊಳಿಸುತ್ತದೆ ಮತ್ತು ಅಂತಿಮವಾಗಿ ಅವರ ಆದಾಯ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುತ್ತದೆ” ಎಂದು ಅವರು ಹೇಳಿದ್ದಾರೆ.