ನಂದಿನಿ(ಕೆಎಮ್‍ಎಫ್) ಕನ್ನಡಿಗರ ಜೀವಾಳ ರಾಜಕೀಯ ಚರ್ಚೆಯಾಗಬಾರದು

ಬೀದರ,ಏ.09: ಭಾರತದ ನಾಗರಿಕರು ಎಲ್ಲರೂ ಬಾಂಧವರು, ಭಾರತದ ರೈತರೆಲ್ಲರೂ ನಮ್ಮವರೇ, ಭಾರತದಲ್ಲಿನ ಎಲ್ಲಾ ಸಂಸ್ಥೆಗಳು ಸ್ಥಾಪಿಸಲು ಮತ್ತು ಪ್ರಗತಿ ಸಾಧಿಸಲು ರೈತರೇ ಕಾರಣರು. ಪ್ರಮಾಣಿಕ ಸ್ಪರ್ಧೆ ತನ್ನ ಅರ್ಹತೆ ಮೇಲೆ ಮುಂದೆ ಸಾಗಬೇಕು. ಅದರಲ್ಲಿ ರಾಜಕೀಯ ಬರಬಾರದು. ಜೊತೆಗೆ ನಾಗರಿಕರು ತನ್ನತನವನ್ನು ಮರೆಯಬಾರದು ಎಂದು ಶಿವಶರಣಪ್ಪ ವಾಲಿ ತಿಳಿಸಿದ್ದಾರೆ.

ರಾಜಕೀಯ ಪಕ್ಷದ ಮುಖಂಡರು ಯಾವುದೇ ಜನಹಿತದ ಬಗ್ಗೆ ಚರ್ಚಿಸುವಾಗ ತನ್ನ ಪಕ್ಷದ ಹಿತ ನೋಡುತ್ತಾರೆ. ಚುನಾವಣೆ ಬಂದಾಗ ತನ್ನ ಮತ ಬ್ಯಾಂಕಿನ ಕಡೆಗೆ ವಾಲುತ್ತಾರೆ. ಜನಹಿತ, ಜನಸ್ಪಂದನೆ, ಅವರಿಗೆ ಎಂದು ಬೇಗಾಗಿಲ್ಲ ಇದರ ಬಗ್ಗೆ ಸಾಮಾನ್ಯರು ಜಾಗರೂಕರಾಗಬೇಕು. ನಂದಿನಿ (ಕೆಎಂಎಫ್) ವಿಷಯದ ಬಗ್ಗೆ ಇಂದು ಎಲ್ಲ ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಎಂದು ಹೇಳಿಕೆಗಳು ಕೊಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಇವರೆಲ್ಲರೂ ಅಧಿಕಾರದಲ್ಲಿದ್ದವರೇ ಅಧಿಕಾರದಲ್ಲಿದ್ದಾಗ ರೈತರ ಬಗ್ಗೆ ಇವರೇಷ್ಟು ಕಾಳಜಿ ಹೊಂದಿ ಸಹಾಯ ಮಾಡಿದ್ದಾರೆಂದು ಎಲ್ಲರಿಗೆ ಗೊತ್ತಿದ್ದ ಸಂಗತಿ. 75 ವರ್ಷಗಳಲ್ಲಿ ರೈತ ಭಿಕ್ಷಕುನಾಗಿದ್ದಾಗ ತನ್ನ ಹಕ್ಕಿಗಾಗಿ ಭಿಕ್ಷುಕನಂತೆ ಕೈ ಚಾಚುತ್ತಿದ್ದಾರೆ. ರೈತ ಅನ್ನದಾತ ಎಲ್ಲರಿಗೆ ಸಲಹುತ್ತಾನೆ. ರಾಜಕೀಯ ಜನರು ಮರೆತ್ತಿದ್ದಾರೆ.

ಅಧಿಕಾರ ಹೋದಾಗ ಎಲ್ಲ ಪಕ್ಷಗಳು ರೈತರ ಹಿತೈಷಿಗಳಾಗುತ್ತಾರೆ. ಚುನಾವಣೆ ಬಂದಾಗ ಮತ ಬ್ಯಾಂಕ್ ಕಡೆ ವಾಲುತ್ತಾರೆ. ಇವರೆಲ್ಲರೂ ತಮ್ಮ ಅಧಿಕಾರಕ್ಕಾಗಿ (ಸ್ವಾರ್ಥಕ್ಕಾಗಿ) ಬಡದಾಡುತ್ತಾರೆ. ಸಾಮಾನ್ಯ ನಾಗರಿಕರು ಜಾಗೃಕರಾಗುವವರೆಗೆ ಅವರಿಗೆ ಯಾರೋಬ್ಬರೂ ಸಹಾಯ ಮಾಡುವುದಿಲ್ಲ. ನಂದಿನಿ( ಕೆಎಂಎಫ್) ಇದು ರಾಜಕೀಯ ವಿಷಯವಾಗದೆ ಕನ್ನಡಿಗರ ಅಸ್ಮೀಯತೆಯ ಮತ್ತು ರೈತರ ಜೀವಾಳದ ವಿಷಯವಾಗಬೇಕು. ಇವರ ಹಿತದೃಷ್ಠಿಯಿಂದ ಸಾಮಾನ್ಯರು ಮುಂದೆ ಬಂದು ಧ್ವನಿಯೆತ್ತಬೇಕು. ಹೋರಾಡಬೇಕು, ನಂದಿನಿ ಹಾಲು ಶ್ರೇಷ್ಠ ಮತ್ತು ಉತ್ತಮ ಗುಣಮಟ್ಟದ ಹಾಲಾಗಿ ಪ್ರಣಮಿಸಿದೆ. ಅಮೂಲ ಅದು ಸಹ ನಮ್ಮ ದೇಶದ ಒಂದು ಸಂಸ್ಥೆ ತನ್ನ ಶಕ್ತಿ ಮೇಲೆ ಅದು ಬೆಳೆದರೆ ನಮಗೆ ಅಭ್ಯಂತರವಿಲ್ಲ. ಆದರೆ ನಂದಿನಿ(ಕೆಎಮ್‍ಎಫ್) ಇದನ್ನು ಕಬಳಿಸಲು ಮುಂದಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ನಂದಿನಿ (ಕೆಎಂಎಫ್) ಕಬಳಿಸಲು ಹೊರಟಿದೆ ಅಮೂಲದ ಮೂಲವನ್ನೆ, ಕನ್ನಡಿಗರು ಜನರು ಕಿತ್ತು ಬಿಸಾಡುತ್ತಾರೆ ಇದನ್ನು ಮರೆಯಬಾರದು.

ಕರ್ನಾಟಕದ ನಾಗರಿಕರು ಜಾಣರು ಸೌಮ್ಯರು, ನಮ್ಮ ರೈತರು ಮುಗ್ಧರು, ಆದರೆ ಮೂರ್ಖರಲ್ಲವೆಂಬುದನ್ನು ಕೇಂದ್ರ, ರಾಜ್ಯ ಸರ್ಕಾರಗಳು, ಯಾರು ಮರೆಯಬಾರದು. ನಂದಿನಿಯನ್ನು ಕಾಪಾಡಲು ಸರಕಾರ ಮುಂದೆ ಬಂದರೆ ಸ್ವಾಗತ. ಇದನ್ನು ಕನ್ನಡಿಗರೆ ಕಾಪಾಡಬೇಕು. ಕನ್ನಡಿಗರು ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಕೆಎಂಎಫ್ ಅಧಿಕಾರಿಗಳು ಹಾಲಿನ ಮತ್ತು ಅವುಗಳ ಉತ್ಪನ್ನಗಳ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಅಧಿಕಾರಿಗಳೇ ಸಂಸ್ಥೆಯನ್ನು ಕೆಡಿಸಲು ಪ್ರಯತ್ನಿಸಿದರೆ ಮೂಲಾಜಿಯಿಲ್ಲದ ಅವರ ವಿರುದ್ಧ ಕಠೋರ ಕ್ರಮ ಜರುಗಿಸಬೇಕು.

ನಂದಿನಿ (ಕೆಎಂಎಫ್) ಈ ವಿಷಯ ಚುನಾವಣೆಗೆ ಯಾರೊಬ್ಬರೂ ಉಪಯೋಗಿಸದಂತೆ ನಾಗರಿಕರು ಎಚ್ಚರಿಕೆ ವಹಿಸಬೇಕು. ಈ ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಮಾತಾಡಲು ಎಳ್ಳಷ್ಟೂ ಹಕ್ಕಿಲ್ಲ. ಇವರೆಲ್ಲರೂ ತಮ್ಮ ಅಧಿಕಾರ ಭದ್ರಪಡಿಸಲು ಬೇಕಾದಂತೆ ನಡೆದುಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ರೈತರ ಹಿತ ಬಯಸಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ. ಕನ್ನಡಿಗರ ನಂದಿನಿ(ಕೆಎಂಎಫ್) ಕಸಿದುಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ನಾವು ಕಡ್ಡಾಯವಾಗಿ ಅದರ ಉತ್ಪನ್ನಗಳನ್ನು ಪ್ರತಿನಿತ್ಯ ಉಪಯೋಗಿಸಬೇಕು. ಅದರ ಗುಣಮಟ್ಟದಲ್ಲಿ ಯಾವುದೇ ರೀತಿ ಕಡಿಮೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ಸಂಸ್ಥೆ ಬಗ್ಗೆ ರಾಜಕೀಯ ಜನರ ಡೊಂಬಾರಟ ನಿಲ್ಲಬೇಕು. ಕನ್ನಡಿಗರು ಹೋರಾಡಬೆಕು. ನನಗೆ ಯಾವುದೇ ಪಕ್ಷದ ಬಗ್ಗೆ ಮೋಹ ಅಥವಾ ದ್ವೇಷವಿಲ್ಲ. ರೈತರ ಹಿತ ಮತ್ತು ಕೆಎಂಎಫ್ ಪ್ರಗತಿ ಮಾತ್ರ ಬೇಕು.