
ಕಲಬುರಗಿ,ಮೇ.26: ತಾಲೂಕಿನ ನಂದಿಕೂರ ಗ್ರಾಮದ ಶ್ರೀ ಮಹಾಲಕ್ಷ್ಮಿ ನೂತನ ದೇವಸ್ಥಾನ ಲೋಕಾರ್ಪಣೆಯ ಮೂರ್ತಿ ಪ್ರಾಣ ಪ್ರತಿμÁ್ಠಪನೆ ಹಾಗೂ ಕಳಸಾರೋಹಣ ವಿಜೃಂಭಣೆಯಿಂದ ಜರುಗಿತು.
ಚಿನ್ಮಯಗಿರಿ ಶ್ರೀ ಗುರು ಮಹಾಂತೇಶ್ವರ ಮಠದ ಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯರು,
ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿ, ಶ್ರೀನಿವಾಸ ಸರಡಗಿ ಶಕ್ತಿಪೀಠದ ಪೂಜ್ಯ ಶ್ರೀ ಡಾ. ಅಪ್ಪಾರಾವ ದೇವಿ ಮುತ್ಯಾ ಹಾಗೂ ಚಿನ್ಮಯಗಿರಿ ಶ್ರೀ ಗುರು ಮಹಾಂತೇಶ್ವರ ಮಠದ ಪೂಜ್ಯ ಶ್ರೀ ವೀರಮಹಾಂತ ಶಿವಾಚಾರ್ಯರ ದಿವ್ಯ
ಸಾನಿಧ್ಯದಲ್ಲಿ ಮಹಾಲಕ್ಷ್ಮಿ ಮೂರ್ತಿ ಪ್ರಾಣ ಪ್ರತಿμÁ್ಠಪನೆ ಹಾಗೂ ಕಳಸಾರೋಹಣ ಪೂಜೆ ನೆರವೇರಿಸಲಾಯಿತು.
ಇದಕ್ಕೂ ಮುನ್ನ ಶ್ರೀಗಳ ನೇತೃತ್ವದಲ್ಲಿ ಗ್ರಾಮದಲ್ಲಿ ನೂರಾರು ಮಹಿಳೆಯರ ಕುಂಭ ಕಳಸದೊಂದಿಗೆ ದೇವಸ್ಥಾನದ ಕಳಸವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಚಿನ್ಮಯಗಿರಿ ಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯರು, ಪೂಜ್ಯ ಶ್ರೀ ಡಾ. ಅಪ್ಪಾರಾವ ದೇವಿ ಮುತ್ಯಾ ಹಾಗೂ ಪೂಜ್ಯ ಶ್ರೀ ವೀರಮಹಾಂತ ಶಿವಾಚಾರ್ಯರ ಅವರು ಆಶೀರ್ವಾಚನ ನೀಡಿ, ಮಹಾಲಕ್ಹ್ಮೀ ದೇವಿ ಆಶೀರ್ವಾದ ದಿಂದ ಎಲ್ಲರ ಮನೆ ನಂದಾದೀಪ ಬೆಳಗಲಿ, ತಾಯಿ ಆಶೀರ್ವಾದ ಮಾಡಲಿ, ಎಲ್ಲರಿಗೂ ಒಳ್ಳೆದಾಗಲಿ ಎಂದು ಆಶೀರ್ವದಿಸಿದರು.
ಇದೆ ವೇಳೆ ಸಾನಿಧ್ಯ ವಹಿಸಿದ ಪೂಜ್ಯ
ಚಿ. ದೊಡ್ಡಪ್ಪ ಅಪ್ಪಾಜಿ ಹಾಗೂ ಅವರ ಸೋದರಿ ಕು. ಶಿವಾನಿ ಅಪ್ಪ ಅವರು ಕೋಟಿಗೊಬ್ಬ ಶರಣ ಹಾಡು ಹಾಡಿ, ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಆಶೀರ್ವಾದದಿಂದ ದಾಸೋಹ ತತ್ವ ನೆಲೆಸಲಿ ಎಂದು ಆಶೀರ್ವಾಚನ ನೀಡಿದರು.
ನಂತರ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪ್ರಕಾಶ್ ಚನ್ನಪ್ಪ ಪೆÇಲೀಸ್ ಪಾಟೀಲ್ ಹಾಗೂ ಸುಭಾμï ಚಂದ್ರ ಗುತ್ತೇದಾರ ಅವರು ಜಂಟಿಯಾಗಿ ದಾಸೋಹ ಸೇವೆ ನೀಡಿದರು.
ಪ್ರಮುಖರಾದ ಅಲ್ಲಮಪ್ರಭು ದೇಶಮುಖ, ಗ್ರಾಮದ ಮುಖಂಡರಾದ ಮಲ್ಲಣ್ಣಗೌಡ ಬಿ. ಪೆÇಲೀಸ್ ಪಾಟೀಲ್, ಪವನಕುಮಾರ್ ವಳಕೇರಿ, ಶಾಮರಾಯಗೌಡ ಪೆÇಲೀಸ್ ಪಾಟೀಲ್, ಶರಣಗೌಡ ಮಾಲಿಪಾಟೀಲ್, ಮಹಾದೇವಪ್ಪ ಗುಡಪ್ಪಗೋಳ, ನಾಗಿಂದ್ರಪ್ಪ ಗುಡ್ಡಪ್ಪಗೋಳ, ಲಕ್ಷ್ಮಣ ಪೂಜಾರಿ, ಶೇಖಯ್ಯ ಗುತ್ತೇದಾರ, ಈರಣ್ಣ ಸಾಹು ಕಣ್ಣಿ, ದತ್ತು ಗುತ್ತೇದಾರ,ಭೋಜರಾಜ್ ಪಾಟೀಲ್, ಅಶೋಕ್ ಜಾಧವ, ಶರಣಬಸಪ್ಪ ಉಳ್ಳಿ, ಶರಣು ಪೂಜಾರಿ ಶಖಾಪುರ ಸೇರಿದಂತೆ ಸಾವಿರಾರು ಭಕ್ತರು ಇದ್ದರು.