ನಂದಿಕೂರ ಗ್ರಾಪಂ: ಐದನೆ ಬಾರಿ ಗೆಲುವು ಸಾಧಿಸಿದ ವಳಕೇರಿ

ಕಲಬುರಗಿ,ಡಿ.31- ತಾಲೂಕಿನ ನಂದಿಕೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಿತನೂರ ಗ್ರಾಮ ವಾರ್ಡ ದಿಂದ ಸತತ ಐದನೆ ಬಾರಿ ಗೆಲುವು ಸಾಧಿಸುವ ಮೂಲಕ ಪವನಕುಮಾರ ವಳಕೇರಿ ಅವರು ದಾಖಲೆ ನಿರ್ಮಿಸಿದ್ದಾರೆ.
ಕಳೆದ 2000, 2005, 2010 ಮತ್ತು 2015ರಲ್ಲಿ ನಡೆದ ಸಿತನೂರ ವಾರ್ಡ ಚುನಾವಣೆಯಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿರುವ ಪವನಕುಮಾರ ವಳಕೇರಿ ಅವರು, ಇದೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಅತ್ಯದಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ತಮ್ಮನ್ನು ಸತತ ಐದನೆ ಸಲ ಆಯ್ಕೆ ಮಾಡಿರುವ ಸಿತನೂರ ಗ್ರಾಮಸ್ಥರ ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.