
ಇಲಕಲ್ಲ :ಆ.30:ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಮೇಜರ ಧ್ಯಾನಚಂದ ಜನ್ಮದಿನದ ನಿಮಿತ್ಯ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಗಸ್ಟ್ 29 ರಂದು ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿಯಲ್ಲಿ ಆಚರಿಸಲಾಯಿತು.
ಹಾಕಿ ಮಾಂತ್ರಿಕ, ಮೇಜರ್ ಧ್ಯಾನಚಂದರವರ ಸಾಧನೆ ಹಾಗೂ ಕ್ರೀಡೆಗೆ ನೀಡಿದ ಕೊಡುಗೆಯನ್ನು ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ ರವರು ಹೇಳಿದರು. 2012 ರಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಜಾರಿಗೆ ಬಂದಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಸರ್ವರೂ ಕ್ರೀಡೆಯನ್ನು ರೂಢಿಸಿಕೊಳ್ಳಬೇಕೆಂದು ಗುರು ಹಾಗೂ ಗುರುಮಾತೆಯರು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕ್ಲಸ್ಟರ್ ಹಾಗೂ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಗುರುಮಾತೆಯರಾದ ಶ್ರೀಮತಿ ಜ್ಯೋತಿ, ಜಿ ಆರ್ ನದಾಫ್ ಗಂಗಾ ಗುರುಮಾತೆ, ಸಹ ಶಿಕ್ಷಕರಾದ ಬಸವರಾಜ ಬಲಕುಂದಿ ನಿರೂಪಿಸಿದರು , ಡಾ. ವಿಶ್ವನಾಥ ತೋಟಿ ಸ್ವಾಗತಿಸಿದರು ಹಾಗೂ ಶಾಲಾ ಮಂತ್ರಿ ಮಂಡಲ ವಂದಿಸಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು,ನಂದವಾಡಗಿ ಗ್ರಾಮದ ನಾಗರಿಕರು,ಶಿಕ್ಷಣ ಪ್ರೇಮಿಗಳು ಕ್ರೀಡಾ ದಿನಾಚರಣೆಯ ಶುಭ ಕೋರಿದರು