ನಂದವಾಡಗಿ ಶಾಲೆಯಲ್ಲಿ ಕಲಿಕಾ ಸಪ್ತಾಹ

ಇಲಕಲ್ಲ :ಜ.11:ತಾಲೂಕಿನ ನಂದವಾಡಗಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ 75 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಕಲಿಕಾ ಸಪ್ತಾಹ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಹಾಗೂ ನಲಿಕಲಿ ಮಕ್ಕಳಿಂದ ಹಾಡು ಹೇಳಿಸುವುದರ ಮೂಲಕ ಚಾಲನೆ ನೀಡಲಾಯಿತು.ಮಕ್ಕಳಲ್ಲಿ ಕಲಿಕಾ ವೃದ್ಧಿ ಹಾಗೂ ಮಕ್ಕಳನ್ನು ಹೆಚ್ಚೆಚ್ಚು ಚಟುವಟಿಕೆಯಲ್ಲಿ ತೊಡಗಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಕಲಿಕಾ ಸಪ್ತಾಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶಾಲಾ ಗುರುಮಾತೆ ಶ್ರೀಮತಿ ಜ್ಯೋತಿ ಹೇಳಿದರು. ಉಕ್ತಲೇಖನ, ಕಥೆ ಹೇಳುವುದು, ಅಭಿನಯ ಗೀತೆ, ಪ್ರಬಂಧ, ಭಾಷಣ ಸ್ಪರ್ಧೆ, ಚಿತ್ರಕಲೆ, ಕ್ವಿಜ್ ಕಾರ್ಯಕ್ರಮ ಈ ರೀತಿಯಾಗಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಿಕ್ಷಕರು ವಿದ್ಯಾರ್ಥಿನಿಯರಿಗೆ ತಿಳಿಸಿದರು.ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯ ಗುರುಮಾತೆಯರು ವಿ ಬಿ ಕುಂಬಾರ, ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಶ್ರೀಮತಿ ಗಂಗಾ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ ಹಾಗೂ ಶಾಲಾ ಮಂತ್ರಿ ಮಂಡಲ ಶುಭ ಹಾರೈಸಿದರು. ಬಸವರಾಜ ಬಲಕುಂದಿ ನಿರೂಪಿಸಿದರು, ವಿಶ್ವನಾಥ ತೋಟಿ ಸ್ವಾಗತಿಸಿದರು, ಚಂದ್ರಶೇಖರ ಹುತಗಣ್ಣ ವಂದಿಸಿದರು.