ಚಾಮರಾಜನಗರ: ಸ್ವತಂತ್ರ ಭಾರತದ ನಂತರ ಸಂಸತ್ ಭವನ ನಿರ್ಮಾಣವಾಗಿರುವುದು ವಿಶ್ವಕ್ಕೆ ಭಾರತೀಯರು ನೀಡುವ ಮಹಾನ್ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರವಾಗಿದೆ . ಇದು ಭಾರತೀಯರ ಭವಿಷ್ಯದ ದಿವ್ಯ ಶಕ್ತಿಯಾಗಿ ಮಹಾನ್ ಚೇತನವಾಗಿ ವಿಶ್ವಕ್ಕೆ ಜಗದ್ಗುರು ವಾಗುವ ಜ್ಞಾನ, ಕರ್ಮ, ಭಕ್ತಿ, ಶಕ್ತಿ ದಿವ್ಯತೆಯ ಮಾನವೀಯತೆಯ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ ಋಗ್ವೇದಿ ತಿಳಿಸಿದರು.
ಅವರು ಋಗ್ವೇದೀ ಯೂತ್ ಕ್ಲಬ್, ಜೈ ಹಿಂದ್ ಪ್ರತಿಷ್ಠಾನ , ಶಂಕರಪುರ ಬಡಾವಣೆಯಲ್ಲಿ ನಮ್ಮ ಸಂಸತ್ತು ನಮ್ಮ ಹೆಮ್ಮೆ ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಭಾರತ ಸ್ವತಂತ್ರ ನಂತರ ದೂರದೃಷ್ಟಿ ಹಿನ್ನೆಲೆಯ ಸಂಸತ್ ಭವನ ನಿರ್ಮಾಣವಾಗಿದೆ. ಸಂಸದ್ ಭವನ ನಿರ್ಮಾಣಕ್ಕೆ ಸಹಕರಿಸಿದ ಸರ್ವರಿಗೂ ದೇಶದ ಜನತೆ ಸದಾ ಕಾಲ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಭಾರತದ ಸಂಸತ್ತು ಭಾರತೀಯರ ಆತ್ಮಶಕ್ತಿ ಯಾಗಿದೆ.
ಸ್ವಾತಂತ್ರ, ಸಮಾನತೆ, ಸಹೋದರತೆಯ ದಿವ್ಯ ಮಂತ್ರದ ಶ್ರದ್ಧಾ ಕೇಂದ್ರವಾಗಿದೆ ಎಂದು ತಿಳಿಸಿದ ಋಗ್ವೇದಿ ವಿಶೇಷ ಕಾರ್ಯಕ್ರಮಗಳ ಮೂಲಕ ಭಾರತದ ಸಂಸತ್ ಭವನ ಇಂದು ಉದ್ಘಾಟನೆ ಆಗಿರುವುದು ಭಾರತೀಯರು ಗೌರವ ಪಡುವಂತಾಗಿದೆ. ತಮ್ಮ ದಿವ್ಯ ಬುದ್ಧಿಶಕ್ತಿ, ಜ್ಞಾನಶಕ್ತಿ, ಕರ್ಮಶಕ್ತಿ, ಆಧ್ಯಾತ್ಮಿಕ ಭಕ್ತಿ, ಮಾನವಿಯ ಗುಣಗಳ ಮೂಲಕ ಪ್ರೀತಿ, ವಿಶ್ವಾಸ, ಕರುಣೆ ಅಂತಹ ಕರಣಗಳ ಗುಣಗಳನ್ನು ಬೆಳೆಸಿಕೊಂಡಿರುವ ಭಾರತೀಯರು ಇಡೀ ವಿಶ್ವದಲ್ಲಿ ಶ್ರೇಷ್ಠ ಗುಣ ಹೊಂದಿರುವವರಾಗಿದ್ದಾರೆ. ಭಾರತ ತಮ್ಮ ಎಲ್ಲಾ ಶಕ್ತಿಯ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಆ ದಿಕ್ಕಿನಲ್ಲಿ ಸಂಸತ್ ಭವನವು ಮಹತ್ವದ ಕಾರ್ಯವನ್ನು ಸದಾ ಕಾಲ ನಿರ್ವಹಿಸುತ್ತದೆ ಎಂದು ತಿಳಿಸಿದರು.
ವಿಜ್ಞಾನ ,ತಂತ್ರಜ್ಞಾನ, ನೀರಾವರಿ ,ಬಾಹ್ಯಾಕಾಶ ಸಂಪನ್ನತೆಯ ಮೂಲಕ ಯೋಗ , ಆಯುರ್ವೇದ ಮುಂತಾದ ನೂರಾರು ಕ್ಷೇತ್ರಗಳಲ್ಲಿ ಭಾರತೀಯರು ಅಗ್ರಗಣ್ಯ ಸ್ಥಾನದಲ್ಲಿ ಮುನ್ನಡೆಯ ಸಾಧಿಸುತ್ತಿರುವುದು ಹೆಮ್ಮೆ ಎನಿಸುತ್ತದೆ. ಮೇ 28 ಭಾರತದ ಸಂಸತ್ ಭವನ ಉದ್ಘಾಟನೆಯಾಗಿ ಮೆರಗು ತಂದಿದೆ . ಸಂಸದ್ ಭವನ ನಿರ್ಮಾಣದ ಕಾರ್ಯದಲ್ಲಿ ಯಶಸ್ವಿಯಾಗಿರುವ ಸರ್ವರಿಗೂ ಭಾರತೀಯರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದರು.
ಶಂಕರಪುರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ರವಿ ಮಾತನಾಡಿ ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿಯವರು ವಿಶ್ವಕ್ಕೆ ಮಹಾನ್ ಕಟ್ಟಡವನ್ನು ಸಂಸತ್ ಭವನದ ನಿರ್ಮಾಣದ ಮೂಲಕ ನೀಡಿದ್ದಾರೆ. ಸಂಸತ್ ಭವನ ನಿರ್ಮಾಣ ಮಾಡಿದ ಕೇಂದ್ರ ಸರ್ಕಾರದ ಮತ್ತು ಎಲ್ಲಾ ಭಾರತೀಯರಿಗೆ ನಮನಗಳನ್ನು ಸಲ್ಲಿಸಬೇಕು ಎಂದರು.
ಋಗ್ವೇದೀ ಯೂತ್ ಕ್ಲಬ್ ನ ಶ್ರಾವ್ಯ ಋಗ್ವೇದಿ ,ಕುಸುಮ, ಜಾಲಹಳ್ಳಿ ಹುಂಡಿ ಮಹಾದೇವ ಇದ್ದರು.