
ಚಾಮರಾಜನಗರ, ಮಾ.04:- ತಾಲೂಕಿನ ನಂಜೇದೇವನಪುರ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಈ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಯೋಜನೆಯಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಅನುದಾನವನ್ನು ನೀಡಿರುವುದಾಗಿ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ಗ್ರಾಮದ ಮುಖ್ಯರಸ್ತೆಯಿಂದ ಶ್ರೀ ನಂಜುಂಡೇಶ್ವರ ದೇವಸ್ಥಾನದ ವರೆಗೆ 40 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ನಂಜೇದೇವನಪುರ ಗ್ರಾಮದ ಇತರೇ ವರ್ಗದವರು ವಾಸಿಸುವ ಬೀದಿ ಹಾಗೂ ಕಾಲೋನಿ ಅಭಿವೃದ್ದಿಗೆ ಕಳೆದ ಒಂದು ವರ್ಷದಿಂದ ಹೆಚ್ಚು ಒತ್ತು ನೀಡಿ, ಒಂದು ಕೋಟಿಗೂ ಹೆಚ್ಚು ಅನುದಾವನ್ನು ನೀಡಿದ್ದೇವೆ. ಕಗ್ಗಳಿಪುರ ಬೀದಿ ಅಭಿವೃದ್ದಿಗೆ 10 ಲಕ್ಷ ರೂ. ದೇವಸ್ಥಾನದ ಅವರಣ ಮತ್ತು ಮುಖ್ಯ ರಸ್ತೆಯ ಅಭಿವೃದ್ದಿಗಾಗಿ 30 ಲಕ್ಷ ರೂ. ಈ ರಸ್ತೆ ಅಭಿವೃದ್ದಿಗೆ 40 ಲಕ್ಷ ರೂ. ಕಾವೇರಿ ನೀರಾವರಿ ನಿಗಮದಿಂದ 20 ಲಕ್ಷ ರೂ. ಕುರುಬ ಸಮಾಜ ಹಾಗು ಇತರೇ ಸಮಾಜದವರು ವಾಸಿಸುವ ಪ್ರದೇಶಗಳಿಗೆ ಸಿಮೆಂಟರ್ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಲಾಗಿದೆ.
ಇದಕ್ಕು ಮುನ್ನಾ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ವಾಸಿಸುವ ಬೀದಿಗಳಿಗೆ ಚರಂಡಿ ಮತ್ತು ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.ಒಟ್ಟಾರೆ ಪಂಚಾಯಿತಿಗೆ ಸೇರಿದ ತಮ್ಮಡಹಳ್ಳಿ, ಕಾಳನಹುಂಡಿ ವೀರನರಪುರ ಹಾಗೂ ನಂಜೇದೇವನಪುರ ಗ್ರಾಮಗಳ ಅಭಿವೃದ್ದಿಗೆ 10 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿದ್ದು. ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅದ್ಯತೆ ನೀಡಿದ್ದೇನೆ. ಅದರಂತೆ ತಾವುಗಳು ಸಹ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸವನ್ನು ತೋರಿಸಬೇಕು. ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಗ್ರಾಮದ ಮುಖಂಡ ಪಿ. ರಾಜಣ್ಣ ಮಾತನಾಡಿ, ಶಾಸಕ ಸಿ. ಪುಟ್ಟರಂಗಶೆಟ್ಟರು ಸರಳ ವ್ಯಕ್ತಿತ್ವವುಳ್ಳವರಾಗಿದ್ದು, ಜನಪರ ಕಾರ್ಯಕ್ರಮಗಳ ಮೂಲಕ ಈಗಾಗಲೇ ಜನರ ಮನಸ್ಸಿನಲ್ಲಿ ಇದ್ದಾರೆ. ನಮ್ಮ ಗ್ರಾಮಕ್ಕೆ ಹೆಚ್ಚಿನ ಒತ್ತು ನೀಡಿ, ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ. ಅವರನ್ನು ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸಲು ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ. ಶಿವಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ಗ್ರಾ.ಪಂ. ಅಧ್ಯಕ್ಷೆ ಮೇಘಶ್ರೀ, ಸದಸ್ಯರಾದ ಪಿ. ಶೇಖರ್, ಗುರುರಾಜ್, ಶಶಿಕಲಾ ಶಾಂತಪ್ಪ, ಪಟೇಲ್ ಗುರುಮಲ್ಲಪ್ಪ, ಮಾಜಿ ಸದಸ್ಯ ಎನ್.ಎಂ. ಮಹೇಶ್, ಮುಖಂಡರಾದ ಮಹೇಶ್ ಕುದರ್, ಬೆಳ್ಳಿ ಮಾದಪ್ಪ, ಮಲ್ಲೇಶ್, ಕೆ.ಎಲ್. ಶಾಂತಪ್ಪ. ಬಸವಣ್ಣ, ಮಹದೇವೇಗೌಡ ಮೊದಲಾವರು ಇದ್ದರು.