ನಂಜುಂಡೇಶ್ವರನಿಗೆ ೧.೭೨ ಕೋಟಿ ರೂ. ಕಾಣಿಕೆ

ಮೈಸೂರು.ಮೇ.೧೫- ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ನಂಜುಂಡೇಶ್ವರನಿಗೆ ಒಂದೇ ತಿಂಗಳಿನಲ್ಲಿ ಭಕ್ತರಿ ೧.೭೨ ಕೋಟಿ ರೂ. ಕಾಣಿಕೆಯನ್ನು
ಹುಂಡಿಗೆ ಹಾಕಿದ್ದಾರೆ.
ಇಂದು ದೇವಾಲಯದ ದಾಸೋಹದ ಭವನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.ಹುಣ್ಣಿಮೆ ಸೇರಿ ವಿಶೇಷ ದಿನಗಳಲ್ಲಿ ಕ್ಷೇತ್ರಕ್ಕೆ ಅಪಾರ ಭಕ್ತರು ದೇವರ ದರ್ಶನ ಪಡೆದಿದ್ದರಿಂದ ಹುಂಡಿಯಲ್ಲಿ ೧,೭೨, ೮೫, ೨೯೬ ರೂ. ಸಂಗ್ರಹವಾಗಿದೆ. ಇದರ ಜೊತೆಗೆ ೯೨ ಗ್ರಾಂ ಚಿನ್ನಾಭರಣ, ೩ ಕೆಜಿ ೫೦೦ ಗ್ರಾಂ ಬೆಳ್ಳಿ ಹಾಗೂ ೩೩ ವಿದೇಶಿ ಕರೆನ್ಸಿಗಳು ಸಿಕ್ಕಿವೆ.
ದೇವಾಲಯಕ್ಕೆ ದಾಖಲೆ ಮೊತ್ತ ಹಣ ಸಂಗ್ರಹವಾಗಿದೆ.
ಎಣಿಕೆ ಕಾರ್ಯ ವೇಳೆ ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ವಿದುಲತಾ, ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಕಾರ್ತಿಕ್,
ದೇವಾಲಯದ ಸಹಾಯಕ ಕಾರ್ಯನಿರ್ವಹಕ ಆಧಿಕಾರಿ ಸತೀಶ್, ವೆಂಕಟೇಶ್ ಪ್ರಸಾದ್, ಕಾರ್ಯನಿರ್ವಹಕ ಅಧಿಕಾರಿ ಜಗದೀಶ್ ಕುಮಾರ್ ಮತ್ತು ಸ್ವಸಹಾಯ ಸಂಘಟನೆಯ ಮಹಿಳಾ ಸದಸ್ಯರು ಭಾಗವಹಿಸಿದ್ದರು.