ನಂಜನಗೂಡು ರಾಯರ ಮಠದ 16ನೇ ವರ್ಧಂತಿ ಆಚರಣೆ

ವಿಜಯಪುರ, ಜು.17-ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದ 16ನೇ ವರ್ಧಂತಿ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಅದರಂಗವಾಗಿ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ನಡೆದು, ಬಳಿಕ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಲಾಯಿತು. 11 ಗಂಟೆಗೆ ರಥೋತ್ಸವ ಜರುಗಿ ಬಳಿಕ ಪ್ರಲ್ಹಾದರಾಜರಿಗೆ ಕನಕಾಭಿಷೇಕ ನಡೆದು, ಭಕ್ತರಿಂದ ಭಜನೆ ಮೂಲಕ ದೇವರ ನಾಮಸ್ಮರಣೆ ಎಲ್ಲರ ಮನಸೆಳೆಯಿತು. ಶ್ರೀಮಠವನ್ನು ತೋರಣ ಬಾಳೆಕಂಬಗಳಿಂದ ಅಲಂಕರಿಸಲಾಗಿತ್ತು.

ಮಠದ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯ ವೃಂದಾವನಕ್ಕೆ ಬಗೆಬಗೆಯ ಹೂಮಾಲೆಗಳಿಂದ ಅಲಂಕರಿಸಿದ್ದರು.

ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ಪಂ. ಡಾ. ಕೃಷ್ಣಾಚಾರ್ಯ ಕಾಖಂಡಕಿ, ವಾಮನರಾವ ದೇಶಪಾಂಡೆ, ಕೆ ಜಿ ದೇಶಪಾಂಡೆ, ವಿ ಬಿ ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ, ಕೃಷ್ಣ ಬೀಡಕರ, ಶ್ರೀಧರ ಜೋಶಿ (ಮುತ್ತಗಿ), ಆರ್ ಆರ್ ಕುಲಕರ್ಣಿ, ಬಂಡಾಚಾರ್ಯ ಜೋಶಿ (ಕೂಡಗಿ), ಪ್ರಕಾಶ ಬಿಜಾಪುರ, ಸೊಂಡೂರ, ವಿಲಾಸ ಜೋಶಿ, ವಿ ಎಸ್ ಜೋಶಿ, ಡಿ ಆರ್ ನಾಡಿಗ, ಸಂತೋಷ ಕುಲಕರ್ಣಿ, ಅಶೋಕ ತಾವರಗೇರಿ, ಭೀಮಣ್ಣ ಕುಲಕರ್ಣಿ ಮುಂತಾದವರು ಭಾಗವಹಿಸಿದ್ದ್ದರು.