ನಂಜನಗೂಡು ಬ್ರಿಗೇಡ್ ವತಿಯಿಂದ ಪಾರ್ಕ್ ಸ್ವಚ್ಛತೆ

ಸಂಜೆವಾಣಿ ವಾರ್ತೆ
ನಂಜನಗೂಡು: ಮೇ.06:- ನಂಜನಗೂಡು ಬ್ರಿಗೇಡ್ ಯುವಕರು ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಬಸವೇಶ್ವರ ಪಾರ್ಕ್ ಕಸ ಕಡ್ಡಿ ಪ್ಲಾಸ್ಟಿಕ್ ಇಂದ ಮುಕ್ತಗೊಳಿಸಿ ಸ್ವಚ್ಛತೆಗೊಳಿಸಿದರು ಇವರ ಜೊತೆ ಪೌರಕಾರ್ಮಿಕರು ಕೂಡ ಕೈಜೋಡಿಸಿ ಉದ್ಯಾನವನ್ನು ಸ್ವಚ್ಛತೆಗೊಳಿಸಿದರು
ಈ ಬಸವೇಶ್ವರ ಪಾರ್ಕಿನಲ್ಲಿ ಬೆಳಿಗ್ಗೆ ಸಂಜೆ ಹೌಸಿಂಗ್ ಬೋರ್ಡ್ ಬಡಾವಣೆಯ ನಿವಾಸಿಗಳು ವಾಕಿಂಗ್ ಮಾಡುತ್ತಾರೆ ಮತ್ತು ಸಂಜೆ ಸಣ್ಣ ಮಕ್ಕಳು ಕೂಡ ಆಟವಾಡಲು ಬರುತ್ತಾರೆ ಇಂಥ ಸಮಯದಲ್ಲಿ ಗಾಳಿ ಬೀಸಿದರೆ ಪ್ಲಾಸ್ಟಿಕ್ ಕವರ್ ಕಸ ಕಡ್ಡಿಗಳು ಪೇಪರ್ ಪ್ಲೀಸ್ ಗಳು ಒಣಗಿದ ಮರದ ಎಲೆಗಳು ಬಿದ್ದು ವಾಕಿಂಗ್ ಮಾಡುವರಿಗೆ ಆಟವಾಡುವ ಮಕ್ಕಳಿಗೆ ಕಿರಿಕಿರಿ ಉಂಟಾಗಿತ್ತು ಇದನ್ನೆಲ್ಲ ಗಮನಿಸಿದ ನಂಜನಗೂಡು ಬ್ರಿಗೇಡ್ ಯುವಕರು ಎಂದು ಬೆಳಿಗ್ಗೆ ಸ್ವಚ್ಛತೆ ಮಾಡಿದರು
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಧು, ಆನಂದ್, ಸುನಿಲ್, ಮಧು, ತೇಜಸ್, ಸೃಜನ್, ಮನು, ಸುನಿಲ್ ಸೇರಿದಂತೆ ಇತರರು ಇದ್ದಾರೆ.