ನಂಜನಗೂಡು ದೊಡ್ಡ ಜಾತ್ರೆಗೆ ಸಕಲ ಸಿದ್ಧತೆ

ನಂಜನಗೂಡು: ಮಾ.29:- ಏಪ್ರಿಲ್ 2ನೇ ತಾರೀಕು ನಂಜನಗೂಡಿನಲ್ಲಿ ನಡೆಯುವ ಪಂಚಮ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳಲಾಗಿದೆ.
ಪಂಚ ರಥಗಳ ರಿಪೇರಿ ಕೆಲಸ ಬರದಿಂದ ಸಾಗಿದೆ ನೂತನ ರಥದ ಹಗ್ಗಗಳನ್ನು ತರಿಸಲಾಗಿದೆ. ಕಪಿಲಾ ನದಿ ಸ್ವಚ್ಛತಾ ಕುಡಿಯುವ ನೀರಿನ ವ್ಯವಸ್ಥೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಜಾತ್ರೆಯ ಎರಡನೆಯ ದಿನವೇ ಭಕ್ತಾದಿಗಳು ಬರುವ ನಿರೀಕ್ಷೆ ಇರುವುದರಿಂದ ದೇವಸ್ಥಾನದ ಪಡಸಾಲೆಗಳು ಕಲಾಮಂದಿರಗಳು ಸ್ವಚ್ಛತಾ ಕಾರ್ಯ ಬೇಸಿಗೆ ಇರುವುದರಿಂದ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ನಡೆಯುತ್ತಿದೆ ತಾತ್ಕಾಲಿಕ ಶೌಚಾಲಯಗಳು ಭಕ್ತಾದಿಗಳ ಗೋಸ್ಕರ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಸಕಲ ಸಿದ್ಧತೆ ನಡೆಯುತ್ತಿದೆ.
ಈ ಬಾರಿ ಪಂಚ ರಥೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ಬರುವ ನಿರೀಕ್ಷೆ ಅಂಗಡಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆದು ತಿಂಡಿ ತಿನಿಸಿಗಳು ಬೊಂಬೆಗಳು, ಪೂಜೆ ಸಾಮಗ್ರಿಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ
ಪ್ರಸಾದ ವ್ಯವಸ್ಥೆ ದೇವಸ್ಥಾನದ ಸುತ್ತ ರೇಟಿಂಗ್ ವ್ಯವಸ್ಥೆ ಎಲ್ಲಾ ಜಿಲ್ಲೆಗಳಿಗೂ ಜಾತ್ರೆಯ ಮಾಹಿತಿ ನೀಡುತ್ತಿದ್ದಾರೆ ಪ್ರತಿ ಹಳ್ಳಿಗಳಿಗೂ ಪ್ರಚಾರದ ವ್ಯವಸ್ಥೆ ಸ್ಟಿಕರ್ ಅಂಟಿಸುವುದು ಕೆಲಸ ಆರಂಭವಾಗಿದೆ.
ರಥ ಚಲಿಸುವ ರಥ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ಕೂಡ ಆರಂಭವಾಗಿದೆ ಜಾತ್ರೆಗೆ ಸಂಬಂಧಿಸಿದಂತೆ ರಸ್ತೆಗೆ ಹಾಕುವ ಮರಳು ತರಿಸಲಾಗಿದೆ.
ಬರುವ ಭಕ್ತಾದಿಗಳಿಗೆ ಪ್ರಸಾದ ತಂಪು ಪಾನೀಯ ನೀಡುವುದರ ಬಗ್ಗೆ ದೇವಸ್ಥಾನದ ಆಡಳಿತ ಅಧಿಕಾರಿಗಳ ಹತ್ತಿರ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಈ ಬಾರಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಂಚಮ ರಥೋತ್ಸವಕ್ಕೆ ಬರುವ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.