ನಂಜನಗೂಡು ಟಿಎಪಿಸಿಎಂಎಸ್ ಕಾಂಗ್ರೆಸ್ ಪಾಲು

ನಂಜನಗೂಡು, ನ.8: ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಶಾಸಕ ಕೇಶವಮೂರ್ತಿ ವರ್ಚಸ್ಸಿನಿಂದ ನಂಜನಗೂಡು ಟಿಎಪಿಸಿಎಂಎಸ್ ಕಾಂಗ್ರೆಸ್ ಪಾಲಾಗಿದೆ ಎಂದು ಕುರಟ್ಟಿ ಮಹೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ನಂಜನಗೂಡು ಭಾರೀ ಕುತೂಹಲ ಕೆರಳಿಸಿದ್ದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಚುನಾವಣೆಯ ಚಾಣಕ್ಯ ಕುರಟ್ಟಿ ಮಹೇಶ್ ಬಣದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮತ್ತು ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದ ಸಿಂಧುವಳ್ಳಿ ಕೆಂಪಣ್ಣ ಹೊರತುಪಡಿಸಿ ಎಲ್ಲರೂ ಸೋತಿದ್ದಾರೆ. ಇದರ ಜೊತೆಗೆ ಮಾಜಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಬಣ್ಣದಿಂದ ಸ್ಪರ್ಧಿಸಿದ ಎಲ್ಲರೂ ಕೂಡ ಸೋತಿದ್ದಾರೆ. ಒಟ್ಟಿನಲ್ಲಿ ಬಹಳ ಕುತೂಹಲದಿಂದ ನಡೆದ ಈ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಈ ಚುನಾವಣೆಯ ಮತ ಎಣಿಕೆ ತರಕಾರಿ ಜೂನಿಯರ್ ಕಾಲೇಜ್‍ನಲ್ಲಿ ನಡೆಯಿತು ದಂಡಾಧಿಕಾರಿ ಮಹೇಶ್ ನೇತೃತ್ವದಲ್ಲಿ ಪೆÇಲೀಸ್ ಭದ್ರತೆಯಲ್ಲಿ ಮತ ಎಣಿಕೆ ನಡೆದು ಯಾವುದೇ ರೀತಿಯ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಶಸ್ವಿಯಾಗಿ ಮತಎಣಿಕೆಯ ನಡೆಸಿದರು.