ನಂಜನಗೂಡು ಕೈ ಅಭ್ಯರ್ಥಿ ದರ್ಶನ್ ದ್ರುವನಾರಾಯಣ್

ಮೈಸೂರು: ಮಾ.16:- ಸ್ವತಃ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಅಖಾಢಕ್ಕಿಳಿದು ಮಾಜಿ ಸಂಸದ ದಿ.ದ್ರುವನಾರಾಯಣ್ ಅವರ ಪುತ್ರ ದರ್ಶನ್‍ಗೆ ಟಿಕೇಟ್ ಖಚಿತ ಪಡಿಸುವ ಮೂಲಕ ಬಹು ನಿರೀಕ್ಷಿತ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ ಬಿದಿದ್ದೆ.
ಹೌದು ನಂಜನಗೂಡು ಆಕಾಂಕ್ಷಿಯಾಗಿ ಮಾಜಿ ಸಂಸದ ದ್ರುವನಾರಾಯಣ್ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದ್ರುವನಾರಾಯಣ್ ಅವರಿಗೆ ಟಿಕೇಟ್ ಖಚಿತವಾಗಿತ್ತು. ಆದರೆ, ಅವರು ಅಕಾಲಿಕ ನಿಧನವಾದರು. ಮಾತ್ರವಲ್ಲದೆ ಅವರ ನಿಧನದ ದಿನದಂತೆ ಸಿದ್ದರಾಮಯ್ಯಗೆ ಕೆಲ ಬೆಂಬಲಿಗರು ಘೆರಾವ್ ಹಾಕಿ ಪುತ್ರನಿಗೆ ಟಿಕೇಟ್ ಕೊಡುವಂತೆ ಆಗ್ರಹಿಸಿ ಆಕ್ರೋಶ ಸಹ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರಲ್ಲಿಯೂ ದ್ರುವನಾರಾಯಣ್ ಪುತ್ರನಿಗೆ ಟಿಕೇಟ್ ಕೊಡುವಂತೆ ಒತ್ತಡ ಸಹ ಹಾಕಿದ್ದ ಸನ್ನಿವೇಶ ನಡೆದಿತ್ತು.
ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರ ದರ್ಶನ್‍ಗೆ ಟಿಕೇಟ್ ಕೊಡುವ ಸುಳಿವು ಸಹ ಮೊನ್ನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ರುವನಾರಾಯಣ್ ಶ್ರದ್ಧಾಂಜಲಿ ಸಭೆಯಲ್ಲಿ ನಂಜನಗೂಡು ಭಾಗದ ಮುಖಂಡರು ದ್ರುವ ಪುತ್ರನಿಗೆ ಬಹುಬೇಗ ಟಿಕೇಟ್ ಘೋಷಿಸಿ, ಇಲ್ಲದಿದ್ದರೆ ಇದರ ಪರಿಣಾಮ ಇತರೆ ಕ್ಷೇತ್ರಗಳ ಮೇಲೂ ಬೀರಲಿದೆ ಎಂದು ಒತ್ತಡ ಹೇರಿದ್ದರು. ದರ್ಶನ್‍ಗೆ ಟಿಕೇಟ್ ಖಚಿತವಾಗಿರುವ ಬಗ್ಗೆ ಜನಮಿತ್ರ ದಿನಪತ್ರಿಕೆಯೂ ಸುದ್ದಿ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ವಿಜಯನಗರದಲ್ಲಿರುವ ದ್ರುವನಾರಾಯಣ್ ನಿವಾಸಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಭೇಟಿ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುತ್ತಿದ್ದೇನೆ. ದ್ರುವನಾರಾಯಣ್ ನಿಧನ ನಮಗೆಲ್ಲಾ ಸಾಕಷ್ಟು ನೋವು ತಂದಿದ್ದು, ತುಂಬಲಾರದ ನಷ್ಟ ಸಹ ಆಗಿದೆ. ಅಧಿಕಾರಕ್ಕಿಂತಲೂ ಮಿಗಿಲಾಗಿ ನಮ್ಮೊಂದಿಗೆ ಅವರಿಲ್ಲದಾಗಿರುವುದು ಬೇಸರ ತರಿಸಿದೆ. ಅವರ ನಿಧನದ ದಿನದಂತೆ ಮಾನಸಿಕವಾಗಿ ಈ ಕ್ಷೇತ್ರವನ್ನು ಬಿಟ್ಟು ಬಿಡುವ ತೀರ್ಮಾನ ಕೈಗೊಂಡಿದ್ದೇನು. ಅದರಂತೆ ಇಂದು ಅವರ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದೇನೆ. ದರ್ಶನ್ ಅವರೊಟ್ಟಿಗೆ ಮಾತನಾಡಿ ದೈರ್ಯ ಹೇಳಿ ಸಾಂತ್ವ ಹೇಳಿದ್ದೇನೆ. ರಾಜಕೀಯವಾಗಿ ನಾನಾಗಿಯೇ ಆಕಾಂಕ್ಷಿ ಆಗಿರಲಿಲ್ಲ. ನಂಜನಗೂಡಿನ ಜನತೆ ಅಭಿವೃದ್ಧಿ ವಿಚಾರವಾಗಿ ನಾನು ಅಭ್ಯರ್ಥಿ ಆಗಬೇಕೆಂಬ ನನ್ನ ಮೇಲೆ ಒತ್ತಡ ಬಯಕೇ ಇತ್ತು. ಅದೇ ರೀತಿ ದ್ರುವನಾರಾಯಣ್ ಅವರಿಗೂ ಜನತೆ ಒತ್ತಡ, ಬಯಕೆಯಿತ್ತು. ಅಂತಿಮವಾಗಿ ಹೈಕಮಾಂಡ್ ಎನೆಂದು ತೀರ್ಮಾನಿಸಿತ್ತೆಂಬುದು ಗೊತ್ತಿಲ್ಲ.
ಅಷ್ಟರಲ್ಲಿ ಅವರಿಗೆ ಬಂದಂತೆ, ಬಾಯಿಗೆ ಬಂದಂತೆ ತೀರ್ಮಾನ ಮಾಡಿಕೊಂಡು ತಪ್ಪು ತಿಳುವಳಿಕೆ ಮಾಡಿಕೊಂಡು ಅದನ್ನು ಹಬ್ಬಿಸಿದ್ದರು. ಅದನ್ನು ರಾಜಕೀಯವಾಗಿ ಖಂಡಿಸುತ್ತೇನೆ. ಅಂತಹ ನಡೆಯಿಂದ ಸಾರ್ವಜನಿಕ ಕ್ಷೇತ್ರಕ್ಕೊಂದು ಅಪಕೀರ್ತಿ ಆಗಲಿದೆ. ಅದಕ್ಕಾಗಿ ಯಾರದೋ ಒತ್ತಡ ಅಥವಾ ಚರ್ಚೆಗಾಗಲಿ ಅಲ್ಲ. ನನಗೆ ನಾನು ಸ್ಪರ್ಧೆಯಿಂದ ಹಿಂದೆ ಸರಿದೂ ದರ್ಶನ್‍ಗೆ ಬೆಂಬಲ ಸೂಚಿಸಬೇಕೆಂಬ ಮನಸ್ಸು ಮಾಡಿ ನನ್ನ ನಿರ್ಧಾರವನ್ನು ಇಂದು ಪ್ರಕಟಿಸಿದ್ದೇನೆಂದರು. ನನ್ನ ಅಭಿಮಾನಿಗಳು ಬೇಸರ ಮಾಡಿಕೊಳ್ಳದೇ, ನೋವು ಪಟ್ಟುಕೊಳ್ಳದೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ. ಮುಂದೆ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ. ಮುಂದೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ. ನನಗೆ ಸುನೀಲ್‍ಬೋಸ್ ಬೇರೆ ಅಲ್ಲ, ದರ್ಶನ್ ಬೇರೆ ಅಲ್ಲ ಇಬ್ಬರೂ ಒಂದೆ ಹಾಗಾಗಿ ಇಬ್ಬರ ಗೆಲುವಿಗೂ ಓಡಾಡುತ್ತೇನೆಂದರು.
ಈ ಮೂಲಕ ದರ್ಶನ್ ದ್ರುವನಾರಾಯಣ್‍ಗೆ ನಂಜನಗೂಡು ಟಿಕೇಟ್ ಖಚಿತವಾಗಿದ್ದು, ಘೋಷಣೆಯೊಂದೆ ಬಾಕಿ ಆಗಿದೆ. ಶೀಘ್ರದಲ್ಲೇ ರಾಹುಲ್‍ಗಾಂಧಿಯವರು ದ್ರುವನಾರಾಯಣ್ ಅವರ ಮನೆಗೆ ಬರುತ್ತಾರೆಂಬ ಮಾತಿದ್ದು, ಅಷ್ಟರಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ.