
ನಂಜನಗೂಡು: ಫೆ.21:- ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಯಾತ್ರ ನಂಜನಗೂಡಿನಲ್ಲಿ ಸೋಮವಾರ ರಾತ್ರಿ ಅಭೂತಪೂರ್ವ ಜನ ಬೆಂಬಲದ ನಡುವೆ ವಿಜೃಂಭಣೆಯಿಂದ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧ್ರುವನಾರಾಯಣ್ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮತ್ತು ಕಾರ್ಯಕರ್ತರು ನಾಗರೀಕರು ಉತ್ಸಾಹದಿಂದ ಬಾರಿ ಗಾತ್ರದ ಹೂವಿನ ಹಾರ ಹಾಕಿ ಬೈಕ್ ರಾಲಿ ಮೂಲಕ ಮತ್ತು ಪೂರ್ಣಕುಂಭ ಸಮೇತ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಅಪಾರ ಪ್ರಮಾಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಕಡು ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆ ಬೇಕಿದೆ ಬಡವರ ಕಷ್ಟ ಲೇಖಿಸದೆ ಸರ್ಕಾರ ಖಜನೆ ಲೂಟಿ ಮಾಡುತ್ತಿದೆ. ಲಂಚ ಮತ್ತು ಮಂಚಕ್ಕಾಗಿ ಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದಾರೆ ಅಧಿಕಾರದಲ್ಲಿರುವ ಯಾವುದೇ ನೈತಿಕತೆ ಅವರಿಗಿಲ್ಲ ಚಾಮರಾಜನಗರದಲ್ಲಿ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ 36 ಅಮಾಯಕರನ್ನು ಕೊಂದರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ 36 ಕುಟುಂಬಗಳ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುತ್ತೇವೆ.
ಇನ್ನು ಐವತ್ತು ದಿನಗಳು ಕಳೆದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಪ್ರಕಟಿಸಿದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ದೊಡ್ಡ ದೊಡ್ಡ ಸಚಿವರ ಪಡೆ ಇದೆ ನಾನು ಈಗ ಎಂಟನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ನಾವು ನಾಮಪತ್ರ ಸಲ್ಲಿಸಿ ಓಟು ಚಲಾಯಿಸಲು ಮಾತ್ರ ಹೋಗುತ್ತೇವೆ ನಮ್ಮತ್ತೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಚಿವರು ಈ ಸವಾಲು ಸ್ವೀಕರಿಸಲು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆ ಹಾಕಿ ನಾನು ಈ ಮಾತನ್ನು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಾನದಲ್ಲಿ ನಿಂತು ಅವರಿಗೆ ಸವಾಲು ಹಾಕುತ್ತಿರುವೆ ಎಂದರು.
ವಿಧಾನಸೌಧದ ಪ್ರತಿ ಗೋಡೆಯು ಕಾಸು ಕಾಸು ಅಂತಿದೆ ಈ ಮಟ್ಟಕ್ಕೆ ಭ್ರಷ್ಟಾಚಾರ ಮಿತಿಮೀರಿದೆ ಬಿಜೆಪಿ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಖಾತೆಗೂ 15 ಲಕ್ಷ ಹಣ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಂದು ಆಶ್ವಾಸನೆ ನೀಡಿದರು ಯಾವುದೂ ಬರಲಿಲ್ಲ ಆದರೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿ ಜಿ ಎಸ್ ಟಿ ಲೂಟಿ ಬಡವರು ಜೀವನ ನಡೆಸುವುದೇ ಕಷ್ಟಕರವಾಗಿದೆ.
ಕೊರೋನಾದಂತಹ ಸಂಕಷ್ಟ ಸಮಯದಲ್ಲೂ ಹಣ ಲೂಟಿ ಮಾಡಿದರು ಈ ಬಿಜೆಪಿಯವರು ಬೊಗಳೆ ಬಿಟ್ಟು ಜನರಿಗೆ ಮಂಕು ಬೂದಿ ಎರಚಿದರು ಇದು ಎಲ್ಲರಿಗೂ ಈಗ ಅರಿವಾಗಿದೆ ಇದಕ್ಕೆ ತಕ್ಕ ಪಾಠವನ್ನು ಮುಂದಿನ ಚುನಾವಣೆಯಲ್ಲಿ ಕಲಿಯಲಿದ್ದಾರೆ ಇವರು ಮನೆಗೆ ಹೋಗುವುದು ಖಚಿತ ಎಂದರು.
ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧೃವ ನಾರಾಯಣ್ ಅವರು ಉತ್ತಮ ಕೆಲಸಗಾರರು ಯಾವುದೇ ಕೆಲಸ ವಹಿಸಿದರು ಕೂಡ ನಿಷ್ಠೆಯಿಂದ ಮಾಡಿ ಕೊಡುತ್ತಾರೆ ಇವರು ಸಂಸದ ಸಮಯದಲ್ಲಿ ಉತ್ತಮ ಕೆಲಸ ಮಾಡಿ ರಾಜ್ಯಕ್ಕೆ ದೇಶಕ್ಕೆ ಒಳ್ಳೆ ಹೆಸರು ತಂದುಕೊಟ್ಟಿದ್ದಾರೆ ಎಂದು ಹಾಡಿ ಹೊಗಳಿದರು
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ದ್ರುವ ನಾರಾಯಣ್ ಮತ್ತು ಡಿಕೆ ಶಿವಕುಮಾರ್ ಮಾತ್ರ ಮಾತನಾಡುವ ಅವಕಾಶ ಇತ್ತು ಮಾಜಿ ಸಚಿವ ಎಚ್ ಮಾದೇವಪ್ಪನವರಿಗೆ ಮಾತನಾಡಲು ಅವಕಾಶ ಕೊಡಿ ಎಂದು ಅಭಿಮಾನಿಗಳು ಒತ್ತಾಯಿಸಿದರು ಇದಕ್ಕೆ ಡಿಕೆ ಶಿವಕುಮಾರ್ ಅವರು ಮಾದೇವಪ್ಪನವರ ಕ್ಷೇತ್ರದ ನರಸೀಪುರದಲ್ಲಿ ನಾಲ್ಕು ಗಂಟೆ ಕಾಲ ಭಾಷಣ ಮಾಡಿದ್ದೇವೆ ಎಂದರು ಆದರೂ ಇವರ ಭಾಷಣ ಮುಗಿದ ನಂತರ ಮಾತನಾಡಲು ಅವಕಾಶ ನೀಡಿದರು ಡಾಕ್ಟರ್ ಎಚ್ ಸಿ ಮಾದೇವಪ್ಪ ಮಾತನಾಡಲು ಆರಂಭಿಸಿದಾಗ ನೆರೆದಿದ್ದ ಕಾರ್ಯಕರ್ತರು ಎದ್ದು ನಿಂತು ಹೊರಡಲು ಸಿದ್ಧರಾದರು ಒಂದೇ ನಿಮಿಷದಲ್ಲಿ ತಮ್ಮ ಭಾಷಣ ಮುಗಿಸಿದರು.
ನಂಜನಗೂಡು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಆರ್ ಧ್ರುವನಾರಾಯಣ್ ಮಾತನಾಡಲು ಆರಂಭಿಸಿದಾಗ ಕಾರ್ಯಕರ್ತರಿಂದ ಚಪ್ಪಾಳೆ ಸುರಿಮಳೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಡಾಕ್ಟರ್ ಎಚ್ ಸಿ ಮಾದೇವಪ್ಪ ಎಚ್ ಎಂ ರೇವಣ್ಣ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಮಾಜಿ ಸಂಸದ ಉಗ್ರಪ್ಪ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಡಾ. ತಿಮ್ಮಯ್ಯ ನಟ ಸಾಧುಕೋಕಿಲ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪ ಅಮರನಾಥ್ ಡಾಕ್ಟರ್ ವಿಜಯಕುಮಾರ್ ಉಸ್ತುವಾರಿ ಈರೇಹಳ್ಳಿ ಸೋಮೇಶ್ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಶಂಕರ್ ಶ್ರೀಕಂಠ ನಾಯಕ ಮುಖಂಡರಾದ ಮಾರುತಿ ಅಕ್ಬರ್ ನಗರಸಭೆ ಸದಸ್ಯರಾದ ಗಂಗಾಧರ ಮಹೇಶ್ ಗಾಯತ್ರಿ ಸಿದ್ದೀಕ್ ಪ್ರದೀಪ್ ಮತ್ತು ಅಜ್ಗಾರ್ ಇಂಧನ ಬಾಬು ಕಲ್ಪುರ ಸ್ವಾಮಿ ಮರಿಸ್ವಾಮಿ ಸೇರಿ ದಂತೆ ಇತರರು ಇದ್ದರು