
ನಂಜನಗೂಡು: ಮಾ.09:- ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿ ಜೆ ಪಿ ನಡುವೆ ನೇರ ಪೈಪೆÇೀಟಿ ನಡೆಯಲಿದೆ ಜೆ ಡಿ ಎಸ್ ಅಭ್ಯರ್ಥಿಯನ್ನು ಹಾಕಿದರೂ ಅವರಿಗೆ ಅಷ್ಟು ಮತಗಳು ಸಿಗುವುದಿಲ್ಲ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿದರು
ಅವರು ಬುಧವಾರದಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ದೊಡ್ಡ ಕೌಲಂದೆ, ಗಟ್ಟವಾಡಿ, ಗಟ್ಟವಾಡಿ ಪುರ, ಹೆಳವರ ಹುಂಡಿ, ಅರಗನಪುರ,ನೇರಳೆ, ಹಂಪಪುರ ಮತ್ತು ಹಳೇ ಪುರ ಗ್ರಾಮಗಳ ಪ್ರವಾಸ ಕೈಗೊಂಡು ಕೌಲಂದೆ ಗ್ರಾಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ
ಕೌಲಂದೆ ಗ್ರಾಮ ಯಾವಾಗಲೂ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಾ ಬಂದಿದೆ ನಾನು ಲೋಕಸಭಾಗೆ ಸ್ಪರ್ಧಿಸಿದಾಗಲೂ ಮೂರು ಬಾರಿಯೂ ನನಗೆ ಅತ್ಯಧಿಕವಾಗಿ ಮತವನ್ನು ನೀಡಿದ್ದೀರಿ ಈ ಬಾರಿಯೂ ಕಾಂಗ್ರೆಸ್ನ್ನು ಬೆಂಬಲಿಸ ಬೇಕು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿ ಜೆ ಪಿ ಸರ್ಕಾರ ಇದೆ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ ಸಿದ್ರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ನೀಡಿದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ರೈತರ ಸಾಲ ಮನ್ನಾ, ನಿಗಮಗಳಲ್ಲಿ ತೆಗೆದುಕೊಂಡಂತ ಸಾಲಗಳ ಮನ್ನಾ ಇಂತ ಯೋಜನೆಗಳು ಮನೆ ಮಾತಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಿದ್ದರಾಮಯ್ಯನವರು 3600 ಕೋಟಿಗಳನ್ನು ಅನುದಾನವನ್ನು ನೀಡಿದರು ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 1100 ಕೋಟಿ ಅನುದಾನವನ್ನು ಮಾತ್ರ ನೀಡಿದೆ ಬಿಜೆಪಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅವರಿಗೆ ಇಲ್ಲ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರಿಗೂ ಅಲ್ಪಸಂಖ್ಯಾತರಿಗೆ ಅವರು ವಿಧಾನಸಭೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿಲ್ಲ ಮಂತ್ರಿ ಮಂಡಲದಲ್ಲಿಯೂ ಸಹ ಒಬ್ಬ ಸಚಿವರಿಗೆ ಅವರು ಅವಕಾಶ ಮಾಡಿ ಕೊಟ್ಟಿಲ್ಲ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಹಲವು ಜನ ಅಲ್ಪಸಂಖ್ಯಾತ ಮಂತ್ರಿಗಳು ಮಂತ್ರಿ ಮಂಡಲದಲ್ಲಿದ್ದರು. ದಲಿತರಿಗೆ ಮತ್ತು ಹಿಂದುಳಿದವರಿಗೆ ರೂ.30000 ಕೋಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ನೀಡಿತು ಬಿಜೆಪಿ ಸರ್ಕಾರ ಅನುದಾನವನ್ನು ಕಡಿತಗೊಳಿಸಿದೆ. ಭಾರತ ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಬಿಜೆಪಿ ಶಾಸಕರು ಒಬ್ಬರ ಮನೆಯಲ್ಲಿ 8 ಕೋಟಿ ಅನಾಧಿಕೃತ ಹಣ ದೊರಕಿದೆ ಆ ಶಾಸಕರು ನಾಪತ್ತೆಯಾಗಿದ್ದು ಜಾಮೀನು ದೊರೆತ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಅದರಿಂದ ನಾವು ಆದಷ್ಟು ಬೇಗ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು.
ಬಿಜೆಪಿಯ ಸಚಿವರುಗಳೇ ಈಗ ಕಾಂಗ್ರೆಸ್ಸಿಗೆ ಸೇರ್ಪಡೆಯಾಗುತ್ತಿದ್ದಾರೆ ಹಾಲಿ ಶಾಸಕರುಗಳು ಮಾಜಿ ಶಾಸಕರುಗಳು ಸಚಿವರುಗಳು ಬಿಜೆಪಿಯ ಸಾಲು ಸಾಲು ಶಾಸಕ ಸಚಿವರು ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಕಾಂಗ್ರೆಸ್ ಅಲೆ ರಾಜ್ಯಾದ್ಯಂತ ಇದೆ ಮುಂದಿನ ದಿನಗಳಲ್ಲಿ ಅಧಿಕಾರ ನಮ್ಮದೇ ಆಗಿರುತ್ತದೆ ಚುನಾವಣೆ ಸಂದರ್ಭದಲ್ಲಿ ಯುವ ಜನತೆ ಮತ ಚಲಾಯಿಸುವುದನ್ನು ಮರೆಯಬಾರದು ಒಂದೊಂದು ಮತವು ತುಂಬಾ ಮುಖ್ಯವಾಗಿರುತ್ತದೆ ಒಂದೇ ಮತದಲ್ಲಿ ಗೆದ್ದ ಉದಾಹರಣೆಗಳು ಕೂಡ ತುಂಬಾ ಇದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ನಂಜನಗೂಡು ಕೆಪಿಸಿಸಿ ಉಸ್ತುವಾರಿಯಾದ ಕೆಎಸ್ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಂಕರ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ದೇಬುರ್ ಅಶೋಕ್, ಕಾಂಗ್ರೆಸ್ ಮುಖಂಡರುಗಳಾದ ನಾಗೇಶ್ ರಾಜ್, ಶಿವಪ್ಪ ದೇವನೂರು, ಶ್ರೀಕಂಠನಾಯಕ, ದೊರೆಸ್ವಾಮಿ, ಮುದ್ ಮಾದೆ ಶೇಟರು, ಕೌಲಂದೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ್ ನಾಯಕ್, ಅಜಯ್, ನಜ್ರುಲ್ಲಾ ಖಾನ್ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ತಾಲೂಕ ಪಂಚಾಯತಿ ಸದಸ್ಯರು ಅಲ್ತಾಫ್ ಉಲ್ಲಾ ಖಾನ್, ಖಲೀಲ್ ಅಹ್ಮದ್, ನಾಜಿಬ್ ಉಲ್ಲಾಖಾನ್ ಇನ್ನೂ ಮುಂತಾದ ಕಾಂಗ್ರೆಸ್ ಮುಖಂಡರುಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು