ನಂಜನಗೂಡು : ಮಾ.29:- ಆರ್ ಧ್ರುವನಾರಾಯಣ್ ಅವರ ಕಳೆದ ಬಾರಿಯ ಸೋಲಿನಿಂದ ಚಾಮರಾಜನಗರಕ್ಕೆ ನಷ್ಟವಾಯಿತು ಆದರೆ ಈ ಬಾರಿ ಅದು ಪುನರಾವರ್ತಿತ ರಾಗ ಬಾರದು ಕಟ್ಟಿ ಬೆಳೆಸಿದ ಅವರ ಕಾರ್ಯಕ್ಷೇತ್ರವಾಗಿದ್ದ ನಂಜನಗೂಡಿನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಬಹುಮತಗಳಿಂದ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು
ನಂಜನಗೂಡು ನಗರದ ವಿದ್ಯಾವರ್ಧಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆರ್ ಧ್ರುವನಾರಾಯಣ್ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರದ ಸಿದ್ದರಾಮಯ್ಯ ಅವರೊಡನೆ ಧ್ರುವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು
ಆದರ್ಶ ಸಂಸದ ರೆನಿಸಿದ್ದರು ಆರ್ ಧ್ರುವನಾರಾಯಣ್ ಅವರು ಕಳೆದ ಬಾರಿ ಸೋತುದರಿಂದಾಗಿ ಅವರಿಗೆ ಮಾತ್ರವಲ್ಲ ಇಡೀ ಚಾಮರಾಜನಗರ ಜಿಲ್ಲೆಗೆ ನಷ್ಟ ಆಯಿತು ಎಂದು ನುಡಿದರು
ಜೊತೆಗೆ ರಾಜಕಾರಣದಲ್ಲಿ ಕೆಲಸ ಮಾಡಿದರು ಸೋಲುತ್ತಾರೆ ಕೆಲಸ ಮಾಡದೆ ಇರುವವರು ಸೋಲುತ್ತಾರೆ ಆದರೆ ಧ್ರುವ ಸರ್ವೆನಿಂದಾಗಿ ಇಡೀ ನಾಡಿಗೆ ನಷ್ಟವಾಗಿದೆ ಇನ್ನು ಈ ನವೀನ ಬಳಿಕ ಯಾರಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬ ವಿಷಯ ಬಂದಾಗ ಅವರ ಪುತ್ರ ದರ್ಶನ್ ಅವರಿಗೆ ನೀಡಲಾಗಿದೆ ಅವರ ಗೆಲುವು ಎಲ್ಲರ ಗೆಲುವು ಆಗಲಿರುವ ಕಾರಣ ಅವರಿಗೆ ಹೆಚ್ಚಿನ ಮತ ನೀಡಿ ವಿಧಾನಸೌಧಕ್ಕೆ ಕಳಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದರು ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಆರ್ ಧ್ರುವನಾರಾಯಣ್ ಇಷ್ಟು ಬೇಗ ಎಲ್ಲರನ್ನು ಬಿಟ್ಟು ಹೋಗುತ್ತಾರೆಂದು ಯಾರು ಅಂದುಕೊಂಡಿರಲಿಲ್ಲ ದೇವರು ಬಹಳ ಕ್ರೂರಿ ಯಾಗಿದ್ದಾನೆ ಅವರ ಆದರ್ಶಗಳನ್ನು ಈಡೇರಿಸುವುದೇ ಅವರಿಗೆ ನಾವು ಸಲ್ಲಿಸುವ ನಮನ ವಾಗಿದೆ ಎಂದು ಧ್ರುವ ಜೊತೆಗಿನ ಒಡನಾಟ ಸ್ಮರಿಸಿದರು
ಅವರು ಇಡೀ ಬದುಕನ್ನು ರಾಜಕಾರಣಕ್ಕೆ ಅರ್ಪಿಸಿಕೊಂಡಿದ್ದರು. ಸುಖ ಜೀವನಕ್ಕೆ ಮಾರು ಹೋಗಲಿಲ್ಲ ಸಂಸದ ಶಾಸಕರಾದರು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಿರಲಿಲ್ಲ ಶಾಸಕರಾಗಿ ಸಂಸದರಾಗಿ ಜನಪರ ಕೆಲಸಗಳನ್ನು ಮಾಡಿದ್ದರು ಅವರಿಂದಾಗಿ ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಕಂಡಿದೆ ಎಂದು ನೆನೆದರು
ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಧ್ರುವ ಮಾತನಾಡಿ ಹಿರಿಯರು ತಮ್ಮ ತಂದೆಯನ್ನು ಮುಂದೆ ನಡೆಸಿದರು ಈಗ ತಾವು ಸಹ ಹಿರಿಯರಲ್ಲಿಯೇ ತಮ್ಮ ತಂದೆಯನ್ನು ಕಾಣುತ್ತಿದ್ದು ತಮಗೂ ಆಶೀರ್ವಾದ ಮಾಡುವ ಮೂಲಕ ತಮಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು
ನಮ್ಮ ತಂದೆ ದೈಹಿಕವಾಗಿ ಮರೆಯಾದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಜನಸೇವೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು ನಮಗೆ ಯಾವತ್ತೂ ರಾಜಕೀಯ ಹೇಳಿಕೊಟ್ಟಿಲ್ಲ ನನ್ನ ತಂದೆಗೆ ಆಶೀರ್ವಾದ ನೀಡಿದಂತೆ ನನಗೂ ಪಕ್ಷದ ಎಲ್ಲ ಹಿರಿಯ ನಾಯಕರು ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು ಕ್ಷೇತ್ರದ ಪ್ರತಿಯೊಬ್ಬರಲ್ಲೂ ನನ್ನ ತಂದೆಯನ್ನು ಕಾಣುತ್ತಿದ್ದೇನೆ ಕ್ಷೇತ್ರದ ಮತದಾರರು ನನಗೆ ಒಂದು ಅವಕಾಶವನ್ನು ಮಾಡಿಕೊಟ್ಟರೆ ನಮ್ಮ ಇಡೀ ಕುಟುಂಬ ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇವೆ ಎಂದು ದರ್ಶನ್ ಧ್ರುವನಾರಾಯಣ್ ನುಡಿದರು
ಈ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಶಾಸಕರಾದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳೆ ಮಜಿ ಶಾಸಕ ಕಳಲೆ ಕೇಸವಮೂರ್ತಿ ಶಾಸಕರಾದ ಡಾ. ತಿಮ್ಮಯ್ಯ ಡಾಕ್ಟರ್ ಯತೀಂದ್ರ ಪುಟ್ಟರಂಗಶೆಟ್ಟಿ ನರೇಂದ್ರ ಅನಿಲ್ ಚಿಕ್ಕಮಾದು ಡಾಕ್ಟರ್ ಪುಷ್ಪ ಅಮರ್ನಾಥ್ ಗಣೇಶ್ ಪ್ರಸಾದ್ ಬಾಲರಾಜು ಜಯಣ್ಣ ಜಿಲ್ಲಾಧ್ಯಕ್ಷ ವಿಜಯಕುಮಾರ್ ಉಸ್ತುವಾರಿ ಸೋಮೇಶ್ ನಂಜುಂಡಸ್ವಾಮಿ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ನಗರ ಅಧ್ಯಕ್ಷ ಶಂಕರ್ ಬೇಬೂರು ಅಶೋಕ್ ನಗರಸಭೆ ಸದಸ್ಯರುಗಳು ಗಂಗಾಧರ ಪ್ರದೀಪ್ ಗಾಯತ್ರಿ ಸಿದ್ದಿಕ್ ಸೇರಿದಂತೆ ಇತರರು ಇದ್ದರು