ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗಿ, ಶೋಷಿತರ ಪರವಾಗಿ ನಿರಂತರವಾಗಿ ಹೋರಾಡಿಃ ಜೀತೇಂದ್ರ ಕಾಂಬಳೆ

ವಿಜಯಪುರ, ಜೂ.10-ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾ ಸಮಿತಿ ವತಿಯಿಂದ ಪ್ರೊ. ಬಿ.ಕೃಷ್ಣಪ್ಪ ಅವರ 84ನೇ ಜನ್ಮದಿನ ಆಚರಣೆ ದಲಿತ ಚೇತನ ಶೋಷಿತ ಸಮುದಾಯಗಳ ಧ್ವನಿ ಪ್ರಖಂಡ ಹೋರಾಟಗಾರ ಚಿಂತಕ ಸಾಹಿತಿ ಅಂಬೇಡ್ಕರ್ ಅವರ ರಥವನ್ನು ಕನ್ನಡ ನಾಡಿನಾದ್ಯಂತ ಎಳೆದು ಮುಂದೊಯ್ದ ಸಮಾಜ ಸುಧಾರಕ ಪ್ರೊ. ಬಿ.ಕೃಷ್ಣಪ್ಪನವರ 94ನೇ ಜನ್ಮದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಶಾಖೆ ವಿಜಯಪುರ ಇವರ ಸಾರಿ ಪುತ್ರ ಬುದ್ಧ ವಿಹಾರದಲ್ಲಿ ಆಚರಿಸಲಾಯಿತು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ರಾಜ್ಯಸಂಘಟನಾ ಸಂಚಾಲಕರಾದ ಜೀತೇಂದ್ರ ಕಾಂಬಳೆ ಮಾತನಾಡಿ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗಿ, ಶೋಷಿತರ ಪರವಾಗಿ ನಿರಂತರವಾಗಿ ಹೋರಾಡಿ ತಳಸಮುದಾಯವನ್ನು ಜಾಗೃತಿಗೊಳಿಸಿ ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸನ್ನು ನನಸಲು ಮಾಡಲು ಮತ್ತು ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಶ್ರಮಿಸಿದರು.
ಕೇವಲ ದಲಿತರ ಹಕ್ಕುಗಳನ್ನಾಗಲಿ ಅಷ್ಟೇ ಹೋರಾಟ ಮಾಡದೆ ಮೇಲ್ವರ್ಗದ ಶೋಷಣೆಗೊಳಪಟ್ಟ ಸಮುದಾಯಗಳ ಪರವಾಗಿ ಧ್ವನಿ ಎತ್ತಿ ಹೋರಾಟದೊಂದಿಗೆ ನ್ಯಾಯ ಒದಗಿಸುವ ಕಾರ್ಯ ಶ್ಲಾಘನೀಯ. ಇಂದು ಪ್ರೊ. ಬಿ.ಕೃಷ್ಣಪ್ಪರವರ ಪತ್ನಿಯಾದ ಮಾತೋಶ್ರೀ ಇಂದಿರಾ ಕೃಷ್ಣಪ್ಪನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿ ಬಿ.ಕೃಷ್ಣಪ್ಪನವರ ಹಾದಿಯಲ್ಲಿ ಸಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ಕಂಬಾಗಿ, ಜಿಲ್ಲಾ ಸಂಘಟನಾ ಸಂಚಾಲಕ ಮಹಾಂತೇಶ ರಾಠೋಡ, ಹುಚ್ಚಪ್ಪ ಲೋಕುರ, ಹುಸೇನಿ ಜಿಗಜಿಣಗಿ, ದಿಲೀಪ ಶಿಂಗೆ, ಮಹಾದೇವ ಬನಸೋಡೆ, ಜೂಲಿ ಲಕ್ಷ್ಮೀ ಕಾಂಬಳೆ, ಕಸ್ತೂರಿಬಾಯಿ ಕಂಬಾಗಿ,ಸವಿತಾ ಚಲವಾದಿ ಮತ್ತು ಕಾರ್ಯಕರ್ತರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.