ಕಲಬುರಗಿ,ಜೂ,12 : ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆ ತಮ್ಮ ಜೀವನದುದ್ದಕ್ಕೂ ನೊಂದವರ, ಶೋಷಿತರ, ದಮನಿತರ ಪರ ಹೋರಾಟ ಮಾಡುವ ಮೂಲಕ ಅವರಿಗೆ ನ್ಯಾಯವನ್ನು ಒದಗಿಸಿಕೊಟ್ಟಿದ್ದರು, ಧನಿಯಿಲ್ಲದವರಿಗೆ ಧ್ವನಿಯನ್ನು ನೀಡಿದ್ದ ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.
ಭಾನುವಾರ ಸಂಜೆ ಕಮಲಾಪುರ ತಾಲೂಕು ಕಸಾಪ ಘಟಕದ ವತಿಯಿಂದ ಲೇಂಗಟಿ ಗ್ರಾಮದ ಜೈ ಹನುಮಾನ ದೇವಸ್ಥಾನದಲ್ಲಿ ಹಮ್ಮಿಕೊಂಡ “ಇರವೇಕು ಇಂಥವರು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ರೈತ, ಕಾರ್ಮಿಕ ಪರ ಹೋರಾಟಗಾರರಾದ ಹೋರಾಟ ರತ್ನ ಎಂದೇ ಖ್ಯಾತರಾಗಿದ್ದ ಕಾಮ್ರೇಡ್ ಮಾರುತಿ ಮನ್ಪಡೆ ಅವರ ಕುರಿತು ಸರಣಿ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನ್ಪಡೆ ತಮ್ಮ ಜೀವನದುದ್ದಕ್ಕೂ ಹೋರಾಟವನ್ನು ಮೈಗೂಡಿಸಿಕೊಂಡು ಹತ್ತಾರು ಸಮಸ್ಯೆಗಳನ್ನು ಬಗೆಹರಿಸುವ ಯಶಸ್ವಿಯಾಗಿದ್ದರು, ಅಧಿಕಾರ ಶಾಹಿಗಳ ಕುತಂತ್ರದಿಂದ ಹಲವಾರು ಬಾರಿ ಪೆÇಸಲಿರ ಲಾಠಿ ರುಚಿ ತಿಂದು ಜೈಲಿಗೆ ಹೋಗಿ ಬಂದು ದೃತಿಗೆಡದೆ ನಿರಂತರವಾಗಿ ಹೋರಾಟ ಮಾಡಿದ್ದರು ಎಂದರು. ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಆಶಯ ನುಡಿಗಳನ್ನು ಆಡುತ್ತ ತಾಲೂಕಿನ ವ್ಯಾಪ್ತಿಯಲ್ಲಿ ಈ ಹಿಂದೆ ನಿಶ್ವಾರ್ಥ ಮಾಡಿ ನಮ್ಮನ್ನು ಅಗಲಿದ ಮಹನಿಯರನ್ನು ಸ್ಮರಿಸಿ ಅವರ ತತ್ವಾದರ್ಶಗಳನ್ನು ಯುವ ಜನತೆಯಲ್ಲಿ ಬಿತ್ತುವ ಕೆಲಸ ಪ್ರಾಮಾಣಿಕವಾಗಿ ಕಸಾಪ ಮಾಡುತ್ತದೆ, ತಾಲೂಕಿನ ವ್ಯಾಪ್ತಿಯಲ್ಲಿ ಸಾಹಿತ್ಯಕ ವಾತಾವರಣ ಮೀಡಿಸಲು ಶ್ರಮಿಸುತ್ಯಿದ್ದೇವೆ ಎಂದರು,ಮಡಕಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಠಾಳೆ, ಯುವ ಹೋರಾಟಗಾರ ಸುನೀಲ ಮಾನ್ಪಡೆ ಮಾತನಾಡಿದರು. ಈ ಸಂದರ್ಭದಲ್ಲಿ ಮನ್ಪಡೆಯವರ ಹೋರಾಟಗಳಲ್ಲಿ ಭಾಗಿಯಾಗಿದ್ದ ಜೊತೆಗಾರರನ್ನು ಸತ್ಕರಿಸಲಾಯಿತು.ಈ ಸಂದರ್ಭದಲ್ಲಿನಿವೃತ್ತ ಶಿಕ್ಷಕ ಜಯರಾಂ, ಮಡಕಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಠಾಳೆ,ಪ್ರಮುಖರಾದ ಬಸವರಾಜ ಸರಡಗಿ ಅಂಬಲಗಾ, ಸೋಮಶೇಖರ ಸಿಂಗೆ, ತಂಗೆಮ್ಮ ಲಾಡಂತಿ, ಬಂಡಪ್ಪ ಚಿಲಿ, ಮಹಾದೇವ ಖಪಾಟೆ, ಗುಂಡಪ್ಪ ಕೊಳ್ಳುರೆ, ಕಾಶಿನಾಥ ನಾಟಿಕಾರ, ಅಣವೀರ ನಾಟೀಕಾರ , ಹಣಮಂತ ಮಾನ್ಪಡೆ, ಅಂಬಾರಾಯ ಜವಳಗಿ, ಆನಂದರಾಯ ಲಾಡವಂತಿ, ಸಿದ್ದಪ್ಪ ಕೊಳ್ಳುರೆ, ಮಾಳಪ್ಪ ಗದ್ದಿ, ಅನೀಲ ಕೊಳ್ಳುರೆ, ಸಂತೋಷ ದರ್ಜಿ,ಮಹಾದೇವ, ಅತಿಥಿಗಳಾಗಿ ಆಗಮಿಸಿದ್ದರು.ಕಮಲಾಪುರ ಕಸಾಪತಾಲೂಕು ಘಟಕದ ಗೌರವ ಕಾರ್ಯದರ್ಶಿ ರವಿಂದ್ರ ಬಿಕೆ ನಿರೂಪಿಸಿದರು, ಪ್ರತಿನಿಧಿ ಮಲ್ಲಿನಾಥ ಅಂಬಲಗಿ ಸ್ವಾಗತಿಸಿದರು, ಬಂಡಪ್ಪ ಚಿಲಿ ವಂದಿಸಿದರು.