ಧ್ವಜ ಬದಲಾದರೆ ಭಾವನೆಗಳು- ನಂಬಿಕೆಗಳು ಬದಲಾಗಲು ಸಾಧ್ಯವೇ

ದಾವಣಗೆರೆ. ಏ.೨೨; ಕಾಂಗ್ರೆಸ್‌  ಪಕ್ಷ ವೀರಶೈವ–ಲಿಂಗಾಯಿತ ಸಮಾಜವನ್ನು ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎನ್ನುವುದನ್ನು ಮರೆಯಬಾರದು ಎಂದು ಬಿಜೆಪಿ ಮುಖಂಡರು ಹಾಗೂ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್ ಶಿವಯೋಗಿ ಸ್ವಾಮಿ ಹೇಳಿದರುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ದೌರ್ಭಾಗ್ಯದ ಸಂಗತಿ.ಧ್ವಜ ಬದಲಾದರೆ ಭಾವನೆಗಳು ಹಾಗೂ ನಂಬಿಕೆಗಳು ಬದಲಾಗಲು ಸಾಧ್ಯವೇ ಅದರಲ್ಲೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೀ ಅವರ ಬಗ್ಗೆ ಟೀಕಿಸಿರುವುದು ಶೆಟ್ಟರ್ ಅವರು ತಮ್ಮ ಆತ್ಮವಂಚನೆ ಮಾಡಿಕೊಂಡಂತಾಗಿದೆ.ಸಂತೋಷ್ ಜೀ ಅವರನ್ನು ಹತ್ತಿರದಿಂದ ಬಲ್ಲ ಯಾವುದೇ ವ್ಯಕ್ತಿ  ಶೆಟ್ಟರ್ ಅವರು ಮಾಡಿದ ಟೀಕೆಯನ್ನು ಒಪ್ಪುವುದಿಲ್ಲ – ಸಹಿಸುವುದಿಲ್ಲ ಎಂದರು.ಇಂಥ ಸ್ವಾರ್ಥ, ಅಧಿಕಾರ ಲಾಲಸೆಯ ವ್ಯಕ್ತಿ ಮಾಡಿರುವ ಟೀಕೆಯನ್ನೇ ಉಪಯೋಗಿಸಿಕೊಂಡು ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ತನ್ನ ಬೇಳೆ ಬೇಯಿಸಿ ಕೊಳ್ಳಲು ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಬೊಬ್ಬೆ ಹಾಕುವುದರಿಂದ ಅವರಿಗೆ ಯಾವ ಲಾಭವೂ ಇಲ್ಲ ಎಂದರು.ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಲಿಂಗಾಯಿತ ಮತಗಳಿಸುವ ಏಕೈಕ  “ಉದ್ದೇಶದಿಂದ ಅತೀ ಕಾಳಜಿ ತೋರಿಸುತ್ತಿದೆ.ಆದರೆ ಪ್ರಜ್ಞಾವಂತ ವೀರಶೈವ ಲಿಂಗಾಯಿತ ಸಮಾಜ ಇದೆಲ್ಲವನ್ನು ಗಮನಿಸುತ್ತಿದೆ. ಲಿಂಗಾಯತ ಸಮಾಜದ ದಶಕಗಳ ಬೇಡಿಕೆಯಾದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಣಯ ಮಾಡಿ, ನೀಡಿರುವುದನ್ನು ಅಧಿಕಾರಕ್ಕೆ ಬಂದಲ್ಲಿ ವಾಪಸ್ ಪಡೆಯುತ್ತೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷರಾದ  ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಇದು ಖಂಡನೀಯ.ಅಪರಾಧಿಗಳನ್ನು “ಸ್ಟಾರ್ ಪ್ರಚಾರಕರನ್ನಾಗಿ ಕಾಂಗ್ರೆಸ್ ಮಾಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್. ಎ. ರವೀಂದ್ರನಾಥ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಸುಧಾ ಜಯ  ರುದ್ರೇಶ್, ವೀರೇಶ್ ಹನಗವಾಡಿ,ಬಿ.ಎಸ್. ಜಗದೀಶ್, ಪ್ರಸನ್ನ ಕುಮಾರ್, ಡಿ.ಎಸ್. ಶಿವಶಂಕರ್ ಉಪಸ್ಥಿತರಿದ್ದರು.