ಧ್ವಜಾರೋಹಣ ಮಾಡುವಾಗ ನಟಿ ಶಿಲ್ಪಾ ಶೆಟ್ಟಿ ಶೂ ಧರಿಸಿದ್ದನ್ನು ಅಭಿಮಾನಿಗಳು ಇಷ್ಟಪಡಲಿಲ್ಲ

ಆಗಸ್ಟ್ ೧೫ ರಂದು ದೇಶದಾದ್ಯಂತ ಜನರು ಸ್ವಾತಂತ್ರ್ಯ ದಿನ ಆಚರಿಸಿದರು. ಕೆಲವರು ಧ್ವಜಾರೋಹಣ ಮಾಡಿದ್ದು, ಕೆಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದರು.
ಧ್ವಜಾರೋಹಣ ಮಾಡುವ ಮೂಲಕ ಈ ಸಂದರ್ಭವನ್ನು ಆಚರಿಸಿದವರ ಪಟ್ಟಿಯಲ್ಲಿ ಬಾಲಿವುಡ್ ನ ಕೆಲವು ತಾರೆಯರೂ ಸೇರಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಇದ್ದಾರೆ.
ಆದರೂ ಈ ಸಮಯದಲ್ಲಿ ಅವರು ಟ್ರೋಲರ್‌ಗಳ ಕಣ್ಣಿಗೆ ಬಿದ್ದರು. ನಂತರ ಅವರು ಜನರಿಗೆ ತಕ್ಕ ಉತ್ತರವನ್ನು ಸಹ ನೀಡಿದರು.
ಆಗಸ್ಟ್ ೧೫ ರ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದರು. ನಟಿ ಸ್ವತಃ ತನ್ನ ಮಕ್ಕಳು, ಅತ್ತೆ ಮತ್ತು ಪತಿ ರಾಜ್ ಕುಂದ್ರಾ ಅವರೊಂದಿಗೆ ಕಾಣಿಸಿಕೊಂಡಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ವೀಡಿಯೋದಲ್ಲಿ ನಟಿ ಧ್ವಜಾರೋಹಣ ಮಾಡಿದ್ದಾರೆ. ನಟಿ ಈ ವೀಡಿಯೊವನ್ನು ಹಂಚಿಕೊಂಡ ಕ್ಷಣ, ಸೆಲೆಬ್ರಿಟಿಗಳು ನಟಿಯ ಪೋಸ್ಟ್‌ಗೆ ಅಭಿನಂದನಾ ಕಾಮೆಂಟ್‌ಗಳೊಂದಿಗೆ ಟೀಕೆಯ ಕಾಮೆಂಟ್ ಕೂಡಾ ಮಾಡಿದ್ದಾರೆ.


ಆದರೂ ಟ್ರೋಲ್ ಯಾಕೆ ಆದರು?
ಶಾರುಖ್ ಖಾನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಅಕ್ಷಯ್ ಕುಮಾರ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವು ತಾರೆಯರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ನಡುವೆ ಟ್ರೋಲರ್‌ಗಳು ಟ್ರೋಲಿಂಗ್ ಮಾಡಿದರು. ಕಾರಣ ಧ್ವಜಾರೋಹಣ ಮಾಡುವಾಗ ನಟಿ ಶೂ ಧರಿಸಿದ್ದನ್ನು ಯಾರೂ ಇಷ್ಟಪಡಲಿಲ್ಲ ಮತ್ತು ಇದಕ್ಕಾಗಿ ಜನರು ಸಾಮಾಜಿಕ ಮಾಧ್ಯಮದಲ್ಲಿ ಶಿಲ್ಪಾ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಟ್ರೋಲರ್ ಬರೆದರು – “ಶೂಗಳನ್ನು ತೆಗೆದ ನಂತರ ಧ್ವಜಾರೋಹಣ ಮಾಡುವುದು ಉತ್ತಮವಿತ್ತು.”
ನಟಿ ಕೂಡ ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ:
ಜನ ಟ್ರೋಲ್ ಮಾಡಲು ಶುರು ಮಾಡಿದ ತಕ್ಷಣ ಶಿಲ್ಪಾ ತಕ್ಕ ಉತ್ತರ ನೀಡಿ ಎಲ್ಲರ ಮಾತು ನಿಲ್ಲಿಸಿದ್ದಾರೆ. ನಟಿ ಬರೆದಿದ್ದಾರೆ – “ನನ್ನ ದೇಶ ಮತ್ತು ಧ್ವಜದ ಗೌರವ ನನ್ನ ಹೃದಯದಿಂದ ಬಂದಿದೆ ಮತ್ತು ಪ್ರಶ್ನೆಗಳನ್ನು ಹಾಕುವ ಹಕ್ಕು ನಿಮಗೆ ಬಂದಿರುವುದಿಲ್ಲ.”

ಗದರ್ ೨ ಫಿಲ್ಮ್ ಗೆ ವಿಮರ್ಶೆ ಪಾಕಿಸ್ತಾನದಿಂದಲೂ ಬಂದಿದೆ! ೩೦೦ ಕೋಟಿ ಕ್ಲಬ್ ಗೆ ಸೇರಿತು ಗದರ್ ೨

ಸನ್ನಿ ಡಿಯೋಲ್ ಅವರ ಗದರ್ ೨ ನಿನ್ನೆ ೩೦೦ ಕೋಟಿ ಕ್ಲಬ್ ಸೇರಿಕೊಂಡಿತು. ದಿನೇದಿನೇ ಅದರ ಜನಪ್ರಿಯತೆ ಏರುತ್ತಲೇ ಇದೆ. ಪಾಕಿಸ್ತಾನದಲ್ಲೂ ಈ ಫಿಲ್ಮ್ ಸುದ್ದಿ ಮಾಡುತ್ತಿದೆ. ಈಗ ಅಲ್ಲಿನ ಜನ ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


ಈ ದಿನಗಳಲ್ಲಿ ಸನ್ನಿ ಡಿಯೋಲ್ ಅವರ ಚಿತ್ರ ಗದರ್ ೨ ಬಾಕ್ಸ್ ಆಫೀಸ್ ನ್ನು ಅಲುಗಾಡಿಸಿದೆ. ಥಿಯೇಟರ್‌ಗಳ ಮುಂದೆ ಜನಜಂಗುಳಿಯನ್ನು ನೋಡಿದರೆ ಚಿತ್ರದ ಕ್ರೇಜ್ ಪ್ರೇಕ್ಷಕರನ್ನು ಹೇಗೆ ಮೋಡಿಮಾಡಿದೆ ಎಂದು ತಿಳಿಯಬಹುದು. ಇದೀಗ ಸನ್ನಿ ಡಿಯೋಲ್ ಅಭಿನಯದ ಗದರ್ ೨ ಚಿತ್ರದ ವಿಮರ್ಶೆ ಕೂಡ ಪಾಕಿಸ್ತಾನದಿಂದ ಹೊರಬಿದ್ದಿದೆ.
ಪಾಕಿಸ್ತಾನದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಚಿತ್ರದ ಬಗ್ಗೆ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಗದರ್ ೨ ನ್ನು ಇಂಡೋ-ಪಾಕ್ ೧೯೭೧ರ ಯುದ್ಧಕ್ಕೆ ಜೋಡಿಸಿ ಮಾಡಲಾಗಿದೆ. ಆದರೆ, ಮೊದಲ ಗದರ್‌ನಂತೆ, ಈ ಬಾರಿಯೂ ಸನ್ನಿ ಪಾಕಿಸ್ತಾನಕ್ಕೆ ಹೋಗುತ್ತಾರೆ. ಆದರೆ ಈ ಬಾರಿ ತನ್ನ ಹೆಂಡತಿಗಾಗಿ ಅಲ್ಲ ತನ್ನ ಮಗನಿಗಾಗಿ. ಹೀಗಿರುವಾಗ ಮತ್ತೆ ಮತ್ತೆ ಸನ್ನಿ ಪಾಕಿಸ್ತಾನಕ್ಕೆ ಬರುತ್ತಿರುವುದಕ್ಕೆ ಇದೀಗ ಪಾಕಿಸ್ಥಾನಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಟನಿಗೆ ಚಾಲೆಂಜ್ ಕೂಡ ನೀಡಿದ್ದಾರೆ.
ಭಾರತ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಗದರ್ ೨ ಸದ್ದು ಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನದ ವರದಿಗಾರ ಸ್ಥಳೀಯ ಜನರನ್ನು ಚಿತ್ರದ ಬಗ್ಗೆ ಕೇಳಿದರು, “ಸನ್ನಿ ಡಿಯೋಲ್ ಪಾತ್ರ ಹೇಗಿತ್ತು ಮತ್ತು ಅವರ ಸುತ್ತಿಗೆಯ ಶೈಲಿ ಹೇಗಿತ್ತು?”


ಈ ಪ್ರಶ್ನೆಗೆ ಉತ್ತರಿಸಿದ ಅಲ್ಲಿನ ವ್ಯಕ್ತಿ, ’ಸನ್ನಿ ಡಿಯೋಲ್‌ನನ್ನೂ ಕೊಲ್ಲಬೇಕು, ಆದರೆ ಯಾರಿಗೆ ಹಾಗೆ ಹೇಳಲು ಧೈರ್ಯವಿದೆ, ಸಾಧ್ಯವಿದೆ?’ ಎಂದು ಒಬ್ಬರು ಹೇಳಿದರು,
”ಸನ್ನಿಯನ್ನು ಪಾಕಿಸ್ತಾನಕ್ಕೆ ಕರೆದು ಎಲ್ಲಾ ಕೆಲಸಗಳನ್ನು ಮಾಡಿಸಬೇಕು. ತಮ್ಮ ಶಕ್ತಿ ತೋರಿಸಲು ಬಕೆಟ್ ನೀರು ಕೂಡಾ ಎತ್ತಿಕೊಳ್ಳಬೇಕು, ಹಿಟ್ಟು ಕೊಳ್ಳಲೂ ಹೋಗಬೇಕು….. ಅಂತೆಲ್ಲ ಪಾಕಿಸ್ತಾನಿಗಳು ಹೇಳಿದ್ದು ಕೇಳಿ ಸೋಷಿಯಲ್ ಮೀಡಿಯಾದವರು ಗೇಲಿ ಮಾಡುತ್ತಿದ್ದಾರೆ.