ಧ್ವಜಾರೋಹಣ, ಭುವನೇಶ್ವರಿಯ ಮೆರವಣಿಗೆಯೊಂದಿಗೆ
ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ11 :4ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ, ನಾಡತಾಯಿ ಭುವನೇಶ್ವರಿ, ಸಮ್ಮೇಳನಾಧ್ಯಕ್ಷ ಡಾ. ಹೆಚ್ ಬಾಲರಾಜ್‍ರವರ ಭವ್ಯ ಮೆರವಣಿಗೆಯೊಂದಿಗೆ ಹೊಸಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ 4ನೇ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಡಾ.ಪುನೀತ್‍ರಾಜಕುಮಾರ ಜಿಲ್ಲಾ ಕ್ರೀಡಾಂಗಣದ ಭವ್ಯ ವೇದಿಕೆಯ ಮುಂಬಾಗದಲ್ಲಿ ಕನ್ನಡ ಧ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ಪರಿಷತ್ ಧ್ವಜವನ್ನು ತಾಲೂಕು ಘಟಕದ ಅಧ್ಯಕ್ಷ ಡಾ.ನಾಯಕರ ಹುಲುಗಪ್ಪ, ಗಿರೀಶ್ ನೇತ್ರತ್ವದ ಎನ್‍ಎಸ್‍ಎಸ್ ಹಾಗೂ ಎನ್‍ಸಿಸಿ ತಂಡ ಧ್ವಜವಂದನೆ ಮಾಡಿದರು.
ಶಿಕ್ಷಣ ಇಲಾಖೆಯ ಶಾಲಾ ಮಕ್ಕಳು, ಕನ್ನಡ ಪರ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನಂತರ ಮುಖ್ಯ ಬೀದಿಯ ವಡಕರಾಯ ಸ್ವಾಮಿ ದೇವಸ್ಥಾನದ ಹತ್ತಿರ ನಾಡತಾಯಿ ಭುವನೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಭುವನೇಶ್ವರಿ, ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ. ಹೆಚ್, ಬಾಲರಾಜ್ ರನ್ನು ಅಲಂಕೃತ ವಾಹನದಲ್ಲಿ ನಮ್ಮ ಸಾಂಪ್ರದಾಯಿಕ ಮೇಳಗಳಾದ ಕಹಳೆ, ಕರಡೆಮಜಲು, ಡೊಳ್ಳು ಕುಣಿತ ತಂಡಗಳಿಂದ ವಿದ್ಯಾರ್ಥಿಗಳ ಜಯ ಘೋಷದೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು.
ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಕರ್ತವ್ಯ ನಿರತ ಪೊಲೀಸರು ಸೇರಿದಂತೆ ಎಲ್ಲರೂ ಕನ್ನಡ ವರ್ಣರಂಚಿತ ಶ್ಯಾಲುಗಳನ್ನು ಧರಿಸುವ ಮೂಲಕ ಮೇರವಣಿಗೆಗೆ ಶೋಭೆ ತಂದಿದ್ದರು.
ನಗರಸಭಾಧ್ಯಕ್ಷೆ ಸುಂಕಮ್ಮ ಚಾಲನೆ ನೀಡಿದರು, ನಗರಸಭಾ ಸದಸ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್, ಬಿಇಓ ಚೆನ್ನಬಸಪ್ಪ ಸೇರಿದಂತೆ  ಸಂಘ ಸಂಸ್ಥೆಯ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.