ಧ್ವಜಾರೋಹಣ : ಬೂತ್ ವಿಜಯ ಅಭಿಯಾನ

ಮಾನವಿ.ಜ.೧೦-ಭಾರತೀಯ ಜನತಾ ಪಾರ್ಟಿ ಮಾನವಿ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ನಗರದಲ್ಲಿ ವಿವಿಧ ವಾರ್ಡಗಳಲ್ಲಿ ಬೂತ್ ಮಟ್ಟದ ಅಧ್ಯಕ್ಷರ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಪಕ್ಷದ ಧ್ವಜಾರೋಹಣವನ್ನು ಮಾನವಿ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀಕಾಂತ ಪಾಟೀಲ ಗೂಳಿ ಅವರ ನೇತೃತ್ವದಲ್ಲಿ ಬೂತ್ ಸಂಖ್ಯೆ ೧೬೯ ಬೂತ್ ಅಧ್ಯಕ್ಷರಾದ ಹಂಪನಗೌಡ ಇವರ ಮನೆ ಮೇಲೆ ಧ್ವಜಾರೋಹಣ ನೆರವೇರಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ನಗರದಲ್ಲಿ ಈ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪ್ರತಿ ಒಂದು ವಾರ್ಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆಯಲು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಕ್ಷವು ಸಂಘಟನೆಯ ವ್ಯವಸ್ಥೆಯನ್ನು ಕಟ್ಟಕಡೆಯ ಮತಗಟ್ಟಯಲ್ಲಿಯೂ ಸಶಕ್ತಗೊಳಿಸಲು ದಿನಾಂಕ ೦೨ ರಿಂದ ೧೨ ರವರೆಗೆ ಮಾನ್ವಿ ಮಂಡಲದ ಪ್ರತಿ ಮತಗಟ್ಟೆಯಲ್ಲಿ ಬೂತ್ ವಿಜಯ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರು, ನಗರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾಯಕ, ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಅಧ್ಯಕ್ಷ ಸುಬ್ಬಯ್ಯ, ವೆಂಕಟೇಶ ಕೋನಪುರಪೇಟೆ, ಸೂಗಪ್ಪಗೌಡ ಹರವಿ, ವೆಂಕಟೇಶ ನಾಯಕ, ರಂಗನಾಥ ನಾಯಕ, ರಮೇಶ್ ಕಬ್ಬೇರ, ಈರಣ್ಣ ನೇಕಾರ, ಸಬ್ಜಲಿ ಕಬ್ಬೇರ್, ಲಕ್ಷ್ಮಣ, ಕರೀಮ ಸಾಬ್,ಶಿವು ಬಾಗಲನಗರ, ೧೬೯, ಬೂತ್ ನ ಮುಖಂಡರಾದ ರಾಮಬಾಬು, ನಾಗೇಶ್ವರ ರಾವ್, ಯಲ್ಲಪ್ಪ ನಾಯಕ, ಈಶ್ವರ ನಾಯಕ, ರವಿನಾಯಕ, ನಾಗರಾಜ ಕಬ್ಬೇರ್, ಕೋಟಿ ನಾಯಕ, ವಿನೋದ್ ಗೌಡ, ನಾಗರಾಜ ಭೋವಿ, ಸಬ್ಜಲಿ, ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.