ಧ್ರುವನಾರಾಯಣ ನಿಧನಕ್ಕೆ ಅಭಿಮಾನಿಗಳ ಸಂತಾಪ

ಚಿಕ್ಕಬಳ್ಳಾಪುರ,ಮಾ.೧೧-ಮಾಜಿ ಸಂಸದ ಧ್ರುವನಾರಾಯಣರವರು ಇಂದು ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಕೋವಿಡ್ ಸಂದರ್ಭದಲ್ಲಿ ಭೇಟಿ ನೀಡಿದ್ದ ಹಾಗೂ ಬಡವರಿಗೆ ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಅವರ ಅಭಿಮಾನಿಗಳ ನೆನಪಿಗೆ ಬಂದಿದೆ.
೨೦೨೦ರಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರು ಆಹಾರ ಪದಾರ್ಥಗಳನ್ನು ಖರೀದಿಸಲು ಹಣ ಇಲ್ಲದೆ ಹಣ ಇದ್ದರೂ ಆಹಾರ ಪದಾರ್ಥಗಳು ಸಿಗದೇ ತೀವ್ರ ತೊಂದರೆಗೆ ಒಳಗಾಗಿದ್ದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಡಬಗ್ಗರಿಗೆ ಹಾಗೂ ಜನಸಾಮಾನ್ಯರಿಗೆ ಹಾರ್ದಿಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಸಂದರ್ಭದಲ್ಲಿ ಆರೋಗ್ಯ ತಮ್ಮಲ್ಲಿನ ಕಾಳಜಿಯನ್ನು ತೋರ್ಪಡಿಸಿದ್ದರು. ಇವರು ಅಕಾಲಿಕ ಮರಣ ಕಾಂಗ್ರೆಸ್ ಪಕ್ಷದ ವಲಯದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.