ಧ್ರುವನಾರಾಯಣ, ಕುಶನೂರಗೆ ಶ್ರದ್ಧಾಂಜಲಿ

ಬೀದರ್:ಮಾ.12: ಇಲ್ಲಿಯ ಶಿವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ರತ್ನಾ ಕುಶನೂರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಧ್ರುವನಾರಾಯಣ ಹಾಗೂ ಕುಶನೂರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ಧ್ರುವನಾರಾಯಣ ಅವರು ಶಾಸಕ, ಸಂಸದ ಹಾಗೂ ರತ್ನಾ ಕುಶನೂರ ವಿಧಾನ ಷರಿಷತ್ ಸದಸ್ಯೆಯಾಗಿ ಕಾಂಗ್ರೆಸ್ ಪಕ್ಷ, ರಾಜ್ಯ ಹಾಗೂ ಜಿಲ್ಲೆಗೆ ನೀಡಿದ ಕೊಡುಗೆಯನ್ನು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಸ್ಮರಿಸಿದರು.

ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮುಖಂಡರಾದ ಚಂದ್ರಾಸಿಂಗ್, ಶಶಿಕಾಂತ ಪಾಟೀಲ ಚೌಳಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಕಾರ್ಯದರ್ಶಿ ಪರ್ವೇಜ್ ಕಮಲ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ್, ಸಂಜುಕುಮಾರ ಡಿ.ಕೆ, ನಾರಾಯಣರಾವ್ ಭಂಗಿ, ಶರಣಪ್ಪ ಶರ್ಮಾ, ಸಚಿನ್ ಮಲ್ಕಾಪುರೆ, ನಯೀಮ್ ಕಿರ್ಮಾನಿ, ವಿನೋದ ಅಪ್ಪೆ, ಧನರಾಜ ಹಂಗರಗಿ, ಹಣಮಂತ ಮಲ್ಕಾಪುರ, ಲತಾ ರಾಠೋಡ್, ಮಾರುತಿರಾವ್ ಶಾಕಾ, ಲೋಕೇಶ ಮಂಗಲಗಿ, ಸುನೀಲ್ ತುಕಾರಾಮ ಪಾಲ್ಗೊಂಡಿದ್ದರು.