ಧ್ರುವನಾರಾಯಣ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ

ಭಾಲ್ಕಿ:ಮಾ.12: ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆರ್.ಧ್ರುವನಾರಾಯಣ ಭಾವಚಿತ್ರಕ್ಕೆ ಶಾಸಕ ಈಶ್ವರ ಖಂಡ್ರೆ ಪುಷ್ಪನಮನ ಸಲ್ಲಿಸಿ, ಆರ್.ಧ್ರುವನಾರಾಯಣ ಅವರು ನನಗೆ ಅತ್ಯಂತ ಆತ್ಮೀಯರಾಗಿದ್ದರು. ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಾಗಿ ಎರಡು ಸಲ ಶಾಸಕರಾಗಿ ಮತ್ತು ಎರಡು ಸಲ ಸಂಸದರಾಗಿ ಅತ್ಯುತ್ತಮ ಕಾರ್ಯ ಮಾಡಿದ್ದರು. ತಮ್ಮ ಸರಳ ವ್ಯಕ್ತಿತ್ವ ಮತ್ತು ವಾಕ್ ಚಾತುರ್ಯದಿಂದ ರಾಜ್ಯ, ರಾಷ್ಟ್ರ ನಾಯಕರ ಮೆಚ್ಚುಗೆಗೆ ಕಾರಣವಾಗಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರು ದಿಢೀರ ಹೃದಯಘಾತದಿಂದ ನಿಧನರಾಗಿರುವುದು ಪಕ್ಷ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಕುಟುಂಬಕ್ಕೆ ಧ್ರುವನಾರಾಯಣ ಅಗಲಿಕೆ ತಡೆದು ಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಂತೇಜಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಯುವ ಮುಖಂಡ ಸಾಗರ ಖಂಡ್ರೆ, ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ ನಸೀರ್, ಯುವ ಘಟಕದ ಅಧ್ಯಕ್ಷ ಜೈಪಾಲ ಭೋರಾಳೆ, ಪುರಸಭೆ ಮಾಜಿ ಅಧ್ಯಕ್ಷ ವಿಶಾಲ ಪುರಿ, ಜಿಪಂ ಮಾಜಿ ಸದಸ್ಯ ಅಂಬಾದಾಸ ಪಾಟೀಲ್ ಪ್ರಮುಖರಾದ ಅನಿಲ ಲೋಖಂಡೆ, ಅಶೋಕ ಬಾವುಗೆ, ಓಂಕಾರ ಮೋರೆ ಸೇರಿದಂತೆ ಹಲವರು ಇದ್ದರು