ಧ್ರುವನಾರಾಯಣ್ ಪಕ್ಷಾತೀತ ನಾಯಕ: ಅಶ್ವಿನ್ ಕುಮಾರ್

ತಿ.ನರಸೀಪುರ: ಮಾ.18:- ಧ್ರುವ ನಾರಾಯಣ್ ಅವರಿಗೆ ಪಕ್ಷ ಮುಖ್ಯವಾಗಿರಲಿಲ್ಲ, ಕ್ಷೇತ್ರದ ಜನತೆಯ ಹಿತ ಮಾತ್ರ ಮುಖ್ಯವಾಗಿತ್ತು.ಕ್ಷೇತ್ರದ ಜನತೆ ಬಗ್ಗೆ ಅವರಿಗಿದ್ದ ಅಪಾರ ಕಾಳಜಿ ಅವರನ್ನು ‘ಜಾತ್ಯತೀತ ನಾಯಕ’ಸ್ಥಾನದಲ್ಲಿ ನಿಲ್ಲಿಸುತ್ತದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಮತ್ತು ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಧ್ರುವ ನುಡಿ-ನಮನ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಮಾಜಿ ಸಂಸದ,ಜನಾನುರಾಗಿ,ಕ್ರಿಯಾಶೀಲ ಮತ್ತು ಅಜಾತಶತ್ರು ಆರ್.ಧ್ರುವನಾರಾಯಣ್ ರವರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರೂ ಎಲ್ಲ ಪಕ್ಷದ ಕಾರ್ಯಕರ್ತರ ಕಣ್ಮಣಿಯಾಗಿದ್ದರು ಎಂದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ,ಜೆಡಿಎಸ್, ಬಿಜೆಪಿ ,ಬಿಎಸ್ಪಿ ,ಆಮ್ ಆದ್ಮಿ ಮತ್ತು ಹಲವು ಪಕ್ಷದ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿರುವುದು ಅವರ ಪಕ್ಷಾತೀತ ಕಾರ್ಯವೈಖರಿಗೆ ಸಾಕ್ಷಿ. ಅವರ ಪಕ್ಷಾತೀತ ನಿಲವು ಅನುಕರಣೀಯ. ನಾನು ಕೂಡ ಅವರ ಆದರ್ಶಗಳನ್ನು ಪಾಲಿಸಲು ಸಿದ್ಧವಿರುವುದಾಗಿ ತಿಳಿಸಿದರು.
ಸೂತಕದ ಛಾಯೆ ನಮ್ಮ ಮನೆಯಲ್ಲೇ ಆವರಿಸಿದೆ ಎಂಬ ಭಾವನೆ ನನಗಿದೆ.ಅವರ ಅಗಲಿಕೆ ನಮ್ಮ ಕ್ಷೇತ್ರಕ್ಕೆ ಆದ ದೊಡ್ಡ ನಷ್ಟ.ಹಾಗಾಗಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಹಾರೈಸಿದರು.
ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಸಲೆ ಶಶಿಕಾಂತ್ ಮಾತನಾಡಿ,ಧ್ರುವನಾರಾಯಣ್ ರವರ ಪಾರದರ್ಶಕ , ಭ್ರಷ್ಟಾಚಾರ ರಹಿತ ಆಡಳಿತ,ಕ್ರಯಾಶೀಲತೆ ಕ್ಷೇತ್ರದ ಜನತೆಯನ್ನು ಆಕರ್ಷಿಸಿತ್ತು.ಹಾಗಾಗಿ ಅವರು ಎರಡು ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದರು.ಪಕ್ಷಾತೀತ ನೆಲೆಗಟ್ಟಿನಲ್ಲಿ ಮಾನವೀಯತೆ ಆಧಾರದಲ್ಲಿ ಕೆಲಸ ಮಾಡಿದ ಏಕೈಕ ಸಂಸದ ಧ್ರುವ ನಾರಾಯಣ್ ಎಂದರೆ ತಪ್ಪಾಗಲಾರದು.ಅಲ್ಲದೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆಗೆ ಧ್ರುವನಾರಾಯಣ್ ರವರ ಹೆಸರನ್ನು ನಾಮಕರಣ ಮಾಡುವಂತೆ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಬುದ್ಧ ವಿಹಾರದ ಬೋಧಿ ರತ್ನ ಬಂತೇಜಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ,ಮಾಜಿ ಅಧ್ಯಕ್ಷ ಸೋಮು,ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ್,ಮಾಜಿ ಜಿ .ಪಂ .ಸದಸ್ಯರಾದ ಟಿ.ಎಚ್.ಮಂಜುನಾಥನ್, ಜಯಪಾಲ್ ಭರಣಿ ,ಮಾಜಿ ತಾ.ಪಂ .ಉಪಾಧ್ಯಕ್ಷ ಬಿ.ಮರಯ್ಯ,ತಾಲೂಕು ನಾಯಕ ಸಂಘದ ಅಧ್ಯಕ್ಷ ಚಿಕ್ಕಯ್ಯ, ತಾಲೂಕು ಬಾಬು ಜಗಜೀವನ್ ರಾಂ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ,ತಾಲೂಕು ಸವಿತಾ ಸಮಾಜದ ಅಧ್ಯಕ್ಷ ನಾಗೇಂದ್ರ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಪುಟ್ಟರಾಜು ,ಬಿಎಸ್ಪಿ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ,ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ದೊಡ್ಡೇಬಾಗಿಲು ಗ್ರಾ.ಪಂ ಅಧ್ಯಕ್ಷ ಮಹದೇವಸ್ವಾಮಿ, ಕೊಳತ್ತೂರು ಮಹದೇವಸ್ವಾಮಿ, ಸೋಸಲೆ ಮಹದೇವಸ್ವಾಮಿ, ಗಣೇಶ್ ಸ್ವಾಮಿ, ಸೋಸಲೆ ಪರಶಿವಮೂರ್ತಿ, ಸೋಸಲೆ ಗ್ರಾ .ಪಂ.ಮಾಜಿ ಅಧ್ಯಕ್ಷ ಅಣ್ಣಯ್ಯಸ್ವಾಮಿ, ನಂಜುಂಡಯ್ಯ, ರಾಮಣ್ಣ, ಧರ್ಮರತ್ನಾಕರ, ಲಿಂಗಪ್ಪಾಜಿ ,ಆಮ್ ಆದ್ಮಿ ಸೋಸಲೆ ಸಿದ್ದರಾಜು,ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜಾದ್ ಖಾನ್, ಮಾಜಿ ತಾ.ಪಂ.ಸದಸ್ಯ ರಾಮಲಿಂಗಯ್ಯ, ಉಕ್ಕೆಲ ಗೆರೆ ಗ್ರಾ.ಪಂ .ಅಧ್ಯಕ್ಷ ಕುಮಾರ್ ಇತರರು ಹಾಜರಿದ್ದರು.