ಧ್ರುವನಾರಾಯಣರವರ ನುಡಿ ನಮನ ಕಾರ್ಯಕ್ರಮ

ಮೈಸೂರು: ಮಾ.23:- ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಆರ್.ಧ್ರುವನಾರಾಯಣ ಅವರೊಂದಿಗಿನ ಒಡನಾಟವನ್ನು ಅಂತರಾಳದಿಂದ ಸ್ಮರಿಸುತ್ತಾ, ಅವರೊಟ್ಟಿಗೆ ಕಳೆದ ದಿನಗಳನ್ನು ಒಡನಾಡಿಗಳು ಸ್ಮರಿಸಿ ಕಣ್ಣೀರಾದರು.
ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡು ದ್ರುವನಾರಾಯಣ್‍ರಿಗೆ ನುಡಿ ನಮನ ಸಲ್ಲಿಸಿದರು.
ಹಿರಿಯ ಸಾಹಿತಿ ಪೆÇ್ರ.ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಆರ್.ಧ್ರುವನಾರಾಯಣ ಸಮುದಾಯ ಮತ್ತು ರಾಜಕೀಯ ನಿಷ್ಠೆ ಬೇರ್ಪಡಿಸಲಾಗದ ತಾತ್ವಿಕವಾಗಿ ಅಂತಃಕರ್ಗತವಾಗಿತ್ತು. ರಾಜಕೀಯ ಶೂನ್ಯ ಆವರಿಸಿತು. ಅವರ ನಿರ್ಗಮನ ದಿಗ್ಭ್ರಾಂತಿ. ಸ್ವಾರ್ಥಕ್ಕಾಗಿ ಬದುಕದೇ ಪರರಿಗಾಗಿ ಕೆಲಸ ಮಾಡಿದರು. ಅವರು ಕಣ್ಣು, ಕಿವಿ ಕಳೆದುಕೊಂಡಿರಲಿಲ್ಲ. ನೆನಪು ಮಾಸಿರಲಿಲ್ಲ. ಪ್ರತಿ ಮಾತಿನಲ್ಲಿ ಸಜ್ಜನ ವ್ಯಕ್ತವಾಗುತ್ತಿತ್ತು. ಮಾತು ಮೃದು, ನಿಲುವು ಕಠೋರವಾಗಿತ್ತು. ಹುಟ್ಟಿ ಬಂದ ಮೂಲ, ಚರಿತ್ರೆ ಅರ್ಥ ಮಾಡಿಕೊಂಡತು. ಬಹುತ್ವದ ಸಮಾಜಕ್ಕೆ ಅನುಕೂಲವಾಗುವ ಕಡೆ ಇದ್ದರು ಎಂದರು.
ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್ ಮಾತನಾಡಿ, ಮೈಸೂರು, ಮಂಗಳೂರು ಚುನಾವಣಾ ಉಸ್ತುವಾರಿ ವಹಿಸಿಕೊಂಡು, ಧ್ರುವನಾರಾಯಣ ಅವರೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಪಕ್ಷದವರೂ ಗೌರವಿಸುತ್ತಿದ್ದರು. ಜೆಂಟಲ್ ಮನ್ ರಾಜಕಾರಣಕ್ಕೆ ಮಾದರಿಯಾಗಿದ್ದರು. ಕಿರಿಯ ತಮ್ಮನಂತೆ ನೋಡಿಕೊಂಡರು. ತಳಮಟ್ಟದಿಂದ ಬೆಳೆದ ನಾಯಕರಾಗಿದ್ದರು. ಅಗ್ರಿಕಲ್ಚರ್ ಬಿಎಸ್ಸಿ ರಾಜಕಾರಣಕ್ಕೆ ಬಂದಾಗ ಪೆÇೀಷಕರ ಬೆಂಬಲವೂ ಇರಲಿಲ್ಲ. ಸರ್ಕಾರಿ ಕೆಲಸ ಗಿಟ್ಟಿಸಿದರೂ ರಾಜಕಿಯ ಕ್ಷೇತ್ರವನ್ನು ಆಯ್ಕೆ ಮಾಡಿದರು. ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಕೇಳಿಸಿಕೊಳ್ಳುವ ಗುಣವಿತ್ತು. ಯಾರೊಂದಿಗೂ ಕೋಪ ಮಾಡಿಕೊಳ್ಳದ ಅಂಬೇಡ್ಕರ್ ವಾದಿ ಎಂದು ತಿಳಿಸಿದರು.
ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಕವಿ ಕುವೆಂಪು ವಿಶ್ವಮಾನವ ಗೀತೆಯನ್ನು ಹಾಡಿದರು. ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಂಎಲ್‍ಸಿ ಡಾ.ತಿಮ್ಮಯ್ಯ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ವಾಸು, ಸಂದೇಶ್ ನಾಗರಾಜ್, ಎ.ಆರ್.ಕೃಷ್ಣಮೂರ್ತಿ, ಆರ್.ಧರ್ಮಸೇನಾ, ಸುನಿತಾ ವೀರಪ್ಪಗೌಡ ಕಾಂಗ್ರೆಸ್ ಮುಖಂಡರಾದ ಹರೀಶ್‍ಗೌಡ, ಡಿ.ರವಿಂಶಕರ್, ಸಾಹಿತಿ ಪೆÇ್ರ.ಕಾಳೇಗೌಡ ನಾಗವಾರ, ಪತ್ರಕರ್ತರಾದ ಕೆ.ದೀಪಕ್, ಟಿ.ಗುರುರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಮೇಯರ್ ಪುರುಷೋತ್ತಮ್, ಅಯೂಬ್ ಖಾನ್, ಶಿವ ನಾಗಪ್ಪ, ಲೋಕೇಶ್ ರಾವ್, ಎಂ ಶಿವಣ್ಣ, ಹುಣಸೂರು ಬಸವಣ್ಣ, ಲತಾ ಸಿದ್ದು ಶೆಟ್ಟಿ, ಶ್ರೀಮತಿ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ, ಸುನಂದ್ ಕುಮಾರ್, ಎಡತಲೆ ಮಂಜುನಾಥ್, ಶಿವಪ್ರಸಾದ್, ಈಶ್ವರ್ ಚಕ್ಕಡಿ, ಗಿರೀಶ್, ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.