ಧ್ರುವನಾರಾಯಣಗೆ ಶ್ರದ್ದಾಂಜಲಿ ಸಲ್ಲಿಸಿದ ಶಾಸಕ ದರ್ಶನಾಪುರ

ಶಹಾಪುರ :ಮಾ.12: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ದೃವ ನಾರಾಯಣ ನಿಧನಕ್ಕೆ ಇಲ್ಲಿನ ಕಾಂಗ್ರೇಸ್ ಕಛೇರಿಯಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಅವರ ಅಭಿಮಾನಿ ಬಳಗದಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಮಾತನಾಡಿದ ಶಾಸಕರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ, ಅವರ ಧೃವನಾರಾಣ ಅವರ ನಿಧನದ ಸುದ್ದಿ ಕೇಳುತಿದ್ದಂತೆ ನನ್ನ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಸಿಪಾಯಿ ರಾಜಕಾರಣಿಯಾಗಿದ್ದ ಇವರ ಹೆಸರು ಕಾಂಗ್ರೇಸ್ ಪಕ್ಷದಲ್ಲಿ ಮುಂಚೂಣಿಯಲ್ಲಿತ್ತು ಎಂದರು, ಸರಳ ಸಜ್ಜನಿಕೆಯ ವ್ಯಕ್ತಿಗಳು ಇವರು ಸೇವ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇತ್ತು ಇಂತಹ ದಕ್ಷ ಪ್ರಾಮಾಣಿಕ ವ್ಯಕ್ತಿಗಳು ಸಿಗುವುದು ಅಪರೂಪ ಈ ಸಮಯದಲ್ಲಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅವರ ಹಾಗೂ ಪಕ್ಷಕ್ಕೆ ಆಗಲಿಕೆಯ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು. ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಲ್ಲಣ್ಣ ಉಳಂಡಿಗೆರಿ ಶಿವುಕುಮಾರ ತಳವವಾರ, ಅಜಿಂ ಜಮಾದಾರ,, ನೀಲಕಂಠ ಬಡಿಗೇರ, ಸಂಗಣ್ಣಗೌಡ ಹುಲ್ಕಲ್, ರುದ್ರಗೌಡ ವಣ್ಣಿಕ್ಯಾಳ, ರಾಮಣ್ಣ ಸಾದ್ಯಾಪುರ, ತಾಲೂಕ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಮೌನೇಶ ನಾಟೇಕರ್ ಇತರರು ಇದ್ದರು.