ಧ್ಯಾನ ಜಪದಿಂದ ಮನಸ್ಸಿಗೆ ನೆಮ್ಮದಿ

ಆಳಂದ ;ಎ.2: ಧ್ಯಾನ ಜಪ ಮಾಡುವುದರಿಂದ ಮನಸ್ಸಿಗೆ ನೆಮ್ಮದಿಯ ಜೊತೆಗೆ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದುಸೋಲಾಪುರ ಲೋಕಸಭಾ ಸದಸ್ಯರು ಶ್ರೀ,ಷ.ಬ್ರ.ಡಾ.ಜಯಸಿದೇಶ್ವರ ಶಿವಾಚಾರ್ಯರು ಹೇಳಿದರು. ಆಳಂದ ತಾಲೂಕಿನ ಮಾದನಹಿಪ್ಪರಗಿಯ ಶ್ರೀ ಗುರುಶಾಂತೇಶ್ವರ ಹಿರೇಮಠ ಜಾತ್ರ ಮಹೋತ್ಸವ ನಿಮಿತ್ಯವಾಗಿ ನಡೆಯುತ್ತಿರುವ ಜಪಯಜ್ಞ ಕಾರ್ಯಮದಲ್ಲಿ ಆಶಿರ್ವಾಚನ ನೀಡದ ಅವರು ಅತಿಯಾದ ಕೆಲಸದ ಒತ್ತಡದಿಂದ ನಾವಿಂದು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ ಮಹಾತ್ಮರ ವಿಚಾರಗಳು ಪ್ರವಚನ ಪುರಾಣ ಕೇಳುವುದರಿಂದ ಮನಸ್ಸಿಗೆ ಆನಂದ ಸಿಗುತ್ತದೆ.ಕೆಲಸ ಒತ್ತಡದ ಮದ್ಯೆ ಸ್ವಲ್ಪ ಸಮಯ ನೀಡಿ ಮುಂಜಾನೆ ಸಮಯದಲ್ಲಿ ದೇವರ ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು. ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯರು ಜಪ ತಪ ಇಷ್ಟಲಿಂಗ ಪೂಜೆಯ ಬಗ್ಗೆ ತಿಳಿಸಿಕೊಟ್ಟರು.ದಿ.26/03/2021 ರಿಂದ 6/04/2021ರವೆರಗೆ ಹಿರೇಮಠದಲ್ಲಿ ಜಾತ್ರಾ ನಿಮಿತ್ಯವಾಗಿ ಹಮ್ಮಿಕೊಳ್ಳಲಾದ ಧಾರ್ಮಿಕ ಕಾರ್ಯಕ್ರಮಗಳು ಕೊವಿಡ್-19 ಕಾರಣ ಸಾಮಾಜಿಕ ಅಂತರದೊಂದಿಗೆ ಸರಳವಾಗಿ ಆಚರಿಸಲಾಗುತ್ತಿದೆ. ದಿ.6ರಂದು ಜಂಗಮ ವಟುಗಳು ಅಯ್ಯಾಚಾರ ಜಪಯಜ್ಞ ಕಾರ್ಯಕ್ರಮಗ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.