ಧ್ಯಾನದ ಮುಖಾಂತರ ಮನೋಬಲ

ಸಂಜೆವಾಣಿ ವಾರ್ತೆ

ಚಿತ್ರದುರ್ಗ, ಜೂ.೯- ವಿಜ್ಞಾನ ಹಾಗೂ ತಂತ್ರಜ್ಞಾನದ  ಬಲದಿಂದ ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುವ ಮೂಲಕ ನಿಧಾನಗತಿಯಲ್ಲಿದ್ದ ಜೀವನ ವಿಧಾನವನ್ನು ಬಹುಬೇಗ ಗುರಿಮುಟ್ಟುವ ಹಂತಕ್ಕೆ ತಲುಪಿರುವುದು ಸರಿಯಷ್ಟೇ. ಉದಾಹರಣೆ ಸಂವಹನ, ಸಂಪರ್ಕ, ಸಾರಿಗೆ, ಕೈಗಾರಿಕೆ, ಕೃಷಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿರುವುದೆ ಬೌದ್ಧಿಕ ಬೆಳವಣಿಗೆಗೆ ಪೂರಕ. ಆದರೆ ಆಧ್ಯಾತ್ಮಿಕದ ಔನ್ನತ್ಯವೇರಲು 12ನೇ ಶತಮಾನದಲ್ಲಿ ಬಸವಣ್ಣ ಇಷ್ಟಲಿಂಗ ಎನ್ನುವ ಪರಿಕಲ್ಪನೆಯನ್ನು ಸಂಶೋಧಿಸಿ ಕೊಟ್ಟರು ಎಂದು ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.ಶ್ರೀಗಳವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶ್ರೀಮಠದ ವತಿಯಿಂದ ವಿಶ್ವ ಪರಿಸರ ದಿನ ಅಂಗವಾಗಿ ಸಸಿ ನೆಡುವ ಸಪ್ತಾಹ ಹಮ್ಮಿಕೊಂಡಿದ್ದ ಕಾರ್ಯದಲ್ಲಿ ಭಾಗಿಯಾದ ಹಾಗೂ ಶ್ರೀಮಠದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗಾಗಿ ಶಿವಯೋಗ (ಧ್ಯಾನ)ದ ಪ್ರಾತ್ಯಕ್ಷಿಕೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಹೇಗೆ ವಿe್ಞÁನಿಗಳು ತಂತ್ರಜ್ಞರುಗಳು ಕಂಡುಹಿಡಿದ ವಸ್ತುಗಳನ್ನು ನಾವು ಯಾವುದೇ ಜಾತಿ, ಧರ್ಮಭೇದವಿಲ್ಲದೆ ಉಪಯೋಗಿಸುತ್ತೇವೆಯೋ ಹಾಗೆ ಇಷ್ಟಲಿಂಗ ಎನ್ನುವ ಕುರುಹುವಿಗೆ ಆ ಯಾವ ಸಂಕೋಲೆಗಳು ಇಲ್ಲ. ಮನುಷ್ಯರಿಗೆ ಕಷ್ಟ ಬಂದಾಗ ಇನ್ನೊಬ್ಬ ಮಾನವನಿಂದ ಸಹಕಾರ, ನೆರವು ಪಡೆಯುತ್ತೇವೆ. ಆದರೆ ಆ ಸಂದರ್ಭದಲ್ಲಿ ಯಾವ ದೇವರು ಸಹ ದರ್ಶನ ನೀಡಿ ಕಷ್ಟ ಪರಿಹರಿಸಿದ ಉದಾಹರಣೆ ಇಲ್ಲ. ಅದಕ್ಕೇ ಹೇಳುವುದು ಮನುಷ್ಯರೇ ದೇವರು, ತನ್ನರಿವೇ ಗುರು ಎನ್ನುವುದನ್ನು ಬಸವಾದಿ ಶಿವಶರಣರು ಬೋಧಿಸಿದರು ಎಂದು ನುಡಿದರು.ಹಣ ಕೊಟ್ಟು ಅಗತ್ಯ ವಸ್ತುಗಳನ್ನು ಖರೀದಿಸಬಹುದೇ ಹೊರತು, ಸುಖ, ಶಾಂತಿ, ನೆಮ್ಮದಿ ಕೊಳ್ಳಲಿಕ್ಕಾಗದು. ಅದಕ್ಕೆ ಧ್ಯಾನದ ಮುಖಾಂತರ ಮನೋಬಲ, ಆತ್ಮವಿಶ್ವಾಸ, ದೃಢತೆ ಮತ್ತು ಸಮಸ್ಯೆಗಳನ್ನು ಎದುರಿಸಬಹುದಾದ ಶಕ್ತಿ ಪ್ರಾಪ್ತವಾಗುತ್ತದೆ. ಆದಿಮಾನವ ಹೇಗೆ ವಿಕಾಸ ಹೊಂದುತ್ತಾ ನಾಗರಿಕ ಮಾನವನಾಗಿದ್ದನೋ ಹಾಗೆ ಹಾಲು ಸಂಸ್ಕಾರ ಹೊಂದುತ್ತಾ ಯಾವ ರೀತಿ ತುಪ್ಪವಾಗುತ್ತದೆಯೋ ಆ ರೀತಿಯಲ್ಲಿ ಮನುಷ್ಯರು ಸಂಸ್ಕಾರವAತರಾಗಬೇಕು. ಈಗ ಏನೆಲ್ಲವನ್ನು ಮನುಷ್ಯರು ಸಂಪಾದಿಸುವ ಸಾಮರ್ಥ್ಯ ಹೊಂದಿz್ದÁರೆ. ಆದರೆ ದಯೆ, ಅನುಕಂಪ, ಮಾನವೀಯತೆ, ಪರೋಪಕಾರ ಗುಣಗಳಿಂದ ದೂರವಾಗುತ್ತಿರುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ಮುರುಘಾಮಠವು ಜನರ ಬದುಕಿನ ಹಸನಿಗಾಗಿ ಸದಾ ಮಿಡಿಯುತ್ತಾ ಬಂದಿದೆ ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ.ಸಿ.ಕಳಸದ ಅವರು ಮಾತನಾಡಿ ಇಷ್ಟಲಿಂಗ ಇದು ಜಾತಿಯ ಕುರುಹು ಅಲ್ಲ .ನೀತಿ ಪ್ರಧಾನವಾದದ್ದು. ಬಸವಣ್ಣನವರು ವಿಶ್ವದ ಸಂಕೇತವಾಗಿ ನಮ್ಮ ಕರದ ಮೇಲೆ ಆರಾಧಿಸಿ, ಧ್ಯಾನಿಸಿ, ಎದೆಯಲ್ಲಿ ಧರಿಸುವ ಪ್ರೇರಣೆ ನೀಡಿz್ದÁರೆ. ಇಲ್ಲಿ ನಮ್ಮ ಆಹಾರ ಪದ್ಧತಿಗೂ ಇಷ್ಟಲಿಂಗ ಧಾರಣೆಗೂ ಯಾವ ನಿರ್ಬಂಧವಿಲ್ಲ. ದೇಹಕ್ಕೆ ಒಗ್ಗುವಂತ ಆಹಾರವನ್ನು ಸೇವಿಸಿದರೆ ಸಾಕು. ಆಹಾರ ಅವರವರಿಗೆ ಬಿಟ್ಟದ್ದು. ಮಡಿ ಮೈಲಿಗೆ ಅಂತ ಏನೂ ಇಲ್ಲ. ನಮ್ಮ ತಪ್ಪು ಒಪ್ಪುಗಳನ್ನು ನೋಡುವವರು ಯಾರು ಇಲ್ಲ ಅಂತ ತಿಳಿದುಕೊಳ್ಳುವ ಅಗತ್ಯ ಇಲ್ಲ. ನಮ್ಮ ನಡೆ ನುಡಿಯಲ್ಲಿ ವ್ಯತ್ಯಾಸವಾದರೆ ನನ್ನೊಂದಿಗೆ ಭಗವಂತ ಇz್ದÁನೆ ಎಂಬ ಭಾವ ಇದರಿಂದ ಬರುತ್ತದೆ. ಹಾಗಾಗಿ ನಮ್ಮ ಇಡೀ ಮಠದ ಸಿಬ್ಬಂದಿ ಸಂಸ್ಕಾರಕ್ಕೆ ಒಳಗಾಗಬೇಕು. ಇದರಿಂದ ಮಠ ಹಾಗೆ ನಿಮ್ಮ ಸಂಸಾರಕ್ಕೂ ಒಳ್ಳೆಯದಾಗುತ್ತದೆಂಬ ಸದಾಶಯ ಶ್ರೀಮಠz್ದÁಗಿದೆ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

 ಆಡಳಿತ ಮಂಡಳಿ ಸದಸ್ಯರಾದ ಎಸï.ಎನï. ಚಂದ್ರಶೇಖರ್, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹಾಗೂ ಶ್ರೀಮಠದ ಮುರುಘೇಶ ಸ್ವಾಮಿಗಳು ಉಪಸ್ಥಿತರಿದ್ದು ಶಿವಯೋಗದಲ್ಲಿ ಭಾಗಿಯಾಗಿದ್ದರು. ನಂತರದಲ್ಲಿ ಸಾಮೂಹಿಕ ಇಷ್ಟಲಿಂಗ ಧ್ಯಾನದ ನಂತರ ಪ್ರಸಾದ ವ್ಯವಸ್ಥೆಯೂ ನಡೆಯಿತು. ಆನಂತರದಲ್ಲಿ ಆಡಳಿತ ಮಂಡಳಿಯ ಅಧ್ಯP್ಷÀರು ಮತ್ತು ಸದಸ್ಯರಿಂದ ಅನುಭವ ಮಂಟಪದ ಪಕ್ಕದಲ್ಲಿ ಸಸಿಗಳನ್ನು ನೆಡಲಾಯಿತು.ಸಮಾರಂಭದ ಆರಂಭಕ್ಕೆ ಕಲಾವಿದ ಉಮೇಶ್ ಪರ್ತ್ತಾ ವಚನ ಗೀತೆಗಳನ್ನು ಹಾಡಿದರು. ಶ್ರೀಮಠದ ಸಾಧಕರಾದ ಚಿನ್ಮಯಿ ದೇವರು ಸ್ವಾಗತಿಸಿದರು. ಲಂಕೇಶ್ ದೇವರು ಕಾರ್ಯಕ್ರಮ ನಿರ್ವಹಿಸಿದರು