ಧ್ಯಾನದಿಂದ ಸಂತೃಪ್ತ ಜೀವನ ಸಾಧ್ಯ: ಅನುರಾಧಾ ಹಿರೇಮಠ

ಬೀದರ:ಸೆ.21: ಜೀವನದಲ್ಲಿ ಯೋಗ ಹಾಗೂ ಧ್ಯಾನದಿಂದ ಆರೋಗ್ಯಕರ, ಸದೃಢ ಹಾಗೂ ಸಂತೃಪ್ತ ಜೀವನ ಸಾಗಿಸಬಹುದಾಗಿದೆ ಎಂದು ಪಿಎಸ್‍ಎಸ್‍ಎಮ್ (ಪಿರಾಮಿಡ್ ಸೊಸೈಟಿ ಸ್ಪಿರಿಚ್ವಲ್ ಮೂವಮೆಂಟ್) ಅಕ್ಷಯಪಾತ್ರೆ ಅನ್ನದಾನಂ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನುರಾಧಾ ಹಿರೇಮಠರವರು ಹೇಳಿದರು. ಅವರು ಪಿಎಸ್‍ಎಸ್‍ಎಮ್ ಬೀದರ ವತಿಯಿಂದ ಹಮ್ಮಿಕೊಂಡ 41 ದಿನಗಳ ಉಚಿತ ಮಂಡಲ ಧ್ಯಾನ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಪ್ರತಿಯೊಬ್ಬರಿಗೂ ಯೋಗ ಹಾಗೂ ಧ್ಯಾನ ಸಹಕಾರಿಯಾಗಲಿದೆ. ಸಮರ್ಥ ಜೀವನ ಸಾಗಿಸಲು ಏಕಾಗ್ರತೆ, ನೆಮ್ಮದಿ ಹಾಗೂ ಶಾಂತಿಯ ಅವಶ್ಯಕತೆಯಿದೆ. ಮನುಷ್ಯನ ಅನಾರೋಗ್ಯಕ್ಕೆ ಅತಿಯಾದ ಒತ್ತಡವೇ ಕಾರಣವಾಗಿದೆ. ಆದ್ದರಿಂದ ದಿನನಿತ್ಯ ಪ್ರತಿಯೊಬ್ಬರು ಯೋಗ-ಧ್ಯಾನವನ್ನು ಅಳವಡಿಸಿಕೊಂಡು ಆರೋಗ್ಯಕರ, ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದರು.

  ನಿರಂತರವಾಗಿ 41 ದಿನಗಳ ಮಂಡಲ ಧ್ಯಾನ ಶಿಬಿರವನ್ನು ಏರ್ಪಡಿಸಿದ ಪಿಎಸ್‍ಎಸ್‍ಎಮ್ ಸಂಸ್ಥೆಯ ಸದಸ್ಯರಾದ ಡಾ.ನಾಗೇಶ ಸಾವಳೆ ಹಾಗೂ ಡಾ.ಸುಹಾಸಿನಿ ಸಾವಳೆಯವರು ಬೀದರ ನಗರದ ನಾಗರೀಕರಿಗೆ ಧ್ಯಾನದ ಮಹತ್ವವನ್ನು ಹಾಗೂ ತರಗತಿಗಳ ಮೂಲಕ ತಲುಪಿಸಿದರು.  ನಿರಂತರವಾಗಿ 41 ದಿನಗಳವರೆಗೆ ನಡೆದ ಈ ಉಚಿತ ಶಿಬಿರದಲ್ಲಿ ಪಾಲ್ಗೊಂಡ ಅನೇಕ ಶಿಬಿರಾರ್ಥಿಗಳು ಧ್ಯಾನದಿಂದ ತಮ್ಮ ಆರೋಗ್ಯದಲ್ಲಿನ ಚೇತರಿಕೆ ಹಾಗೂ ಚೈತನ್ಯದಾಯಕ ಅನುಭವಗಳನ್ನು ಹಂಚಿಕೊಂಡರು. ಅವರಲ್ಲಿ ಶ್ರೀಮತಿ ಶಶಿಕಲಾ ಹುಗ್ಗೆ, ಶ್ರೀಮತಿ ಶ್ರೀದೇವಿ ಬಿರಾದಾರ, ಶ್ರೀಮತಿ ಮಹಾದೇವಿ ಡೋಣಗಾಪುರೆ, ಶ್ರೀಮತಿ ಸೀಮಾ ಪಾಟೀಲ, ಶ್ರೀಮತಿ ಮುತ್ತಮ್ಮ ಮುಕ್ತೆದಾರ, ಶ್ರೀಮತಿ ಪಾರ್ವತಿ, ಶ್ರೀಮತಿ ಸುನೀತಾ, ಶ್ರೀಮತಿ ಪ್ರೇಮಲಾ, ಶ್ರೀಮತಿ ಪದ್ಮಾವತಿ, ಶ್ರೀಮತಿ ಜ್ಯೋತಿ ರೆಡ್ಡಿ, ಶ್ರೀಮತಿ ಕರುಣಾ ರೆಡ್ಡಿ, ಶ್ರೀಮತಿ ಅನಿತಾ, ರತಿಕಾಂತ ಮೇತ್ರೆ, ಪ್ರವೀಣ ಪಾಟೀಲ, ಬಸಯ್ಯ ಸ್ವಾಮಿ, ಶಿವರಾಜ ಮುಕ್ತೆದಾರ, ಮೋಹನ್ ಪೂಜಾರಿ,ಶಿವರಾಜ ಹುಡೆದ, ಡಾ.ಕೈಲಾಸ ಪಾಟೀಲ, ಡಿ.ಎಸ್.ನಾಗೂರೆ, ಕಿರಣಕುಮಾರ, ಕು. ಕ್ಲಿಂಟನ್, ದಿಲೀಪ ಚಟ್ನಳ್ಳೆ, ಮಾದಪ್ಪ,ರಾಜಕುಮಾರ ಮಾಮನಗಡೆ, ಭದ್ರು ಸ್ವಾಮಿ,ಗಣೇಶ, ದೇವಿದಾಸ ಬಿರಾದಾರ,  ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಂತರ 41 ದಿನಗಳ ಮಂಡಲ ಧ್ಯಾನ ಕೈಗೊಂಡು, ಶಿಬಿರಾರ್ಥಿಗಳಿಗೆ ಮಾರ್ಗದರ್ಶನಗೈದ ಡಾ.ಸುಹಾಸಿನಿ ಸಾವಳೆಯವರು ಮಾತನಾಡುತ್ತ ಆರೋಗ್ಯಕರ, ಸುಂದರ, ಸ್ವಸ್ಥ ಸಮಾಜಕ್ಕಾಗಿ ಯೋಗ ಹಾಗೂ ಧ್ಯಾನದ ಅಗತ್ಯವಿದೆ. ಇಂದಿನ ಒತ್ತಡದ ಆಧುನಿಕ ಜೀವನ ಶೈಲಿಯ ಸಂದರ್ಭದಲ್ಲಿ ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ರಕ್ತದ ಒತ್ತಡ, ಮಧುಮೇಹ, ಅಶಾಂತಿಯಿಂದ ಬಳಲುತ್ತಿದ್ದಾರೆ. ಯೋಗ ಹಾಗೂ ಧ್ಯಾನದಿಂದ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಎಂದರು. ಶಿಬಿರವು ನಿರಂತರವಾಗಿ ಬೀದರನ ಗುಂಪಾದ ಚಿಟ್ಟಾ ಕ್ರಾಸ್‍ನ ಕೆನರಾ ಬ್ಯಾಂಕ್ ಹತ್ತಿರದ ಡಾ.ನಾಗೇಶ ಸಾವಳೆಯವರ ಪ್ಲಾಟ್ ನಂ.21# 'ಲಕ್ಷ್ಮೀ ನಿಲಯ' ಮನೆಯಲ್ಲಿ ಜರುಗಿತು. ಈ ಶಿಬಿರದ ಸದುಪಯೋಗಪಡೆದುಕೊಂಡ ಅನೇಕರು ತಮ್ಮ ಸದಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪಿರಾಮಿಡ್ ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಅಶೋಕ ಕುಲಕರ್ಣಿ, ಶಿವರಾಜ ಹುಡೆ, ಡಿ.ಎಸ್.ನಾಗೂರೆ ಮತ್ತು ಡಾ.ಕೈಲಾಸ ಪಾಟೀಲರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಧ್ಯಾನ ಮಹಾಶಕ್ತಿ ಕೇಂದ್ರದ ಸಮಸ್ತ ಸದಸ್ಯರು ಪಾಲ್ಗೊಂಡಿದ್ದರು. ಆಸಕ್ತರು ಧ್ಯಾನದ ಮಾಹಿತಿ ಹಾಗೂ ಉಚಿತ ತರಬೇತಿಗಾಗಿ ಡಾ.ನಾಗೇಶ ಸಾವಳೆ: ಮೊ. 9986787277 ಡಾ.ಸುಹಾಸಿನಿ ಸಾವಳೆ  : ಮೊ. 8951468089 ಇವರನ್ನು ಸಂಪರ್ಕಿಸಬಹುದಾಗಿದೆ.