ಧ್ಯಾನದಿಂದ ಬುದ್ದನಾಗು ಕೃತಿ ಬಿಡುಗಡೆ

ಬೀದರ :ಎ.12:ನಗರದ ಪೂಜ್ಯ ಡಾ|| ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಏಪ್ರಿಲ್ 09 ರಂದು ಸಂಜೆ ಜರುಗಿದೆ ಕೃತಿ ಬಿಡುಗಡೆ ಸಮಾರಂಭವನ್ನು ಜರುಗಿತು.
ಪಿ.ಎಸ್.ಎಸ್.ಎಂ(ಪಿರಾಮಿಡ್ ಸ್ಪಿರಿಚುವಲ್ ಸೊಸಯಟಿ ಮುಮೆಂಟ) ಹಾಗೂ ಪಿ.ಎಂ.ಸಿ ಚ್ಯಾನೆಲ್ ಸದಸ್ಯರಾದ ಶರಣಬಸಪ್ಪಾ ಫುಲೆ ಬರೆದಿರುವ ಧ್ಯಾನದಿಂದ ಬುದ್ಧನಾಗು ಕೃತಿ ಬಿಡುಗಡೆಯನ್ನು ದಿವ್ಯ ಸಾನಿಧ್ಯ ವಹಿಸಿದ ಜ್ಞಾನ ಸಾಗರ ಭಂತೆ ಆನಾಪಾನಾಸತಿ ಧ್ಯಾನದಿಂದ ದೇಹಕ್ಕೆ ಆರೋಗ್ಯ ನೆಮ್ಮದಿ ಜೀವನ ಕೊಡುತ್ತದೆ. ಬುದ್ದನ ಎಲ್ಲಾ ಧ್ಯಾನದ ಪ್ರಕಾರಗಳು ಈ ಕೃತಿಯಲ್ಲಿ ಮೂಡಿಬಂದಿದೆ. ಪೂಜ್ಯ ದೇವಾನಂದ ಮಹಾಸ್ವಾಮಿಗಳು ಬುದ್ದನ ಜೀವನ ಚರಿತ್ರೆಯನ್ನು ತಿಳಿಸಿಕೊಟ್ಟರು.
ಕೃತಿಯನ್ನು ಕುರಿತು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯಾಧ್ಯಕ್ಷರು ಯುವ ಸಾಹಿತಿಗಳಾದ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ಮೊಬೆಲಿನ ಮಾನವರಾಗಿ ಕಂಪ್ಯೂಟರಿನ ನಾಗರಿಕರಾಗಿ ಜೀವನ ನಡೆಸುತ್ತಿದ್ದೇವೆ ದಿನದ 24 ಗಂಟೆಗಳಲ್ಲಿ 18 ಗಂಟೆ ಮೊಬೆಲಿನ ಜೋತೆ ಜೀವನ ನಡೆಸುತ್ತಿದ್ದೇವೆ. ಮನಸ್ಸಿನಲ್ಲಿ ಮಾಹಿತಿ ತಂತ್ರಜ್ಞಾನ ತುಂಬಿಕೊಂಡು ನಮ್ಮ ಮೈ ಮನಸ್ಸು ವಿದ್ಯುತ ತುಂಬಿಕೊಂಡಿದೆ. ಧ್ಯಾನದಿಂದ ಬುದ್ಧನಾಗು ಕೃತಿ ಬುದ್ಧನ ಜನನ, ಜ್ಞಾನೊದಯ, ಧ್ಯಾನದ ಪರಿಚಯ, ಧ್ಯಾನದ ಎಳು ಚಕ್ರಗಳು, 21 ದಿನಗಳು ಧ್ಯಾನ ಮಾಡುವುದರಿಂದ ಆಗುವ ಅನುಕೂಲಗಳು, ಪಿರಿಮಿಡ ಧ್ಯಾನ ಸಂಸ್ಕಾರಗಳು ಆತ್ಮ ಯೋಜನೆ ನಿಮ್ಮಗೆ ನೀವೆ ಬೆಳಕು, ಅದಕ್ಕಾಗಿ ಬುದ್ದ ವಿಶ್ವಕ್ಕೆ ಪ್ರತಿನಿತ್ಯ ಬೆಳಕ್ಕಾಗಿದ್ದಾನೆ. ಇಡಿ ಜೀವ ಜಗತ್ತು ಬುದ್ಧನನ್ನು ಒಪ್ಪಕೊಂಡು ಅಪ್ಪಿಕೊಂಡು ನಡೆ ನುಡಿ ನಡಾವಳಿಯಾಗಿಸಿಕೊಳ್ಳುತ್ತಿದ್ದಾರೆ.
ಅಧ್ಯಕ್ಷತೆಯನ್ನು ಡಾ|| ಕಾಶಿನಾಥ ಚಲುವ ವಹಿಸಿಕೊಂಡು ಮಾತನಾಡಿ ಸಾಹಿತ್ಯ ಕೃಷಿಕರಿಗೆ ಶಕ್ತಿಯಾಗಿ ನಿಲ್ಲಬೇಕು. ಸಾಹಿತ್ಯದ ಉದ್ದೇಶ ಸಮಾನತೆ ಸಮಾಜ ನಿರ್ಮಾಣ ಮಾಡುವುದೆಯಾಗಿದೆ. ಸಿದ್ಧಾರ್ಥ ಬುದ್ಧನಾಗದಿದ್ದರೆ, ಒಂದು ದೇಶದ ರಾಜ್ಯನಾಗುತ್ತಿದ. ಆದರೆ ಸಿದ್ಧಾರ್ಥ ತಪಸ್ಸುಮಾಡಿ ಬುದ್ಧನಾಗಿದ ಫಲಾವಾಗಿ ಜೀವ ಜಗತ್ತು ಯುದ್ಧ ಬೇಡ ಬುದ್ದಬೇಕು ಎನ್ನುತ್ತಿದೆ. ಹಾಸ್ಯ ಕಲಾವಿದರಾದ ರಾಘವೇಂದ್ರ ಸ್ವಾರಳಿಕರ ದಂಪತಿಗಳು ನಗು ಪ್ರತಿ ಮನುಷ್ಯನಿಗೆ ಆಯುಸ್ಸು ಆರೋಗ್ಯಕ್ಕೆ ಅವಶ್ಯಕವಾಗಿದೆ. ನಿವೃತ್ತ ಪಿ ಎಸ್ ಐ ಬಸವರಾಜ ಮೀಠಾರೆ, ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಪಕ, ನಾರಾಯಣರಾವ ಕಾಂಬಳೆ, ಕಾಶಿನಾಥ ಫುಲೆ, ರಾಮಪ್ಪ ಹುದ್ದುರು ಕಲಬುರಗಿ, ಕೈಲಾಸ ಪಾಟೀಲ್ ತರುಣ ನಾಗಮರಪಳ್ಳಿ ಶೇಷರಾವ ಬೆಳಕುಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೃತಿ ಬರೆದಿರುವ ಶರಣಬಸಪ್ಪ ಫುಲೆರವರಿಗೆ ಸನ್ಮಾನ ಮಾಡಿದರು.