ಧೋನಿ ತಂದೆ-ತಾಯಿಗೆ ಕೊರೊನಾ

ರಾಂಚಿ,ಏ.೨೧- ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರ ತಾಯಿ ಮತ್ತು ತಂದೆಗೆ ಕೊರೊನಾ ಸೋಂಕು ತಗುಲಿದ್ದು, ಅವರಿಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಧೋನಿ ಅವರು ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ತಾಯಿ ದೇವಕಿ ದೇವಿ ಮತ್ತು ತಂದೆ ಪಾನ್ಸಿಂಗ್ ಅವರಿಗೆ ಕೊರೊನಾ ತಗುಲಿದ್ದು ರಾಂಚಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ-ತಾಯಿಗೆ ಸೋಂಕು ತಗುಲಿರುವುದರಿಂದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ಧೋನಿ ಆತಂಕಗೊಂಡಿದ್ದಾರೆ.