ಧೈರ್ಯವಿದ್ದರೆ ರವಿ ಹೇಳಿಕೆ ನೀಡಲಿ-ರಾಜಿನಾಮೆಗೆ ಸಿದ್ಧ

ರಾಯಚೂರು ಮೇ ೨೬ :-ಧೈರ್ಯವಿದ್ದರೆ ರವಿ ಬೋಸರಾಜು ಅವರು ನೇರವಾಗಿ ಹೇಳಿಕೆ ನೀಡಿದರೆ ನಾಳೆಯೆ ರಾಜಿನಾಮೆ ನೀಡಿ ಚುನಾವಣೆಗೆ ಸಿದ್ದರಾಗುತ್ತವೆ ಎಂದು ಬಿಜೆಪಿ ಯುವ ಮುಖಂಡ ಸ್ಟಿವನ್ ಬಿನ್ನಿ ಅವರು ಹೇಳಿದ್ದಾರೆ
ರವಿ ಬೋಸರಾಜು ಅವರಿಗೆ ಸವಾಲು ಹಾಕಿದ ಮೂರು ದಿನಗಳ ನಂತರ ಯಾರೊ ಅಮಾಯಕನನ್ನು ಹುಡುಕಿ ಹೇಳಿಕೆ ಕೊಡಿಸುವುದು ಹಾಸ್ಯಸ್ಪದವಾಗಿದೆ. ವಾರ್ಡ್ ನಂಬರ್ ಒಂದರಲ್ಲಿ ರಾಜೀನಾಮೆ ನೀಡುವಂತೆ ರವಿ ಬೋಸರಾಜು ಅವರ ನೇರವಾಗಿ ಹೇಳಿಕೆ ನೀಡಿದರೆ ನಾಳೆಯೇ ರಾಜೀನಾಮೆ ನೀಡಲ ಸಿದ್ದ ಎಂದ ಅವರು ನಮ್ಮ ಶಾಸಕರ ಬಗ್ಗೆ ಹೇಳಿಕೆ ನೀಡುತಿದ್ದಾರೆ. ಅವರಿಗೆ ಇವರು ಸಮವಾಗಲಾರರು. ಶಾಸಕರ ಬಗ್ಗೆ ಮಾತನಾಡುವ ಅರ್ಹತೆಯೂ ಅವರಿಗಿಲ್ಲ. ರವಿ ಬೋಸರಾಜು ಕಾಂಗ್ರೆಸ್ ಪಕ್ಷದಲ್ಲಿ ಏನಿಲ್ಲ.ಒಬ್ಬ ಸಾಮಾನ್ಯ ಕಾರ್ಯಕರ್ತರು. ಯಾರೊ ಇಬ್ಬರು ಮೂವರನ್ನು ಇರಿಸಿಕೊಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ ಯತ್ನಿಸುತ್ತಿದ್ದಾರೆ.
ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಯಾರು ರಾಜಕೀಯ ಮಾಡಬಾರದು. ತಮ್ಮ ಕೈಲಾದ ಸಹಾಯ ಸಕಾರ ನೀಡಬೇಕು. ಎಲ್ಲರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಯಾರಿಂದಲೊ ಹೇಳಿಕೆ ಕೊಡಿಸುವ ಅಪಹಾಸ್ಯಕ್ಕೆಡೆಯಾಗುವುದು ಬೇಡ. ಈ ರೀತಿ ಹೇಳಿಕೆ ಕೊಡಿಸುವುದರ ಹಿಂದಿನ ಉದ್ದೇಶ ಜನರಿಗೆ ತಿಳಿಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.