ಧೈರ್ಯಂ ಸರ್ವತ್ರ ಸಾಧನಂ ಚಿತ್ರ ಬಿಡುಗಡೆಗೆ ಅಡ್ಡಿ

ಬೆಂಗಳೂರು,ಫೆ.೨೧- ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಟೀಸರ್‌ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನಿಸುವ ರೀತಿಯಲ್ಲಿ ಚಿತ್ರಿಸಿದ್ದು, ಆ ಸನ್ನಿವೇಶಗಳಿಗೆ ಕತ್ತರಿ ಹಾಕಬೇಕು ಎಂದು ಬ್ರಾಹ್ಮಣ ಸಮುದಾಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು ಚಿತ್ರ ಬಿಡುಗಡೆಗೆ ಸಂಕಷ್ಟ ಎದುರಾಗಿದೆ.
ಚಿತ್ರದ ಟೀಸರ್‌ನಲ್ಲಿ ಹೆಣ್ಣನ್ನು ಕ್ರೂರವಾಗಿ ಶೋಷಣೆ ಮಾಡುವ ಸನ್ನಿವೇಶಗಳು ಚಿತ್ರದಲ್ಲಿದ್ದು ಅವುಗಳನ್ನು ತೆಗದು ಹಾಕಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಸಮುದಾಯದ ಮುಖಂಡರೂ ಆದ ರಾಷ್ಟ್ರೀಯ
ಪ್ರಜ್ಞಾನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ, ನಾಗೇಂದ್ರ ಜೋಯಿಸ್ ಸೇರಿದಂತೆ ಪಧಾದಿಕಾರಿಗಳು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ .ಎಂ ಸುರೇಶ್ ಅವರಿಗೆ ದೂರು ನೀಡಿದ್ದಾರೆ.ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಅವರಿಗೆ ಮನವಿ ಪತ್ರ ನೀಡಿ ಇಂತಹ ಸೀನ್‌ಗಳನ್ನು ತೆಗೆಯಬೇಕು. ಇಲ್ಲದಿದ್ದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಹೇಳಿರುವುದು ಚಿತ್ರ ಬಿಡುಗಡೆಗೆ ಸಂಕಷ್ಠ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಅವರು ಚಿತ್ರದ ನಿರ್ಮಾಪಕ, ನಿರ್ದೇಶಕರೊಂದಿಗೆ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಎ.ಆರ್.ಸಾಯಿರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದು ಎ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿರುವ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲು ಸಜ್ಜಾಗಿದ್ದು ಈ ನಡುವೆಯೇ ಚಿತ್ರಕ್ಕೆ ಅಡ್ಡಿ ಆತಂಕ ಎದುರಾಗಿ
ದ್ದಾರೆ.