ಧೂಳಖೇಡ ಚೆಕ್‍ಪೋಸ್ಟ್ ಮೇಲೆ ಎಸಿಬಿ ದಾಳಿ

ವಿಜಯಪುರ,ಡಿ.1-ಜಿಲ್ಲೆಯ ಚಡಚಣ ಪಟ್ಟಣದ ಧೂಳಖೇಡ ಚೆಕ್ ಪೆÇೀಸ್ಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗುಜರಾತ್ ಮೂಲದ ಲಾರಿ ತಡೆದು ಚಾಲಕನಿಗೆ ಸಾವಿರ ರೂಪಾಯಿ ಲಂಚ ಕೇಳಿದ ಚೆಕ್ ಪೆÇೀಸ್ಟ್‍ನ ಇಬ್ಬರು ಕಾವಲುಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಹೇಶ ಹವಲಿ ಹಾಗೂ ಗಂಗಾರಾಮ ಪಾಟೀಲ ಎಂಬವವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾರಿ ಚಾಲಕ ದ್ವಾರಕೀಶ ಬಳಿ 1000 ಲಂಚ ಕೇಳಿದ್ದರು. ಇದರಿಂದ ಬೇಸತ್ತ ಚಾಲಕ ಎಸಿಬಿ ಪೆÇಲೀಸರಿಗೆ ದೂರು ನೀಡಿದ್ದರು. ತಕ್ಷಣಕ್ಕೆ ಎಸಿಬಿ ಪೆÇಲೀಸರು ಧೂಳಖೇಡ ಚೆಕ್ ಪೆÇೀಸ್ಟ್ ಮೇಲೆ ದಾಳಿ ನಡೆಸಿ ಚಾಲಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿಜಯಪುರ ಎಸಿಬಿ ಡಿವೈಎಸ್ಪಿ ಮಾಹಿತಿ ನೀಡಿದ್ದಾರೆ.