ಧುವನಾರಾಯಣ ನಿಧನ ಬ್ಲಾಕ್ ಕಾಂಗ್ರೆಸ್ ಸಂತಾಪ

ಸಿರವಾರ,ಮಾ.೧೨- ಮಾಜಿ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಿರವಾರ ಬ್ಲಾಕ್ ವತಿಯಿಂದ ತೇಜಸ್ ಮಹಲ್‌ನಲ್ಲಿ ದೃವನಾರಾಯಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು. ಕಾಂಗ್ರೆಸ್ ಹಿರಿಯ ಮುಖಂಡ ಮಾತನಾಡಿ ಧುವನಾರಾಯಣ ಅವರು ಕಳೆದ ೨ ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.
ಸ್ಟಾರ್ ಪ್ರಚಾರಕರಲ್ಲಿ ಇವರು ಒಬ್ಬರಾಗಿದ್ದಾರು. ೨ ಬಾರಿ ಶಾಸಕ ಹಾಗೂ ೨ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇವಲ ಒಂದು ಮತದಿಂದ ಗೆದ್ದಿದರು. ಪಕ್ಷಕ್ಕೆ ಅವರ ಸೇವೆ ಅಪಾರವಾಗಿದೆ. ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಬ್ಲಾಕ್ ಅಧ್ಯಕ್ಷ ಚುಕ್ಕಿ ಶಿವಕುಮಾರ, ರಮೇಶ ದರ್ಶನಕರ್, ಶಿವಶರಣರ ಸಾಹುಕಾರ ಅರಕೇರಿ, ಪ.ಪಂ.ಸದಸ್ಯರಾದ ಸೂರಿದುರುಗಣ್ಣ ನಾಯಕ, ಹಾಜೀ ಚೌದ್ರಿ, ಹಸೇನ ಅಲಿಸಾಬ್, ಎನ್.ಚಂದ್ರಶೇಖರ, ಹೆಚ್.ಕೆ.ಅಮರೇಶ, ಪ.ಪಂಚಾಯತಿ ಮಾಜಿ ಉಪಾದ್ಯಕ್ಷ ಚನ್ನಬಸವ ಗಡ್ಲ, ಕೆ.ರಾಘವೇಂದ್ರ, ಎಂ.ಮನೋಹರ, ಮಲ್ಲಪ್ಪ, ದೇವಿಪುತ್ರಪ್ಪ, ಮೈಬೂಬಸಾಬ್, ಮನೋಹರ್, ಚನ್ನಪ್ಪ, ಕೆ.ರಾಘು, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.