
ವಿಜಯಪುರ ನ.11: ಶತ್ರುಗಳಿಂದ ಚಿತ್ರದುರ್ಗ ಕೋಟೆ ಸಾಮ್ರಾಜ್ಯವನ್ನು ರಕ್ಷಿಸುವಲ್ಲಿ ಸಾಹಸಮಯ ಧೈರ್ಯ ತೋರಿದ ಹೆಮ್ಮೆಯ ಧೀರ ಮಹಿಳೆ ಒನಕೆ ಓಬವ್ವ ಅವರ ನಿμÉ್ಠ, ಧೈರ್ಯ,ಆತ್ಮವಿಶ್ವಾಸ, ತ್ಯಾಗಮಯವಾದ ಆದರ್ಶ ವಿಚಾರ ಇಂದಿನ ಯುವಪೀಳಿಗೆ ಅರಿತುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಪತ್ನಿ ಧರ್ಮವನ್ನು ಅನುಸರಿಸಿದ ಓಬವ್ವ ಕೋಟೆಯನ್ನು ಸುತ್ತುವರಿದ ಶತ್ರುಗಳನ್ನು ಸಂಹರಿಸಿ,ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆ. ಧೀರ ಮಹಿಳೆ ಓಬವ್ವ ಶೌರ್ಯದ ಸಾಧನೆ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ ಎಂದು ಹೇಳಿದರು.
ಡಾ. ವನಿತ ಎನ್. ತೊರವಿ ಅವರು ಉಪನ್ಯಾಸ ನೀಡಿ, ಶತ್ರು ಸೈನ್ಯವು ಚಿತ್ರದುರ್ಗದ ಕೋಟೆ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನೇ ಅಸ್ತ್ರವಾಗಿಟ್ಟುಕೊಂಡು ಶತ್ರುಗಳನ್ನು ಎದುರಿಸಿ ಶೌರ್ಯ, ಸಾಹಸ ಮೆರೆದ ಧೀರ ಮಹಿಳೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ. ಕೆ.ಚವ್ಹಾಣ, ಸುನೀಲ ಉಕ್ಕಲಿ, ಅಭಿμÉೀಕ ಚಕ್ರವರ್ತಿ, ಭೀಮರಾಯ ಜಿಗಜಿಣಗಿ, ವೈ.ಎಚ್.ವಿಜಯಕರ, ವಿದ್ಯಾವತಿ ಅಂಕಲಗಿ, ದೇವೇಂದ್ರ ಮಿರೇಕರ್, ಗಿರೀಶ ಕುಲಕರ್ಣಿ, ಅಡಿವೆಪ್ಪ ಸಾಲಗಲ್ಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಮಂಜುಳಾ ಹಿಪ್ಪರಗಿ ಸುಗಮ ಸಂಗೀತ ಪ್ರಸ್ತುತಪಡಿಸಿದರು.
ಮೆರವಣಿಗೆಗೆ ಚಾಲನೆ : ಬೆಳಿಗ್ಗೆ 9 ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಚಾಲನೆ ನೀಡಿದರು.