ಧೀನಸಮುದ್ರ ಸಂಘದ ೬೮ ಲಕ್ಷ ಹಣ ನುಂಗಿದ ಅಧಿಕಾರಿ ಬಸವರಾಜ

ಸಿಂಧನೂರು.ಜ.೯- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಾಕಾರ್ಯನಿರ್ವಹಕ ಆಧಿಕಾರಿ ಸಂಘದ ಹಣವನ್ನು ಗುಳಂ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಣ ದುರುಪಯೋಗ ಮಾಡಿದ ಅಧಿಕಾರಿ ವಿರುದ್ಧ ಇಲ್ಲಿ ತನಕ ಕ್ರಮ ತಗೆದು ಕೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ. ತಾಲೂಕಿನ ಧೀನಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾದ ಬಸವರಾಜ್ ಸಂಘದ ೬೮.೨೧ ಲಕ್ಷ ರೂ.ಗಳನ್ನು ಗುಳಂ ಮಾಡಿದ್ದನ್ನ ಸ್ವತಃ ಅಧಿಕಾರಿಯೇ ಒಪ್ಪಿಕೊಂಡಿದ್ದಾನೆ.
ಆರ್.ಡಿ.ಸಿ.ಸಿ ಬ್ಯಾಂಕ್ ವೃತ ನಿರೀಕ್ಷ ಕೆ.ಬಸವರಾಜ ಧೀನಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ, ದಾಖಲಾತಿಗಳುನ್ನು ಪರಿಶೀಲನೆ ಮಾಡಿದಾಗ ೩೦ ಲಕ್ಷ ೭೨ ಸಾವಿರದ ೫೬೫ ರೂ.ಗಳು ಜಮ ಇದ್ದು, ಅದನ್ನು ಹಾಜರು ಪಡಿಸುಲು ಬಸವರಾಜಗೆ ಸೂಚಿಸಿದ್ದಾಗ ಜನವರಿ ೫ರ ನಂತರ ಎಲ್ಲಾ ದಾಖಲಾತಿಗಳುನ್ನ ಕೊಡುವುದಾಗಿ ಅಧಿಕಾರಿ ಸಮಯ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಆಡಳಿತ ಮಂಡಳಿ ಸಭೆ ಸೇರಿ ದಾಖಲಾತಿಗಳು ಪರಿಶೀಲನೆ ಮಾಡಿ ಹಣ ದುರ್ಬಳಕೆಯಾದ ಬಗ್ಗೆ ಮಾಹಿತಿ ಕೊಡುವಂತೆ ಅರ್.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರು ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದರೆನ್ನಲಾಗಿದೆ.
ಜ.೫ರಂದು ಆಡಳಿತ ಮಂಡಳಿ ಸಭೆ ಸೇರಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗ ೨೮ ಲಕ್ಷ ೧೦ ಸಾವಿರದ ೭೨೦ ನಗದು ಮತ್ತು ೪೦ಲಕ್ಷ ೧೧ ಸಾವಿರದ ೧೪೬ ವ್ಯವಹಾರದ ಸಾಲದಲ್ಲಿ ವಿವಿಧ ಖಾತೆಗಳಿಗೆ ಖರ್ಚು ಹಾಕಿ ಬೋಗಸ್ ಸಾಲ ಸೃಷ್ಟಿ ಸಿ ೬೮ ಲಕ್ಷ ೨೧ ಸಾವಿರದ ೮೬೬ ರೂ.ಗಳನ್ನು ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಬಸವರಾಜ ಗುಳುಂ ಮಾಡಿರುವ ಬಗ್ಗೆ ಅಧಿಕಾರಿ ತಪ್ಪೊಪ್ಪಿಕೊಂಡು ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾರೆ. ಸಂಘದಲ್ಲಿದ್ದ ಸಾರ್ವಜನಿಕ ಹಾಗೂ ರೈತರ ಹಣವನ್ನು ಸಿ.ಇಓ ಬಸವರಾಜ ದುರ್ಬಳಕೆ ಮಾಡಿಕೊಂಡ ಅಧಿಕಾರಿ ವಿರುದ್ಧ ಆಡಳಿತ ಮಂಡಳಿ ಬಳಗನೂರ ಪೊಲೀಸ್ ಠಾಣೆಗೆ
ದೂರು ನೀಡಿದರು ಸಹ ಇಲ್ಲಿ ತನಕ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ ಇರುವುದು ಕಂಡು ಬಂದಿದೆ.
ಗ್ರಾಮೀಣ ಭಾಗದಲ್ಲಿ ರೈತರ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ ಇರುವ ಸಹಕಾರ ಸಂಘಗಳು ಮೇಲೆ ಜನ ನಂಬಿಕೆ ಇಟ್ಟ ಕಾರಣ ಸಂಘಗಳು ಬೆಳೆದು ನಿಂತಿವೆ. ಸಂಘದ ಕಾರ್ಯನಿರ್ವಹಕ ಅಧಿಕಾರಿ ಸಾರ್ವಜನಿಕರ ಹಣವನ್ನು ದುರ್ಬಳಿಕೆ ಮಾಡಿಕೊಂಡಿದ್ದು ನೋಡಿದರೆ ಬೇಲಿಯೆ ಎದ್ದು ಹೊಲಮೇದಂತಾಗಿದೆ ಇಂಥಹ ಅಧಿಕಾರಿಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಗ್ಗೆ ಜನರಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ.