ಧಾರ್ಮಿಕ ಹಬ್ಬಗಳನ್ನು ಸಮಾಜದ ಜೊತೆ ಬೆರೆತು ನಡೆಸಲು ಎಲ್ಲ ಭಕ್ತಾದಿಗಳ ಮುಂದಾಗಬೇಕು

ಸಂಜೆವಾಣಿ ನ್ಯೂಸ್
ಮೈಸೂರು,ಆ.26:- ಧಾರ್ಮಿಕ ದತ್ತಿ ಇಲಾಖೆ ಹಾಗೂ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ಮಹಿಳಾ ಭಕ್ತಾದಿಗಳಿಗೆ ವರಮಹಾ ಲಕ್ಷ್ಮಿ ಅಷ್ಟೋತ್ತರ ಪುಸ್ತಕ , ಅರಿಶಿನ ಕುಂಕುಮ ಮತ್ತು ಬಲೆಗಳನ್ನು ನೀಡಿ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿದ ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕಷ್ಣಮೂರ್ತಿ ರವರು ವಿತರಿಸಿ ಶುಭಕೋರಿದರು
ನಂತರ ಮಾತನಾಡಿದ ಅವರು ಸರ್ಕಾರ ಮುಜುರಾಯಿ ಸಂಬಂಧಪಟ್ಟಂಥ ದೇವಸ್ಥಾನಗಳಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಲು ಸಾರ್ವಜನಿಕರಲ್ಲಿ ಇಂತಹ ವಿಭಿನ್ನ ಧಾರ್ಮಿಕ ಕಾರ್ಯ ಮಾಡುತ್ತಿರುವ ಶ್ಲಾಘನೆಯ ರಾಜ್ಯದ ಮುಖ್ಯಮಂತ್ರಿ ಹಾಗೂ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು ,ವರಮಹಾಲಕ್ಷ್ಮಿ ದೇವಿಯು ಎಲ್ಲ ದಾರಿದ್ರ್ಯ ನೀಗುವ ದೇವರಾಗಿದ್ದು ಎಲ್ಲರ. ಮನಸ್ಸಿನ ಮತ್ತು ಬಡತನದ ದಾರಿದ್ರ್ಯ ನೀಗಲಿ,ಎಲ್ಲರ ಬಾಳಿನಲ್ಲಿ ದೇವಿಯು ಬಂದು ಆಶೀರ್ವದಿಸಲಿ ಎಂದರು.
ಹಾಗೇ ಇಂತಹ ಧಾರ್ಮಿಕ ಹಬ್ಬಗಳನ್ನು ಸಮಾಜದ ಜೊತೆ ಬೆರೆತು ನಡೆಸಲು ಎಲ್ಲ ಭಕ್ತಾದಿಗಳ ಮುಂದಾಗಬೇಕು ಎಂದು ಕರೆ ನೀಡಿದರು