ಧಾರ್ಮಿಕ ಮೌಲ್ಯಗಳನ್ನು ಬಿತ್ತಿದ ಸಿದ್ದರಾಮೇಶ್ವರ

ದೇವದುರ್ಗ,ಜ.೧೮- ಶ್ರೀಶಿವಯೋಗಿ ಸಿದ್ದರಾಮೇಶ್ವರರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವಿತವಾಧಿಯಲ್ಲಿ ಅನೇಕ ಧಾರ್ಮಿಕ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ತತ್ವಾದರ್ಶ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಯಿಂದ ಆಯೋಜಿಸಿದ್ದ, ಶ್ರೀಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಭಾನುವಾರ ಮಾತನಾಡಿದರು. ಸಮಾಜಕ್ಕೆ ವಚನಗಳ ಮೂಲಕ ಮಾನವೀಯ ನೀಡಿದ್ದಾರೆ. ಅನೇಕ ಜನಪರವಾದ ಕೆಲಸ ಮಾಡಿ, ಮಾನವರ ಬದುಕಿಗೆ ಆದರ್ಶ ಜೀವನ ಬೋಧಿಸಿದ್ದಾರೆ. ಅವರ ಸಂದೇಶಗಳು ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಶಿರಸ್ತೇದಾರ್ ರವಿಕುಮಾರ್, ಕಚೇರಿ ಸಿಬ್ಬಂದಿ ಭೀಮರಾಯ ನಾಯಕ್, ಕೃಷ್ಣಕುಮಾರ್ ದಂಡಪ್ಪ ಹಾಗೂ ಭೋವಿ ಸಮುದಾಯದ ತಾಲೂಕು ಅಧ್ಯಕ್ಷ ನಾಗರಾಜ್ ಆಲ್ಕೊಡ್, ಬಸವರಾಜ್, ಭೀಮಣ್ಣ ಕೊತ್ತದೊಡ್ಡಿ, ರೆಡ್ಡಪ್ಪ, ಸಂತೋಷ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ರಾಚಣ್ಣ ಟೇಲರ್, ಶಿವಪುತ್ರ ಉಪ್ಪಾರ್ ಇತರರಿದ್ದರು.