ಧಾರ್ಮಿಕ ಮೌಲ್ಯಗಳನ್ನು ಉಳಿಸುವುದೇ ನಮ್ಮ ಮೂಲ ಗುರಿ:ಶ್ರೀ ವಿಜಯಮಹಾಂತ ದೇವರು

ಕಲಬುರಗಿ.ಜು.11: ಗದ್ದುಗೆಮಠದ ಅಭಿವೃದ್ದಿ ಹಾಗೂ ಧರ್ಮ ಸಂಸ್ಕøತಿಯನ್ನು ಭಕ್ತರಲ್ಲಿ ಧಾರ್ಮಿಕ ಮೌಲ್ಯ ಗಳನ್ನು ಬೆಳೆಸುವುದೇ ನಮ್ಮ ಮೂಲ ಗುರಿಯಾಗಿದೆಎಂದು ಶ್ರೀ ವಿಜಯಮಹಾಂತ ದೇವರು ನುಡಿದರು.

ಅವರು ನಗರದ ಮಕ್ತಂಪೂರ ಬಡಾವಣೆಯ ಗದ್ಗುಗೆಮಠದ ಧಾರ್ಮಿಕ ಸಮಾರಂಭದಲ್ಲಿ ನೂತನ ಶ್ರೀ ಗಳು ಆಶೀರ್ವಚನದಲ್ಲಿ ಲಿಂಗೈಕ್ಕೆ ಪೂಜ್ಯ ರೇವಣಸಿದ್ದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವರ ವಿಚಾರಧಾರೆಗಳನ್ನು ಭಕ್ತ ಉದ್ಧಾರಕ್ಕಾಗಿ ಶ್ರಮಿಸುತ್ತೇನೆ, ನಮಗೆ ಯಾವುದೇ ಆಸ್ತಿ, ಅಂತಸ್ತು ಬೇಡ, ಸಮಾಜವೇ ನಮ್ಮ ಆಸ್ತಿಎಂದು ತಿಳಿದು ಬಂದಿದ್ದೇನೆ, ಮಠದ ಅಧಿಕಾರಿಯಾಗದೇ ಮಠದ ಆಧಾರ ಸ್ಥಂಭವಾಗಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಮಾಡಿಯಾಳದ ಮರಳುಸಿದ್ಧ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದರು, ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಮಾದನಹಿಪ್ಪರಗಾದ ಅಭಿನವ ಶಿವಲಿಂಗಸ್ವಾಮಿಗಳು, ಮಹಜನ ಮಠದ ಸಿದ್ಧರಾಮ ಶಿವಾಚಾರ್ಯರು, ನೀಲೂರಿನ ಶಶೀಕುಮಾರ ದೇವರು, ಬೆಳಗಾವಿಯ ಅಡಿವೇಶ್ವರ ದೇವರು, ಬಸವರಾಜ ಭೀಮಳ್ಳಿ, ಭೀಮಾಶಂಕರ ಬಿಲಗುಂದಿ, ಶಾಂತಕುಮಾರ ಬಿಲಗುಂದಿ, ಪಾಲಿಕೆಯ ಸದಸ್ಯರಾದ ವಿಜಯಕುಮಾರ ಸೇವಲಾನಿ, ಧರ್ಮಪ್ರಕಾಶ ಪಾಟೀಲ, ಶಿವಶರಣಪ್ಪ ಜೀವಣಗಿ, ರೇಣುಕಾನಂದ ಚೌದರಿ, ಶಿವಶಂಕರ ಹೊಸಗೌಡ, ಚಂದ್ರಕಾಂತ ಖೂಬಾ, ಶಿವಶರಣಪ್ಪ ಕಿಣಗಿ, ಸಂಗಪ್ಪ ಉದನೂರ, ಮಹಾರುದ್ರಪ್ಪ ಕುಂಬಾರ, ಅಣವೀರ ಕಾಳಗಿ ಇದ್ದರು. ಶರಣುಪಪ್ಪಾ ಸ್ವಾಗತಿಸಿದರು, ವಿಜಯಲಕ್ಷ್ಮೀ ಚಿಂಕ್ಕಗೊಂಡಿ ಪ್ರಾರ್ಥನಾಗೀತೆ, ಶಿವಕುಮಾರ ಸ್ವಾಮಿ ನಿರೂಪಿಸಿದರು ಶಿವಶರಣಪ್ಪ ಗೋಗಿ ವಂದನಾರ್ಪಣೆಗೈದರು.

ಶ್ರೀ ಬಸವಣ್ಣ ದೇವಸ್ಥಾನದಿಂದ ಗದ್ದುಗೆ ಮಠದವರೆಗೆ ಶ್ರೀ ವಿಜಯಮಹಾಂತ ದೇವರನ್ನು ಸಾರೋಟಿಯಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಮಠಕ್ಕೆ ಬರಬಾಡಿಕೊಳ್ಳಲಾಯಿತು. ನಂತರ ಪ್ರಸಾದ ವಿತರಿಸಲಾಯಿತು.