ಧಾರ್ಮಿಕ ಮಹತ್ವದ ಬಿಲ್ವಮರ

ಕಲಬುರಗಿ,ಸೆ 12: ಭಾರತೀಯ ಸಂಸ್ಕøತಿಯಲ್ಲಿ ಬಿಲ್ವಕ್ಕೆ ಬಹು ವಿಶೇಷ ಸ್ಥಾನವಿದೆ. ಈ ಮರದ ಎಲೆ ಶಿವನ ಪೂಜೆಗೆ ಅತ್ಯಂತ ಯೋಗ್ಯವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಇದರ ಬೇರು ತೊಗಟಿ ಎಲೆ ಹೂ ಕಾಯಿಗಳಲ್ಲಿ ಔಷಧಿಯ ಗುಣಹೊಂದಿದೆ.
ಬಿಲ್ವ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆ ಎರಡು ಭಾರಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುವದು. ಬಿಲ್ವದ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಆ ನೀರಿಂದ ಕಣ್ಣನ್ನು ತೊಳೆದರೆ ಕಣ್ಣಿನ ಉರಿ ತುರಿಕೆ ಶಮನವಾಗುವದು. ಬಿಲ್ವ ಹಣ್ಣಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ. ಪ್ರತಿದಿನ ಅದರ ಸಿಹಿ ಪಾನಕ ಕುಡಿಯುವದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಪ್ರತಿ ದಿನ ಬಿಸಿ ನೀರಿನಲ್ಲಿ ಬಿಲ್ವದ ಎಲೆಗಳನ್ನು ಹಾಕಿ ಸ್ನಾನ ಮಾಡುವದರಿಂದ ಕಜ್ಜಿ, ತುರಿಕೆ ,ಮುಂತಾದ ಚರ್ಮರೋಗ ದೂರವಾಗುತ್ತದೆ( ವಿ.ಸೂ: ಇದು ಮಾಹಿತಿಗೆ ಮಾತ್ರ. ಅಗತ್ಯ ಚಿಕಿತ್ಸೆಗೆ ವೈದ್ಯರ ಸಲಹೆ ಪಡೆದುಕೊಳ್ಳುವದು ಸೂಕ್ತ )
ಬಿಲ್ವಪತ್ರೆ:
ಶ್ರಾವಣ ಮಾಸದಲ್ಲಿ ಬಿಲ್ವಪತ್ರಿಗೆ ಬೇಡಿಕೆ ಬಹಳ. ಹಳ್ಳಿಗಳಲ್ಲಿ ಮನೆಮನೆಗೆ ಬಿಲ್ವಪತ್ರೆ ತಂದು ನೀಡುವ ಸಂಪ್ರದಾಯವಿದೆ.ಬಿಲ್ವ ಪತ್ರಿ ಗಿಡ ಈಗ ಕಡಿಮೆಯಾಗಿವೆ.ಮೊದಲು ನೂರಾರು ಬಿಲ್ವ ಪತ್ರಿ ಗಿಡಗಳ ವನವೇ ಇರುತ್ತಿದ್ದವು. ಅದಕ್ಕೆಲ್ಲ ಪತ್ರಿ ವನವೆಂದೇ ಕರೆಯುತ್ತಿದ್ದರು.